IPL 2025: ಸೋಮು ಅಂಕಲ್ ಆಗಿ RCB ಸೇರಿಕೊಂಡ 'ನಾನು ನಂದಿನಿ' ಖ್ಯಾತಿಯ ವಿಕಿಪೀಡಿಯಾ ವಿಕಾಸ್!

ಈ ಕುರಿತು ವಿಡಿಯೋ ಹಂಚಿಕೊಂಡಿರುವ ಆರ್‌ಸಿಬಿ, 'ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ?'. ಸಮಾಚಾರ ಸೋಮು-ಚಾರ ಮುಂದುವರೆಯುತ್ತದೆ ಎಂದು ಬರೆದಿದೆ.
ವಿಕಿಪೀಡಿಯಾ ವಿಕಾಸ್ - ದಿನೇಶ್ ಕಾರ್ತಿಕ್
ವಿಕಿಪೀಡಿಯಾ ವಿಕಾಸ್ - ದಿನೇಶ್ ಕಾರ್ತಿಕ್
Updated on: 

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೇವಲ ಪ್ರಾಚೈಂಸಿಯಾಗಿ ಉಳಿದುಕೊಂಡಿಲ್ಲ. ಬದಲಿಗೆ ಅಭಿಮಾನಿಗಳ ಪಾಲಿಗೆ ಅದೊಂದು ಎಮೋಷನ್. ದೇಶ ಮಾತ್ರವಲ್ಲದೆ ವಿಶ್ವದ ಬಹುತೇಕ ಕಡೆ ಆರ್‌ಸಿಬಿಗೆ ಅಭಿಮಾನಿಗಳಿದ್ದಾರೆ. ಐಪಿಎಲ್ 2025ನೇ ಆವೃತ್ತಿ ಈಗಾಗಲೇ ಆರಂಭವಾಗಿದ್ದು, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.

ಹಂಬಲ್ ಪೊಲಿಟೀಷಿಯನ್ ನೊಗರಾಜ್ ಮತ್ತು ಫ್ರೆಂಚ್ ಬಿರಿಯಾನಿ ಎಂಬ ಸಿನಿಮಾಗಳಲ್ಲಿ ಕಾಣಿಸಿಕೊಂಡು ಮೆಚ್ಚುಗೆ ಗಳಿಸಿದ ಡ್ಯಾನಿಶ್ ಸೇಠ್ ಇದೀಗ ಆರ್‌ಸಿಬಿಯ ಮಿ. ನಾಗ್ಸ್ ಆಗಿರುವುದು ಹಳೆಯ ವಿಚಾರ. ಮಿಸ್ಟರ್ ನಾಗ್ಸ್ ಇನ್‌ಸೈಡರ್ ಶೋ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಇದೀಗ ಆ ಸಾಲಿಗೆ ಸೇರಲು ಬರ್ತಿದ್ದಾರೆ ವಿಕಿಪೀಡಿಯಾ ವಿಕಾಸ್.

‘I am barbie girl’ ಎಂಬ ಇಂಗ್ಲಿಷ್ ಹಾಡಿನ ಟ್ಯೂನ್​ಗೆ ‘ನಾನು ನಂದಿನಿ ಬೆಂಗಳೂರಿಗೆ ಬಂದೀನಿ’ ಎಂಬ ಸಾಹಿತ್ಯ ರಚಿಸಿ ಹಾಡಿದ್ದು, ಸಾಕಷ್ಟು ವೈರಲ್ ಆಗಿತ್ತು ಮತ್ತು ಮೆಚ್ಚುಗೆಗೆ ಪಾತ್ರವಾಗಿತ್ತು. ಅದಾದ ಬಳಿಕ ವಿಕಾಸ್ ಹಲವಾರು ಇದೇ ರೀತಿಯ ಹಾಡುಗಳನ್ನು ರಚಿಸುವ ಮೂಲಕ ನೆಟ್ಟಿಗರಿಗೆ ಚಿರಪರಿಚಿತರಾಗಿದ್ದಾರೆ. ಇದೀಗ ಆರ್‌ಸಿಬಿ ತಂಡವನ್ನು ಸೇರಿದ್ದು ಮತ್ತಷ್ಟು ಮನರಂಜನೆ ನೀಡಲು ಬರುತ್ತಿದ್ದಾರೆ.

ಈ ಕುರಿತು ವಿಡಿಯೋ ಹಂಚಿಕೊಂಡಿರುವ ಆರ್‌ಸಿಬಿ, 'ಸೋಮು ಅಂಕಲ್ ಯಾರು? RCBಗೆ ಹೇಗೆ ಬಂದ್ರು? ಇದು ಯಾವ ಹೊಸ ಅಧ್ಯಾಯ, ಕಣ್ರೀ?'. ಸಮಾಚಾರ ಸೋಮು-ಚಾರ ಮುಂದುವರೆಯುತ್ತದೆ ಎಂದು ಬರೆದಿದೆ.

