'ಅತ್ಯಾಚಾರ ಬೆದರಿಕೆ, ಬಾಡಿ ಶೇಮಿಂಗ್': ಡೇವಿಡ್ ಮಿಲ್ಲರ್ ಜೊತೆಗಿನ ವಿಡಿಯೋ ವೈರಲ್; ಸೋಶಿಯಲ್ ಮೀಡಿಯಾ ಪ್ರಭಾವಿಗೆ ಸಂಕಷ್ಟ

ವಿಡಿಯೋ ಇನ್ನೂ ಪಾರಿಖ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿದೆ. ಈ ಬೆದರಿಕೆಗಳ ಕುರಿತು ಪೊಲೀಸರಿಗೆ ದೂರು ದಾಖಲಿಸುವುದಾಗಿಯೂ ಪಾರಿಖ್ ಹೇಳಿದ್ದಾರೆ.
David Miller with social media influencer RJ Princy Parikh
ಡೇವಿಡ್ ಮಿಲ್ಲರ್ ಜೊತೆ ಸಾಮಾಜಿಕ ಮಾಧ್ಯಮ ಪ್ರಭಾವಿ ಆರ್‌ಜೆ ಪ್ರಿನ್ಸಿ ಪಾರಿಖ್
Updated on

2026ರ ಟಿ20 ವಿಶ್ವಕಪ್‌ನ ಸೂಪರ್ 8 ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 76 ರನ್‌ಗಳ ಸೋಲಿನ ನಂತರ, ಸಾಮಾಜಿಕ ಮಾಧ್ಯಮ ಪ್ರಭಾವಿ ಆರ್‌ಜೆ ಪ್ರಿನ್ಸಿ ಪಾರಿಖ್ ಮತ್ತು ಡೇವಿಡ್ ಮಿಲ್ಲರ್ ಅವರ ರೀಲ್ ವೈರಲ್ ಆಗಿತ್ತು. ಮಿಲ್ಲರ್ 35 ಎಸೆತಗಳಲ್ಲಿ 63 ರನ್ ಗಳಿಸುವ ಮೂಲಕ ದಕ್ಷಿಣ ಆಫ್ರಿಕಾ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಪ್ರೋಟಿಯಸ್ 20 ಓವರ್‌ಗಳಲ್ಲಿ 187/7 ರನ್ ಗಳಿಸಿತು. ಅಹಮದಾಬಾದ್‌ನಲ್ಲಿ ನಡೆದ ಪಂದ್ಯದ ನಂತರ, ಪಾರಿಖ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ 'ಡೇವಿಡ್ ಮಿಲ್ಲರ್! ಎಂತಹ ಆಟಗಾರ' ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿ, ಪಾರಿಖ್ ಅವರು ಚಪ್ಪಾಳೆ ತಟ್ಟುತ್ತಾ ಮಿಲ್ಲರ್ ಅವರನ್ನು ಸುತ್ತುಹಾಕಿದ್ದಾರೆ.

ಈಗ, ಪಾರಿಖ್ ತನಗೆ ಅತ್ಯಾಚಾರ ಬೆದರಿಕೆಗಳು ಬಂದಿವೆ ಮತ್ತು ರೀಲ್ ಬಿಡುಗಡೆಯಾದ ನಂತರ ಬಾಡಿ ಶೇಮಿಂಗ್ ಕೂಡ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದರ ಪರಿಣಾಮವಾಗಿ, ಫೇಸ್‌ಬುಕ್ ಖಾತೆಯಿಂದ ರೀಲ್ ಅನ್ನು ಡಿಲೀಟ್ ಮಾಡಿದ್ದೇನೆ. ವಿಡಿಯೋ ಇನ್ನೂ ಪಾರಿಖ್ ಅವರ ಇನ್‌ಸ್ಟಾಗ್ರಾಂ ಖಾತೆಯಲ್ಲಿದೆ. ಈ ಬೆದರಿಕೆಗಳ ಕುರಿತು ಪೊಲೀಸರಿಗೆ ದೂರು ದಾಖಲಿಸುವುದಾಗಿಯೂ ಪಾರಿಖ್ ಹೇಳಿದ್ದಾರೆ.

ಈಮಧ್ಯೆ, ಐಸಿಸಿ ಪುರುಷರ ಟಿ20 ವಿಶ್ವಕಪ್‌ನ ಸೂಪರ್ 8 ಹಂತದಲ್ಲಿ ಭಾರತದ ವಿರುದ್ಧ ಜಯಗಳಿಸಿದ ನಂತರ ಒತ್ತಡದಲ್ಲಿಯೂ ದಕ್ಷಿಣ ಆಫ್ರಿಕಾ ತೋರಿಸಿದ ಶಾಂತತೆಯನ್ನು ಭಾರತದ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಶ್ಲಾಘಿಸಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಪಠಾಣ್, ಮೂರು ಆರಂಭಿಕ ವಿಕೆಟ್‌ಗಳನ್ನು ಕಳೆದುಕೊಂಡ ನಂತರ ಪ್ರೋಟಿಯಸ್ ಹೇಗೆ ಚೇತರಿಸಿಕೊಂಡಿತು ಎಂಬುದರ ಬಗ್ಗೆ ಮಾತನಾಡಿದ್ದಾರೆ. ಡೇವಿಡ್ ಮಿಲ್ಲರ್ ಮತ್ತು ಡೆವಾಲ್ಡ್ ಬ್ರೆವಿಸ್ ಅವರ ಪಂದ್ಯ ಗೆಲ್ಲುವ ಕೊಡುಗೆಗಳನ್ನು ಎತ್ತಿ ತೋರಿಸಿದ್ದಾರೆ. ಅಲ್ಲದೆ ವೇಗಿ ಜಸ್ಪ್ರೀತ್ ಬುಮ್ರಾ ಅವರ ಪ್ರಭಾವಶಾಲಿ ಸ್ಪೆಲ್‌ಗೆ ಜೈ ಎಂದಿದ್ದಾರೆ.

