T20 World Cup 2026: ಪ್ರಬಲ ಆಸ್ಟ್ರೇಲಿಯಾಗೆ ಭಾರಿ ಆಘಾತ, Josh Hazlewood ಔಟ್, 15 ವರ್ಷ ಬಳಿಕ 'Big 3 era' ಮುಕ್ತಾಯ!

ಈಗಾಗಲೇ ಆಸ್ಟ್ರೇಲಿಯಾ ತಂಡದಿಂದ ಹಿರಿಯ ವೇಗಿ ಹಾಗೂ ಮಾಜಿ ನಾಯಕ ಪ್ಯಾಟ್ ಕಮಿನ್ಸ್ ಗಾಯಗೊಂಡಿದ್ದರೆ, ಮಿಚೆಲ್ ಸ್ಟಾರ್ಕ್ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
Josh Hazlewood
ಜಾಶ್ ಹೇಜಲ್ವುಡ್
Updated on

ಸಿಡ್ನಿ: ತೀವ್ರ ಕುತೂಹಲ ಕೆರಳಿಸಿರುವ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದಾಗಿರುವ ಆಸ್ಟ್ರೇಲಿಯಾಗೆ ಮರ್ಮಾಘಾತ ಎದುರಾಗಿದ್ದು ಮತ್ತೋರ್ವ ಪ್ರಮುಖ ಆಟಗಾರ ತಂಡದಿಂದ ಹೊರಗುಳಿಯುವಂತಾಗಿದೆ.

ಹೌದು.. ಈಗಾಗಲೇ ಆಸ್ಟ್ರೇಲಿಯಾ ತಂಡದಿಂದ ಹಿರಿಯ ವೇಗಿ ಹಾಗೂ ಮಾಜಿ ನಾಯಕ ಪ್ಯಾಟ್ ಕಮಿನ್ಸ್ ಗಾಯಗೊಂಡಿದ್ದರೆ, ಮಿಚೆಲ್ ಸ್ಟಾರ್ಕ್ ಟಿ20 ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.

ಇದೀಗ ಈ ಪಟ್ಟಿಗೆ ಮತ್ತೋರ್ವ ಆಲ್ ರೌಂಡರ್ ಜೋಶ್ ಹೇಜಲ್ವುಡ್ ಕೂಡ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ.

ಈ ಹಿಂದೆ ಬಿಗ್ ಬ್ಯಾಶ್ ಲೀಗ್ ಟೂರ್ನಿಯಲ್ಲಿ ಗಾಯಗೊಂಡಿದ್ದ ಜಾಶ್ ಹೇಜಲ್ವುಡ್ ಈ ವರೆಗೂ ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ. ಮಂಡಿರಜ್ಜು ಸಮಸ್ಯೆಗೆ ತುತ್ತಾಗಿದ್ದ ಹೇಜಲ್ ವುಡ್ ಫಿಟ್ನೆಸ್ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಾಧ್ಯವಾಗದ ಕಾರಣ ಇಡೀ ಪಂದ್ಯಾವಳಿಯಿಂದ ಹೊರಗುಳಿಯುವಂತಾಗಿದೆ.

ಈ ಹಿಂದೆ, ನಾಯಕ ಪ್ಯಾಟ್ ಕಮಿನ್ಸ್ ಕೂಡ ಗಾಯದಿಂದಾಗಿ ಸ್ಪರ್ಧೆಯಿಂದ ಹೊರಗುಳಿದಿದ್ದು, ಇದು ಆಸ್ಟ್ರೇಲಿಯಾಕ್ಕೆ ಭಾರಿ ಹೊಡೆತವನ್ನು ನೀಡಿದೆ. ಹ್ಯಾಝಲ್ವುಡ್ ಅವರ ಫಿಟ್ನೆಸ್ ಕಳೆದ ಕೆಲವು ತಿಂಗಳುಗಳಿಂದ ಆಘಾತದ ಸ್ಥಿತಿಯಲ್ಲೇ ಇತ್ತು.

Josh Hazlewood
WPL 2026 Final: RCBಯ ರಾಧಾ ಯಾದವ್ ಹಿಟ್ ವಿಕೆಟ್ ವಿವಾದ, ಇಷ್ಟಕ್ಕೂ ಆಗಿದ್ದೇನು? ಅಂಪೈರ್ ಯಾಕೆ ಔಟ್ ನೀಡಲಿಲ್ಲ?

ಬಿಗ್ 3 ಎರಾ ಅಂತ್ಯ

ಜಾಶ್ ಹೇಜಲ್ವುಡ್ ಹೊರಗುಳಿಯುವುದರೊಂದಿಗೆ ಆಸ್ಟ್ರೇಲಿಯಾದ ಬೌಲಿಂದ್ ವಿಭಾಗಕ್ಕೆ ಮರ್ಮಾಘಾತ ಎದುರಾಗಿದ್ದು, ಇದರೊಂದಿಗೆ ಆಸ್ಟ್ರೇಲಿಯಾ ಬಿಗ್ 3 ಎರಾ ಅಂತ್ಯವಾದಂತಾಗಿದೆ.

ಕಳೆದ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾ ತಂಡ ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್ ಮತ್ತು ಜಾಶ್ ಹೇಜಲ್ವುಡ್ ಇಲ್ಲದೇ ಐಸಿಸಿ ಟೂರ್ನಿಯಲ್ಲಿ ಪಾಲ್ಗೊಳ್ಳುವಂತಾಗಿದೆ.

ಹ್ಯಾಝಲ್ವುಡ್ ಈ ಸ್ವರೂಪದಲ್ಲಿ ಆಸ್ಟ್ರೇಲಿಯಾದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದು, ಟಿ 20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 79 ವಿಕೆಟ್ಗಳನ್ನು ಪಡೆದಿದ್ದಾರೆ. ಅವರು 2021 ರ ಟಿ 20 ವಿಶ್ವಕಪ್ನಲ್ಲಿ 11 ವಿಕೆಟ್ಗಳನ್ನು ಪಡೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com