'ಇಂದಿಗೂ ನಾನು ಪ್ರತಿ ಪಂದ್ಯಕ್ಕೆ ಮುನ್ನ ಕಾರ್ಟೂನ್ ನೋಡುತ್ತೇನೆ, ಅದು ನನ್ನ ಅಭ್ಯಾಸ, ಆದರೆ ಆಟದ ಮೇಲೂ ಗಮನ ಇರುತ್ತದೆ': ವೈಭವ್ ಸೂರ್ಯವಂಶಿ-Video

ಕಡಿಮೆ ಬಾಲ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ವೇಗದ ಆಟಗಾರನಾಗಿಯೂ ಹೊರಹೊಮ್ಮಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ.
Vaibhav Suryavamshi
ವೈಭವ್ ಸೂರ್ಯವಂಶಿ
Updated on

ರಾಜಸ್ಥಾನ್ ರಾಯಲ್ಸ್‌ ತಂಡದ ಯುವ ಪ್ರತಿಭೆ ವೈಭವ್ ಸೂರ್ಯವಂಶಿ ಐಪಿಎಲ್ 2026ರಲ್ಲಿ ಲಖ್ನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಮತ್ತೊಂದು ದಾಖಲೆ ಸಾಧನೆ ಮಾಡಿದ್ದಾರೆ. 15 ವರ್ಷದ ಈ ಆಟಗಾರ ಕೇವಲ 8 ರನ್ ಗಳಿಸಿದರೂ, ಐಪಿಎಲ್‌ನಲ್ಲಿ 500 ರನ್ ಗಳಿಸಿದ ಅತಿ ಕಿರಿಯ ಕ್ರಿಕೆಟಿಗ ಎಂಬ ದಾಖಲೆಯನ್ನು ನಿರ್ಮಿಸಿದ್ದಾರೆ.

ಜೊತೆಗೆ, ಕಡಿಮೆ ಬಾಲ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ವೇಗದ ಆಟಗಾರನಾಗಿಯೂ ಹೊರಹೊಮ್ಮಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಕೇವಲ 227 ಬಾಲ್‌ಗಳಲ್ಲಿ ಈ ಸಾಧನೆ ಮಾಡಿ, ಗ್ಲೆನ್ ಮ್ಯಾಕ್ಸ್‌ವೆಲ್ ಹೊಂದಿದ್ದ ಹಿಂದಿನ ದಾಖಲೆಯನ್ನು ಮೀರಿ, ಅತ್ಯಂತ ವೇಗವಾಗಿ ಈ ಮೈಲಿಗಲ್ಲು ತಲುಪಿದ ಆಟಗಾರನಾಗಿದ್ದಾರೆ.

ಪಂದ್ಯ ಬಳಿಕ ಸ್ಟಾರ್ ಸ್ಪೋರ್ಟ್ಸ್ ಜೊತೆ ನಡೆದ ಮಾತುಕತೆಯಲ್ಲಿ, ಈ ಯುವ ಆಟಗಾರ ತನ್ನ ಸರಳ ಸ್ವಭಾವವನ್ನು ಯಾವುದೇ ಮುಚ್ಚುಮರೆ ಇಲ್ಲದೆ ಸಾಧಾಸೀದವಾಗಿ ಎಲ್ಲರ ಮುಂದೆ ಹೇಳಿಕೊಂಡಿರುವುದು ಭಾರೀ ವೈರಲ್ ಆಗಿದೆ.

ನನ್ನ ಮನಸ್ಸು ಸ್ಪಷ್ಟವಾಗಿದೆ. ಇಂದಿಗೂ ಪ್ರತಿಯೊಂದು ಪಂದ್ಯಕ್ಕೂ ಮೊದಲು ನಾನು ಕಾರ್ಟೂನ್ ನೋಡುತ್ತೇನೆ. ಅದು ನನ್ನ ಅಭ್ಯಾಸ. ಆದರೆ ಆಟದ ಮೇಲೂ ನನ್ನ ಗಮನ ಇರುತ್ತದೆ ಎಂದು ಹೇಳಿದ್ದಾರೆ.

ಸೂರ್ಯವಂಶಿಯ ಈ ನಿಷ್ಕಪಟ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಬಾಲ್ಯದ ಅಭ್ಯಾಸ ಮತ್ತು ಕ್ರೀಡಾ ಖ್ಯಾತಿಯ ನಡುವೆ ಸಮತೋಲನ ಸಾಧಿಸುವ ಯುವ ಆಟಗಾರನ ಬಗ್ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮುಂದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೇನೆ. ನಾವು ಗೆದ್ದು 2 ಪಾಯಿಂಟ್‌ಗಳನ್ನು ಪಡೆದಿದ್ದೇವೆ, ಪ್ಲೇಆಫ್ ಕಡೆಗೆ ಸಾಗುತ್ತೇವೆ ಎಂದು ವೈಭವ್ ಸೂರ್ಯವಂಶಿ ವಿಶ್ವಾಸ ವ್ಯಕ್ತಪಡಿಸಿದರು.

