

ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಿಯ ಸೂಪರ್-08 ಹಂತದ ಪಂದ್ಯದಲ್ಲಿ ಭಾರತಕ್ಕೆ 188 ರನ್ ಗಳ ಬಿಗ್ ಟಾರ್ಗೆಟ್ ನ್ನು ದಕ್ಷಿಣ ಆಫ್ರಿಕಾ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 187 ರನ್ ಗಳ ಬೃಹತ್ ರನ್ ಗಳಿಸಿತು.
ದಕ್ಷಿಣ ಆಫ್ರಿಕಾ ಪರ ಆರಂಭಿಕ ಆಟಗಾರರಾದ ಏಡೆನ್ ಮಾಕ್ರಾಮ್ 4, ಕ್ವಿಂಟಾನ್ ಡಿ ಕಾಕ್ ಹಾಗೂ ರಿಯಾನ್ ರೆಕೆಲ್ಟನ್ ಅವರನ್ನು ಕೇವಲ 7 ರನ್ ಗಳಿಗೆ ಫೆವಿಲಿಯನ್ ಗೆ ಅಟ್ಟುವಲ್ಲಿ ಟೀಂ ಇಂಡಿಯಾ ಬೌಲರ್ ಗಳು ಯಶಸ್ವಿಯಾದರು.
ಆದರೆ, ಡಿ. ಬ್ರೀವಿಸ್ 45 ಮತ್ತು ಡೇವಿಡ್ ಮಿಲ್ಲರ್ 63 ರನ್ ಗಳಿಸುವುದರೊಂದಿಗೆ ಭಾರತದ ಬೌಲರ್ ಗಳನ್ನು ಬೆಂಡತ್ತಿದರು. ಬಳಿಕ ಬಂದ ತ್ರಿಸ್ಟಾನ್ ಸ್ಟಾಬ್ಸ್ ಕೂಡಾ ಅಜೇಯ 44 ರನ್ ಗಳಿಸುವುದರೊಂದಿಗೆ ದಕ್ಷಿಣ ಆಫ್ರಿಕಾದ ರನ್ ವೇಗವನ್ನು ಹೆಚ್ಚಿಸಿದರು.
ಭಾರತದ ಪರ ಬೂಮ್ರಾ 3 ವಿಕೆಟ್ ಪಡೆದರೆ, ಅರ್ಶ್ ದೀಪ್ ಸಿಂಗ್ 2, ವರುಣ್ ಚಕ್ರವರ್ತಿ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಪಡೆದುಕೊಂಡರು.
Advertisement