

ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಇದೀಗ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಿರಂತರ ನರವೈಜ್ಞಾನಿಕ ಸಮಸ್ಯೆಗಳಿಂದಾಗಿ ಇದೀಗ ಮೆದುಳಿನ ಪಾರ್ಶ್ವವಾಯುವಿಗೆ ಒಳಗಾಗುವ ಅಪಾಯ ಹೆಚ್ಚಿದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಆರ್ಥಿಕ ನೆರವು ಸಂಗ್ರಹಿಸಲು ವಾಟ್ಸಾಪ್ ಗುಂಪನ್ನು ರಚಿಸಲಾಗಿದೆ ವಿನೋದ್ ಕಾಂಬ್ಳಿಯವರ ಆಪ್ತ ಸ್ನೇಹಿತ ಮಾರ್ಕಸ್ ಕೌಟೊ ಅವರು ದೃಢಪಡಿಸಿದರು.
'ನಾನು ಅವನ ಸ್ನೇಹಿತರನ್ನು ಒಳಗೊಂಡಂತೆ ಒಂದು ವಾಟ್ಸಾಪ್ ಗುಂಪನ್ನು ರಚಿಸಿದ್ದೇನೆ ಮತ್ತು ಹಲವರು ಅನಾಮಧೇಯವಾಗಿ ಬಹಳಷ್ಟು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಅವನ ಸ್ಮರಣಶಕ್ತಿ ಚೆನ್ನಾಗಿಲ್ಲ, ಆದರೆ ಕಳೆದ ಆರು ತಿಂಗಳುಗಳಲ್ಲಿ ಅದು ಕ್ಷೀಣಿಸಿಲ್ಲ. ಅವರಿಗೆ ಹೆಚ್ಚು ನೆನಪಿಲ್ಲ. ಆದರೆ, ಏನಾದರೂ ಕ್ಲಿಕ್ ಮಾಡಿದಾಗ, ಅವಕಿಗೆ ನೆನಪಾಗುತ್ತದೆ. ಇಲ್ಲದಿದ್ದರೆ, ಅದು ಕಷ್ಟಕರವಾಗುತ್ತದೆ' ಎಂದು ಮಾರ್ಕಸ್ ಕೌಟೊ ಹೇಳಿದರು.
ಕಾಂಬ್ಳಿ ಧೂಮಪಾನ ಅಭ್ಯಾಸದಿಂದ ಉಂಟಾಗುವ ನರವೈಜ್ಞಾನಿಕ ಹಾನಿಯ ಬಗ್ಗೆಯೂ ಕೌಟೊ ಗಂಭೀರ ಕಳವಳ ವ್ಯಕ್ತಪಡಿಸಿದರು. ಮಾಜಿ ಕ್ರಿಕೆಟಿಗ ಇದೀಗ ಮದ್ಯಪಾನ ತ್ಯಜಿಸಿದ್ದರೂ, ದಾರಿಹೋಕರಿಂದ, ವಿಶೇಷವಾಗಿ ಆಟೋ ಚಾಲಕರಿಂದ ಸಿಗರೇಟ್ ಕೇಳುತ್ತಾರೆ. ಇದು ಅವರ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತಿದೆ ಎಂದು ಅವರು ಹೇಳಿದರು.
'ವಿನೋದ್ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದೆ. ಅವರು ಮೊದಲೇ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿಲ್ಲದ ಕಾರಣ ಅದನ್ನು ತೆಗೆದುಹಾಕಲು ಸಾಧ್ಯವಿಲ್ಲ. ಇದರಿಂದಾಗಿ ಅವರಿಗೆ ಹಠಾತ್ ಮಿದುಳಿನ ಪಾರ್ಶ್ವವಾಯು ಉಂಟಾಗುವ ಅಪಾಯ ಹೆಚ್ಚಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಇದರ ಹೊರತಾಗಿಯೂ, ಅವರು ಉಳಿಯಲು ಮತ್ತು ಅವರ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ಶ್ರಮಿಸುತ್ತಿದ್ದಾರೆ' ಎಂದರು.
'ಕೆಲವೊಮ್ಮೆ ಅವರು ಕೆಳಗೆ ಹೋದಾಗ, ಆಟೋ ಚಾಲಕರಿಂದ ಸಿಗರೇಟ್ ಕೇಳುತ್ತಿದ್ದಾರೆ ಮತ್ತು ಅವರು 'ವಿನೋದ್ ಕಾಂಬ್ಳಿ'ಗೆ ಸಹಾಯ ಮಾಡುತ್ತಿದ್ದೇವೆ ಭಾವಿಸಿ ಸಂತೋಷದಿಂದ ಕೊಡುತ್ತಿದ್ದಾರೆ. ಆದರೆ, ಅದರಿಂದಾಗುವ ಹಾನಿ ಬಗ್ಗೆ ಅವರಿಗೆ ತಿಳಿದಿರುವುದಿಲ್ಲ. ಅದು ಈಗ ಅವರ ಹೃದಯ, ಯಕೃತ್ತು ಅಥವಾ ಮೂತ್ರಪಿಂಡಕ್ಕೆ ಅಲ್ಲ; ಅದು ಅವರ ಮೆದುಳಿಗೆ ಹಾನಿಯುಂಟುಮಾಡುತ್ತಿದೆ' ಎಂದು ಅವರು ಹೇಳಿದರು.
ಕಾಂಬ್ಳಿ ಈಗ ತಮ್ಮ ಹೆಚ್ಚಿನ ಸಮಯವನ್ನು ತಮ್ಮ ಕುಟುಂಬದೊಂದಿಗೆ ಮನೆಯಲ್ಲಿ ಕಳೆಯುತ್ತಾರೆ. ಅವರ ಪತ್ನಿ ಆಂಡ್ರಿಯಾ ಕೆಲವೊಮ್ಮೆ ಅವರನ್ನು ಥಾಣೆಯಲ್ಲಿರುವ ಆರೈಕೆ ಕೇಂದ್ರಗಳಿಗೆ ಕರೆದೊಯ್ಯುತ್ತಾರೆ. ಟಿವಿ ಕಾರ್ಯಕ್ರಮಗಳನ್ನು ನೋಡುವುದು ಅವರಿಗೆ ಕಷ್ಟವಾಗುತ್ತದೆ. ಆದರೆ, ಮಕ್ಕಳೊಂದಿಗೆ ಸಮಯ ಕಳೆಯುವುದನ್ನು ಆನಂದಿಸುತ್ತಾರೆ.
ನೆನಪಿನ ಸಮಸ್ಯೆಗಳಿಂದಾಗಿ ಕೆಲವೊಮ್ಮೆ ಔಷಧಿಗಳನ್ನು ತಪ್ಪಿಸುತ್ತಿದ್ದರೂ, ಕಾಂಬ್ಳಿ ಉತ್ತಮ ದೈಹಿಕ ಸುಧಾರಣೆಯನ್ನು ತೋರಿಸಿದ್ದಾರೆ. ಅವರ ನಡಿಗೆ ಸುಧಾರಿಸಿದೆ ಮತ್ತು ಅವರು ಇತ್ತೀಚೆಗೆ ಒಂದು ಜಾಹೀರಾತು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷದ ಕೊನೆಯಲ್ಲಿ ಅವರು ದೂರದರ್ಶನದಲ್ಲಿ ಕಾಣಿಸಿಕೊಳ್ಳುವ ಆಶಯವನ್ನೂ ಹೊಂದಿದ್ದಾರೆ.
Advertisement