2nd T20: ಇಂಗ್ಲೆಂಡ್ ವಿರುದ್ಧ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ; Vaibhav Sooryavanshi ಪದಾರ್ಪಣೆ; ಸಚಿನ್ ದಾಖಲೆ ಧ್ವಂಸ!

ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಇಂದಿನ ಪಂದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದೇವೆ, ಅವರು ಸಂಪೂರ್ಣವಾಗಿ ಅರ್ಹರು ಎಂದು ಹೇಳಿದರು.
Vaibhav Sooryavanshi Surpasses Sachin Tendulkar To Be India's Youngest Debutant
ವೈಭವ್ ಸೂರ್ಯವಂಶಿ ದಾಖಲೆ
Updated on

ಮ್ಯಾಂಚೆಸ್ಟರ್: ಬಾಸ್ ಬೇಬಿ ವೈಭವ್ ಸೂರ್ಯವಂಶಿ ಕೊನೆಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದು, ಇಂಗ್ಲೆಂಡ್ ವಿರುದ್ಧದ 2ನೇ 20 ಪಂದ್ಯದಲ್ಲಿ ಭಾರತದ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೊದಲ ಪಂದ್ಯ ಮಳೆಯಿಂದಾಗಿ ಫಲಿತಾಂಶ ರಹಿತವಾಗಿ ರದ್ದಾಗಿತ್ತು. ಹೀಗಾಗಿ ಇಂದಿನ ಪಂದ್ಯ ಉಭಯ ತಂಡಗಳಿಗೆ ಮುಖ್ಯವಾಗಿದೆ.

ಟಾಸ್ ಗೆದ್ದ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಇಂದಿನ ಪಂದ್ಯಕ್ಕೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಿದ್ದೇವೆ, ಅವರು ಸಂಪೂರ್ಣವಾಗಿ ಅರ್ಹರು ಎಂದು ಹೇಳಿದರು.

ಇಂದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಕೆಲ ಮಹತ್ವದ ಬದಲಾವಣೆಗಳನ್ನು ಮಾಡಲಾಗಿದ್ದು, ಸಂಜು ಸ್ಯಾಮ್ಸನ್ ಬದಲಿಗೆ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಯ್ಯರ್, ಖಂಡಿತವಾಗಿಯೂ ಅವರು ಸಿದ್ಧರಾಗಿದ್ದಾರೆ.

Vaibhav Sooryavanshi Surpasses Sachin Tendulkar To Be India's Youngest Debutant
'ಕೋಚ್, ನಾಯಕನಿಗೆ ಬಿಟ್ಟದ್ದು': ಭಾರತದ ಪರ ವೈಭವ್ ಸೂರ್ಯವಂಶಿ ಪದಾರ್ಪಣೆಗೆ ವಿಳಂಬದ ಬಗ್ಗೆ BCCI

ಕಳೆದ ಕೆಲವು ತಿಂಗಳುಗಳಿಂದ ಅವರು ಬ್ಯಾಟ್ ಬೀಸುತ್ತಿರುವ ರೀತಿ, ಅತ್ಯುತ್ತಮ ಬೌಲರ್‌ಗಳನ್ನೂ ಎದುರಿಸಿ ಆಕ್ರಮಣಕಾರಿ ಆಟವಾಡುತ್ತಿರುವುದನ್ನು ನೋಡಿದ್ದೀರಿ. ಅವರಲ್ಲಿರುವ ಅಪಾರ ಆತ್ಮವಿಶ್ವಾಸವೇ ಅದನ್ನು ತೋರಿಸುತ್ತದೆ" ಎಂದರು.

ವೈಭವ್‌ಗೆ ಅವಕಾಶ ನೀಡುವ ವಿಚಾರದಲ್ಲಿ ಒತ್ತಡವಿತ್ತೇ ಎಂಬ ಪ್ರಶ್ನೆಗೆ ಉತ್ತರಿಸಿದ ಶ್ರೇಯಸ್ ಅಯ್ಯರ್, "ಇಲ್ಲ. ಕಳೆದ ಕೆಲವು ತಿಂಗಳುಗಳು ಹಾಗೂ ವರ್ಷಗಳಲ್ಲಿ ಅವರು ತೋರಿದ ಪ್ರದರ್ಶನದ ಆಧಾರದ ಮೇಲೆ ತಂಡದಲ್ಲಿ ಸ್ಥಾನ ಪಡೆಯಲು ಸಂಪೂರ್ಣವಾಗಿ ಅರ್ಹರು.

ಅವರು ಒತ್ತಡವನ್ನು ಮನಸ್ಸಿಗೆ ತೆಗೆದುಕೊಳ್ಳುವ ವ್ಯಕ್ತಿಯೇ ಅಲ್ಲ. ಡ್ರೆಸ್ಸಿಂಗ್ ರೂಮ್‌ನಲ್ಲಿ ಅವರ ವರ್ತನೆ ನೋಡಿದರೆ ಅವರು ಎಷ್ಟು ಸ್ಥಿರ ಮನೋಭಾವ ಹೊಂದಿದ್ದಾರೆ ಎಂಬುದು ಗೊತ್ತಾಗುತ್ತದೆ. ಅವರು ತಂಡದಲ್ಲಿರುವುದು ಸಂತೋಷದ ವಿಷಯ" ಎಂದು ಹೇಳಿದರು.

