Cricket: ಸಚಿನ್ ಅಲ್ಲ.. ಸೂರ್ಯವಂಶಿ ಅಲ್ಲವೇ ಅಲ್ಲ.. ಐತಿಹಾಸಿಕ ಪದಾರ್ಪಣೆ ಹೊರತಾಗಿಯೂ ಈ ಆಟಗಾರನ ದಾಖಲೆ ಮುರಿಯುವಲ್ಲಿ ವಿಫಲ!

ವೈಭವ್ ಸೂರ್ಯವಂಶಿ ಭಾರತ ಪರ ಪದಾರ್ಪಣೆ ಮಾಡುವ ಮೂಲಕ ಭಾರತದ ಪುರುಷರ ತಂಡದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ.
Vaibhav Sooryavanshi
ವೈಭವ್ ಸೂರ್ಯವಂಶಿ
Updated on

ಮ್ಯಾಂಚೆಸ್ಟರ್: ಕೇವಲ 15 ವರ್ಷ 99 ದಿನಗಳ ವಯಸ್ಸಿನಲ್ಲಿ ಭಾರತ ಹಿರಿಯ ಪುರುಷರ ತಂಡದ ಪರ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ ಐತಿಹಾಸಿಕ ಸಾಧನೆ ಮಾಡಿದ್ದರೂ, ಅವರು ವಿಶ್ವದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗ ಅಲ್ಲ.

ಅಚ್ಚರಿಯಾದರೂ ಇದು ಸತ್ಯ.. ವೈಭವ್ ಸೂರ್ಯವಂಶಿ ಭಾರತ ಪರ ಪದಾರ್ಪಣೆ ಮಾಡುವ ಮೂಲಕ ಭಾರತದ ಪುರುಷರ ತಂಡದ ಪರ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೊಸ ದಾಖಲೆಯನ್ನು ನಿರ್ಮಿಸಿದ್ದಾರೆ. ಈ ಮೂಲಕ 1989ರಲ್ಲಿ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಭಾರತ ಪರ ಪದಾರ್ಪಣೆ ಮಾಡಿದ್ದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ದೀರ್ಘಕಾಲದ ದಾಖಲೆಯನ್ನು ಅವರು ಮುರಿದಿದ್ದಾರೆ.

ಇದಲ್ಲದೆ, 15 ವರ್ಷ 239 ದಿನಗಳ ವಯಸ್ಸಿನಲ್ಲಿ ಭಾರತ ಮಹಿಳಾ ತಂಡದ ಪರ ಪದಾರ್ಪಣೆ ಮಾಡಿದ್ದ ಶೆಫಾಲಿ ವರ್ಮಾ ಅವರಿಗಿಂತಲೂ ಕಡಿಮೆ ವಯಸ್ಸಿನಲ್ಲಿ ಹಿರಿಯ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರ ಎಂಬ ಹೆಗ್ಗಳಿಕೆಯನ್ನೂ ವೈಭವ್ ತಮ್ಮದಾಗಿಸಿಕೊಂಡಿದ್ದಾರೆ.

Vaibhav Sooryavanshi
2nd T20: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; Vaibhav Sooryavanshi ಪದಾರ್ಪಣೆ; ಸಚಿನ್ ದಾಖಲೆ ಧ್ವಂಸ!

ವಿಶ್ವದ ಕಿರಿಯ ಆಟಗಾರನಲ್ಲ!

ಆದರೆ, ವಿಶ್ವ ಕ್ರಿಕೆಟ್‌ನ ಇತಿಹಾಸದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಆಟಗಾರ ಎಂಬ ದಾಖಲೆ ಇನ್ನೂ ರೊಮೇನಿಯಾದ ಮರಿಯನ್ ಘೆರಾಸಿಂ ಅವರ ಹೆಸರಿನಲ್ಲಿದೆ. ಅವರು ಕೇವಲ 14 ವರ್ಷ 16 ದಿನಗಳ ವಯಸ್ಸಿನಲ್ಲಿ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಪದಾರ್ಪಣೆ ಮಾಡಿ ಈ ವಿಶ್ವದಾಖಲೆ ನಿರ್ಮಿಸಿದ್ದರು.

ಇದೇ ವೇಳೆ, ಪುರುಷರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಆಟಗಾರ ಎಂಬ ದಾಖಲೆ ಪಾಕಿಸ್ತಾನದ ಹಸನ್ ರಝಾ ಅವರ ಹೆಸರಿನಲ್ಲಿದ್ದು, ಅವರು 14 ವರ್ಷ 227 ದಿನಗಳ ವಯಸ್ಸಿನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

1996 ರಲ್ಲಿ ಹಸನ್ ರಾಝ ಪಾಕಿಸ್ತಾನ್ ಪರ ಮೊದಲ ಟೆಸ್ಟ್ ಪಂದ್ಯವಾಡುವಾಗ ಅವರ ವಯಸ್ಸು ಕೇವಲ ವಯಸ್ಸು ಕೇವಲ 14 ವರ್ಷ 227 ದಿನಗಳಾಗಿತ್ತು.

ಟೆಸ್ಟ್ ಆಡಿದ ಕೆಲವೇ ದಿನಗಳಲ್ಲಿ (14 ವರ್ಷ 233 ದಿನಗಳು) ಏಕದಿನ ಕ್ರಿಕೆಟ್‌ಗೂ ಪದಾರ್ಪಣೆ ಮಾಡಿ ಎರಡೂ ಫಾರ್ಮ್ಯಾಟ್‌ಗಳಲ್ಲಿ ಕಣಕ್ಕಿಳಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯನ್ನು ಹಸನ್ ರಾಝ ನಿರ್ಮಿಸಿದ್ದಾರೆ.

ಹೀಗಾಗಿ, ವೈಭವ್ ಸೂರ್ಯವಂಶಿ ವಿಶ್ವದ ಅತ್ಯಂತ ಕಿರಿಯ ಅಂತರರಾಷ್ಟ್ರೀಯ ಕ್ರಿಕೆಟಿಗರಲ್ಲ. ಆದರೆ, ಭಾರತದ ಹಿರಿಯ ಪುರುಷರ ತಂಡದ ಪರ ಅತ್ಯಂತ ಕಿರಿಯ ವಯಸ್ಸಿನಲ್ಲಿ ಪದಾರ್ಪಣೆ ಮಾಡಿದ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ತಮ್ಮ ಹೆಸರನ್ನು ಅಚ್ಚಳಿಯದಂತೆ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com