David Miller with social media influencer RJ Princy Parikh
T20 World Cup 2026: 'ಭಾರತ ಅದ್ಭುತ ತಂಡ ಆದರೆ...'; ಪ್ರೋಟಿಯಸ್‌ನ ಅನುಭವಿ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್

'ದಕ್ಷಿಣ ಆಫ್ರಿಕಾ ಆರಂಭದಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು. ಬುಮ್ರಾ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದರು. ನಂತರ ಮಿಲ್ಲರ್ ತಮ್ಮ ಅನುಭವವನ್ನು ತೋರಿಸಿದರು. ಆರು ವಿಶ್ವಕಪ್‌ಗಳನ್ನು ಆಡಿರುವ ಅವರು, ವಿಶ್ವಕಪ್ ಫೈನಲ್‌ನಲ್ಲಿ ತಪ್ಪಿಸಿಕೊಂಡ ನಂತರ ಅಹಮದಾಬಾದ್‌ನಲ್ಲಿ ಈ ದೊಡ್ಡ ಕ್ರೀಡಾಂಗಣದಲ್ಲಿ ಮತ್ತೆ ಆಡಬೇಕೆಂದು ಬಯಸಿದ್ದರು. ತಂಡಕ್ಕೆ ಅವರ ಅಗತ್ಯವಿದ್ದ ಸಮಯದಲ್ಲಿ ಅರ್ಧಶತಕದ ಇನಿಂಗ್ಸ್‌ನೊಂದಿಗೆ ಅವರು ಅದನ್ನು ಮಾಡಿದರು' ಎಂದು ಪಠಾಣ್ ಹೇಳಿದರು.

ಮಿಲ್ಲರ್ ಅವರ ಅರ್ಧಶತಕವು ದಕ್ಷಿಣ ಆಫ್ರಿಕಾದ ಇನಿಂಗ್ಸ್ ಅನ್ನು ನಿರ್ಣಾಯಕ ಹಂತದಲ್ಲಿ ಸ್ಥಿರಗೊಳಿಸಿತು. ಆರಂಭಿಕ ಹಿನ್ನಡೆಗಳ ನಂತರ ಪಂದ್ಯವನ್ನು ಪ್ರೋಟಿಯಸ್ ಪರವಾಗಿ ತಿರುಗಿಸಿತು.

'ಬ್ರೆವಿಸ್ ಅವರ 45 ರನ್‌ಗಳ ಇನಿಂಗ್ಸ್ ನಿರ್ಣಾಯಕವಾಗಿತ್ತು. ಆ ಪಾಲುದಾರಿಕೆ ಇಲ್ಲದಿದ್ದರೆ, ದಕ್ಷಿಣ ಆಫ್ರಿಕಾ ಪಂದ್ಯವನ್ನು ಗೆಲ್ಲುತ್ತಿರಲಿಲ್ಲ. ಅದು ತುಂಬಾ ಪ್ರಬುದ್ಧ ಇನಿಂಗ್ಸ್ ಆಗಿತ್ತು. ಮೊದಲಿಗೆ, ಮೂರು ವಿಕೆಟ್‌ಗಳು ಬಿದ್ದಾಗ, ಅವರು ಎಚ್ಚರಿಕೆಯಿಂದ ಆಡಿದರು. ಸಾಮಾನ್ಯವಾಗಿ, ಬ್ರೆವಿಸ್ ಬಂದ ತಕ್ಷಣ ದೊಡ್ಡ ಹೊಡೆತಗಳನ್ನು ಆಡುತ್ತಿದ್ದರು. ಆದರೆ, 180ರ ಸ್ಟ್ರೈಕ್ ರೇಟ್‌ನಲ್ಲಿ ಆಡುವ ಬ್ಯಾಟ್ಸ್‌ಮನ್ ಆಗಿ, ಅವರು ಆರಂಭದಲ್ಲಿ ಸ್ವಲ್ಪ ಸಮಯ ತೆಗೆದುಕೊಂಡರು. ಜೊತೆಯಾಟ ನಿರ್ಮಿಸಿದರು ಮತ್ತು ಆ ಜೊತೆಯಾಟ ದಕ್ಷಿಣ ಆಫ್ರಿಕಾಕ್ಕೆ ಹೆಚ್ಚು ಅಗತ್ಯವಿರುವ ಸ್ಥಿರತೆಯನ್ನು ನೀಡಿತು' ಎಂದು ಅವರು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com