ತಂಡ ಇಂತಿದೆ

ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಹರ್ಷಿತ್ ರಾಣಾ, ಶಿವಂ ದುಬೆ, ಅಕ್ಸರ್ ಪಟೇಲ್, ರವಿ ಬಿಷ್ಣೋಯ್, ಅರ್ಶ್ ದೀಪ್ ಸಿಂಗ್ ಮತ್ತು ವರುಣ್ ಚಕ್ರವರ್ತಿ

ಸಚಿನ್ ದಾಖಲೆ ಧ್ವಂಸ!

ಇನ್ನು ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಪದಾರ್ಪಣೆ ಮಾಡುವ ಮೂಲಕ ವೈಭವ್ ಸೂರ್ಯವಂಶಿ ಭಾರತದ ಕ್ರಿಕೆಟ್ ದಂತಕಥೆ ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಅವರ ಸಾರ್ವಕಾಲಿಕ ದಾಖಲೆಯೊಂದನ್ನು ಧ್ವಂಸ ಮಾಡಿದ್ದಾರೆ. ಪುರುಷ ಹಾಗೂ ಮಹಿಳಾ ಕ್ರಿಕೆಟ್ ಸೇರಿ ಭಾರತ ಪರ ಆಡಿದ ಅತ್ಯಂತ ಕಿರಿಯ ವಯಸ್ಸಿನ ಆಟಗಾರ ಎಂಬ ಐತಿಹಾಸಿಕ ದಾಖಲೆಯನ್ನು ವೈಭವ್ ತಮ್ಮ ಹೆಸರಿಗೆ ಬರೆದಿದ್ದಾರೆ.

15 ವರ್ಷದಲ್ಲೇ ಇತಿಹಾಸ

ಭಾರತ ಪರ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಈ ಮೂಲಕ ಭಾರತೀಯ ಕ್ರಿಕೆಟ್‌ನಲ್ಲಿ ಹೊಸ ಇತಿಹಾಸ ನಿರ್ಮಾಣ ಮಾಡಿದ್ದಾರೆ. ಕೇವಲ 15 ವರ್ಷ 99 ದಿನಗಳ ವಯಸ್ಸಿನಲ್ಲಿ ವೈಭವ್ ಸೂರ್ಯವಂಶಿ ಭಾರತ ಹಿರಿಯ ತಂಡದ ಪರ ಪದಾರ್ಪಣೆ ಮಾಡುವ ಮೂಲಕ ಈ ದಾಖಲೆ ನಿರ್ಮಿಸಿದ್ದಾರೆ.

ಇದುವರೆಗೆ ಈ ದಾಖಲೆ ಭಾರತದ ಮಹಿಳಾ ಕ್ರಿಕೆಟಿಗ ಶೆಫಾಲಿ ವರ್ಮಾ ಅವರ ಹೆಸರಿನಲ್ಲಿತ್ತು. ಅವರು 15 ವರ್ಷ 239 ದಿನಗಳ ವಯಸ್ಸಿನಲ್ಲಿ ಭಾರತ ಪರ ಮೊದಲ ಪಂದ್ಯ ಆಡಿದ್ದರು. ಇತ್ತ ಪುರುಷರ ಕ್ರಿಕೆಟ್‌ನಲ್ಲಿ ಈ ದಾಖಲೆಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೊಂದಿದ್ದರು.

ಸಚಿನ್ 16 ವರ್ಷ 205 ದಿನಗಳ ವಯಸ್ಸಿನಲ್ಲಿ ಭಾರತ ಪರ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಈಗ ವೈಭವ್ ಸೂರ್ಯವಂಶಿ ಆ ಎರಡೂ ದಾಖಲೆಗಳನ್ನು ಹಿಂದಿಕ್ಕಿ, ಭಾರತ ಹಿರಿಯ ತಂಡದ ಪರ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೊಸ ಇತಿಹಾಸವನ್ನು ನಿರ್ಮಿಸಿದ್ದಾರೆ.

15ನೇ ವಯಸ್ಸಿನಲ್ಲೇ ಭಾರತ ತಂಡದ ಜರ್ಸಿ ತೊಡುವ ಮೂಲಕ ವೈಭವ್ ಸೂರ್ಯವಂಶಿ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಭರವಸೆಯ ಪ್ರತಿಭೆಯಾಗಿ ಹೊರಹೊಮ್ಮಿದ್ದು, ಅವರ ಪದಾರ್ಪಣೆ ದೇಶದ ಕ್ರಿಕೆಟ್ ಇತಿಹಾಸದಲ್ಲಿ ಮತ್ತೊಂದು ಸ್ಮರಣೀಯ ಅಧ್ಯಾಯವಾಗಿ ದಾಖಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com