ವಿಡಿಯೋದಲ್ಲಿ ಸೋಮು ಅಂಕಲ್ ಆಗಿರುವ ವಿಕಾಸ್, ಸ್ಟೇಡಿಯಂನಲ್ಲಿ ನಿಂತು ತಂಡವನ್ನು ಹುರಿದುಂಬಿಸುತ್ತಿರುವುದನ್ನು ಕಾಣಬಹುದು. ಹಿಂದೆ ನಿಂತಿರುವ ಭದ್ರತಾ ಸಿಬ್ಬಂದಿ ಅಲ್ಲಾ ಸರ್, ಇವರು ಆರ್‌ಸಿಬಿಗೆ ಬರಲು ಯಾರ್ ಯಾರೋ ತುಂಬಾ ಕಷ್ಟ ಪಡ್ತಾರೆ. ಹೀಗಿರುವಾಗ ಇಷ್ಟು ಸುಲಭವಾಗಿ ಅಂಕಲ್ ಹೇಗೆ ಬಂದ್ರು ಅಂತ ಕೇಳ್ತಾರೆ. ಅದಕ್ಕವರು... ಮೊನ್ನೆ ಅಂಕಲ್ ಜೊತೆ ಮೀಟಿಂಗ್‌ನಲ್ಲಿ ಏನಾಯ್ತು ಅಂತ ಗೊತ್ತಿಲ್ವಾ ನಿಮಗೆ.. ಇಲ್ಲ ಏನಾಯ್ತು?

ಸಭೆ ನಡೆಯುತ್ತಿದ್ದ ಜಾಗಕ್ಕೆ ಬರುವ ಸೋಮು ಅಂಕಲ್, ನಾನು ಆರ್‌ಸಿಬಿಗೆ ಸೇರ್ಬೇಕು ಅಂತಾರೆ. ಅದಕ್ಕೆ ಅಲ್ಲಿದ್ದವರು ನಿಮಗೆ ಆರ್‌ಸಿಬಿ ಬಗ್ಗೆ ಏನು ಗೊತ್ತು ಅಂತ ಕೇಳ್ತಾರೆ. ಅದಕ್ಕೆ ಸೋಮು ಅಂಕಲ್, ನನಗೆ ಆರ್‌ಸಿಬಿ ಬಗ್ಗೆ ಎಲ್ಲ ಗೊತ್ತು. ಏನ್ ಬೇಕಾದ್ರು ಕೇಳಿ ಅಂತಾರೆ. ಆಗ ಅಲ್ಲಿದ್ದವರೆಲ್ಲರೂ RCB ಬಗ್ಗೆ ಪ್ರಶ್ನೆಗಳನ್ನು ಕೇಳ್ತಾರೆ ಅದಕ್ಕೆ ಸೋಮು ಅಂಕಲ್ ಫಟಾ ಫಟ್ ಅಂತ ಕೊಟ್ಟ ಉತ್ತರ ಕೇಳಿ ದಂಗಾಗುತ್ತಾರೆ. ಎಲ್ಲರೂ ಎದ್ದುನಿಂತು ಚಪ್ಪಾಳೆ ತಟ್ಟಿ. ವೆಲ್ ಕಮ್ ಟು ಆರ್‌ಸಿಬಿ ಅಂತಾರೆ.

ಸೋಮು ಅಂಕಲ್ ಇಷ್ಟೆಲ್ಲ ಉತ್ತರ ಕೊಟ್ಟಿದ್ದು ಹೇಗೆ ಅಂತೀರಾ... ಈ ಮೀಟಿಂಗ್ ಇದ್ದ ದಿನ ದಿನೇಶ್ ಕಾರ್ತಿಕ್ ಸೋಮು ಅಂಕಲ್‌ಗೆ ಹೇಳಿಕೊಟ್ಟಿರ್ತಾರೆ. ಬಳಿಕ ಡಿಕೆ ಸೋಮು ಅಂಕಲ್‌ಗೆ ಶುಭಾಶಯ ಕೋರಿ, ತಂಡಕ್ಕೆ ಸ್ವಾಗತಿಸುತ್ತಾರೆ.

ವಿಕಿಪೀಡಿಯಾ ವಿಕಾಸ್ - ದಿನೇಶ್ ಕಾರ್ತಿಕ್
'ನಾನು ನಂದಿನಿ ಬೆಂಗಳೂರಿಗೆ ಬಂದೀನಿ'; ರೀಲ್ಸ್​​ ಗೆ ಭಾರೀ ಮೆಚ್ಚುಗೆ; ಒಂದೇ ದಿನ 5 ಮಿಲಿಯನ್​ ವೀಕ್ಷಣೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com