ಐಪಿಎಲ್ 2026ರಲ್ಲಿ ದಾಖಲೆಯ ಪ್ರದರ್ಶನಗಳಿಂದ ಮೆರೆದರೂ, ಮೈದಾನದ ಹೊರಗೆ ವೈಭವ್ ಸೂರ್ಯವಂಶಿ ಇನ್ನೂ 15 ವರ್ಷದ ಸಾಮಾನ್ಯ ಬಾಲಕನಾಗಿಯೇ ಉಳಿದಿದ್ದಾರೆ. ಈ ಸೀಸನ್‌ನಲ್ಲಿ 254 ರನ್‌ಗಳೊಂದಿಗೆ ವೈಭವ್ ಸೂರ್ಯವಂಶಿ ಇನ್ನೂ ರಾಜಸ್ಥಾನ್ ರಾಯಲ್ಸ್‌ನ ಅಗ್ರ ರನ್ ಸ್ಕೋರರ್ ಆಗಿದ್ದಾರೆ. ಅವರ ಪ್ರಭಾವವು ವೇಗದ ಇನಿಂಗ್ಸ್‌ಗಳಿಂದ ನಿರ್ಧರಿತವಾಗಿದ್ದು, ಕೇವಲ 15 ಬಾಲ್‌ಗಳಲ್ಲಿ ಎರಡು ಅರ್ಧಶತಕಗಳನ್ನು ಗಳಿಸಿರುವುದು ಅವರನ್ನು ಐಪಿಎಲ್ ಇತಿಹಾಸದ ಅತ್ಯಂತ ವೇಗದ ಆಟಗಾರರ ಸಾಲಿನಲ್ಲಿ ನಿಲ್ಲಿಸಿದೆ.

ಐಪಿಎಲ್ 2026ರಲ್ಲಿ ಸೂರ್ಯವಂಶಿಯ ಪ್ರದರ್ಶನ ಹೇಗಿದೆ?
ಸೂರ್ಯವಂಶಿ ಈ ಸೀಸನ್ ನ್ನು ಅದ್ಭುತವಾಗಿ ಆರಂಭಿಸಿ, ಟೂರ್ನಿಯ ಅತ್ಯಂತ ಉತ್ಸಾಹಭರಿತ ಯುವ ಪ್ರತಿಭೆಗಳಲ್ಲೊಬ್ಬನಾಗಿ ತಾನು ಗುರುತಿಸಿಕೊಂಡಿದ್ದಾರೆ. ಕಳೆದ ಮೂರು ಪಂದ್ಯಗಳಲ್ಲಿ ಸ್ವಲ್ಪ ಕುಸಿತ ಕಂಡುಬಂದಿದ್ದು, ಸನ್‌ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಖ್ನೌ ಸೂಪರ್ ಜೈಂಟ್ಸ್ ವಿರುದ್ಧ ಕ್ರಮವಾಗಿ 0, 48 ಮತ್ತು 8 ರನ್‌ಗಳನ್ನು ಗಳಿಸಿದ್ದಾರೆ.

ಈ ಮೂರು ಪಂದ್ಯಗಳಲ್ಲಿ ಮೊದಲ ಎರಡು ಪಂದ್ಯಗಳನ್ನು ರಾಜಸ್ಥಾನ್ ರಾಯಲ್ಸ್ ಸೋತಿದ್ದು, ಆರಂಭದಲ್ಲಿ ಅವರ ಕೊಡುಗೆ ತಂಡಕ್ಕೆ ಎಷ್ಟು ಮುಖ್ಯವಾಗಿತ್ತೆಂಬುದನ್ನು ತೋರಿಸುತ್ತದೆ.

ಒಟ್ಟಾರೆ, 15 ವರ್ಷದ ಈ ಆಟಗಾರ ಏಳು ಪಂದ್ಯಗಳಲ್ಲಿ 254 ರನ್‌ಗಳನ್ನು 220.87 ಸ್ಟ್ರೈಕ್ ರೇಟ್ ಮತ್ತು 36.29 ಸರಾಸರಿಯಲ್ಲಿ ಗಳಿಸಿದ್ದಾರೆ. ಇನಿಂಗ್ಸ್ ಆರಂಭದಲ್ಲೇ ಬೌಲರ್‌ಗಳ ಮೇಲೆ ದಾಳಿ ಮಾಡುವ ಅವರ ಸಾಮರ್ಥ್ಯ ರಾಜಸ್ಥಾನ್ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com