ಇಂಗ್ಲೆಂಡ್ ವಿರುದ್ಧ ಹೀನಾಯ ಸೋಲು; 1,605 ದಿನಗಳ ನಂತರ T20I ಅಗ್ರಸ್ಥಾನ ಕಳೆದುಕೊಂಡ ಭಾರತ!

ಟಿ20 ಕ್ರಿಕೆಟ್‌ನ ಅಗ್ರಸ್ಥಾನದಲ್ಲಿ ಭಾರತದ ದೀರ್ಘಕಾಲದ ಆಳ್ವಿಕೆ ಅಧಿಕೃತವಾಗಿ ಅಂತ್ಯಗೊಂಡಿದೆ. ಇಂಗ್ಲೆಂಡ್ ವಿರುದ್ಧದ ಸರಣಿ ವೈಟ್‌ವಾಶ್ ನಂತರ 'ಮೆನ್ ಇನ್ ಬ್ಲೂ' ಅಗ್ರಸ್ಥಾನದಿಂದ ಕೆಳಗಿಳಿದಿದೆ.
ಟೀಂ ಇಂಡಿಯಾ
ಟೀಂ ಇಂಡಿಯಾ
Updated on

ಶನಿವಾರ ಸೌತಾಂಪ್ಟನ್‌ನ ದಿ ರೋಸ್ ಬೌಲ್‌ನಲ್ಲಿ ನಡೆದ ಐದನೇ ಮತ್ತು ಅಂತಿಮ ಟಿ20ಐನಲ್ಲಿ ಸ್ಯಾಮ್ ಕರನ್ ಮತ್ತು ಆದಿಲ್ ರಶೀದ್ ಅವರ ಬೌಲಿಂಗ್ ದಾಳಿಗೆ ಭಾರತದ ಬ್ಯಾಟರ್‌ಗಳು ದಂಗಾಗಿ ಹೋದರು. ಇಂಗ್ಲೆಂಡ್ 56 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ, ಮಳೆಯಿಂದಾಗಿ ಆರಂಭಿಕ ಪಂದ್ಯ ಮಳೆಗೆ ರದ್ದಾದ ನಂತರ ಇಂಗ್ಲೆಂಡ್ 4-0 ಅಂತರದ ಸರಣಿ ಗೆಲುವು ಸಾಧಿಸಿತು. ಸೂರ್ಯಕುಮಾರ್ ಯಾದವ್ ಅವರಿಂದ ಭಾರತದ ತಂಡದ ನಾಯಕತ್ವ ವಹಿಸಿಕೊಂಡ ಶ್ರೇಯಸ್ ಅಯ್ಯರ್ ಇದೀಗ ಗೆಲುವಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.

ಟಿ20 ಕ್ರಿಕೆಟ್‌ನ ಅಗ್ರಸ್ಥಾನದಲ್ಲಿ ಭಾರತದ ದೀರ್ಘಕಾಲದ ಆಳ್ವಿಕೆ ಅಧಿಕೃತವಾಗಿ ಅಂತ್ಯಗೊಂಡಿದೆ. ಫೆಬ್ರುವರಿ 2022ರಲ್ಲಿ ಆರಂಭವಾದ ಐತಿಹಾಸಿಕ ಪಯಣದಲ್ಲಿ ಸತತ 1,605 ದಿನಗಳ ಕಾಲ ಅಗ್ರಸ್ಥಾನದಲ್ಲಿದ್ದ 'ಮೆನ್ ಇನ್ ಬ್ಲೂ' ಇದೀಗ ಇಂಗ್ಲೆಂಡ್ ವಿರುದ್ಧದ ಸರಣಿ ವೈಟ್‌ವಾಶ್ ನಂತರ ಅಗ್ರಸ್ಥಾನದಿಂದ ಕೆಳಗಿಳಿದಿದೆ.

ಇದೀಗ ಆತಿಥೇಯ ಇಂಗ್ಲೆಂಡ್ ತಂಡವು ಆ ಸ್ಥಾನವನ್ನು ಅಲಂಕರಿಸಿದ್ದು, ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಅಗ್ರಸ್ಥಾನವನ್ನು ತನ್ನದಾಗಿಸಿಕೊಂಡಿದೆ.

ಟಾಸ್ ಗೆದ್ದ ನಾಯಕ ಶ್ರೇಯಸ್ ಅಯ್ಯರ್ ಬೌಲಿಂಗ್ ಆಯ್ದುಕೊಂಡರು. ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ 64 ಎಸೆತಗಳಲ್ಲಿ 131 ರನ್, ಹ್ಯಾರಿ ಬ್ರೂಕ್ 45 ಎಸೆತಗಳಲ್ಲಿ 95 ರನ್​‌ಗಳ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು ಭರ್ಜರಿ 257 ರನ್ ಕಲೆಹಾಕಿತು.

258 ರನ್‌ ಗುರಿ ಬೆನ್ನಟ್ಟಿದ ಭಾರತದ ಪರ ಆರಂಭದಲ್ಲಿಯೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಜೋಫ್ರಾ ಆರ್ಚರ್ ಮೂರನೇ ಓವರ್‌ನಲ್ಲಿ ಅಭಿಷೇಕ್ ಶರ್ಮಾ ಅವರನ್ನು ಕೇವಲ 3 ರನ್‌ಗಳಿಗೆ ಔಟ್ ಮಾಡಿದರು. ಇಂಗ್ಲೆಂಡ್ ವಿರುದ್ಧದ ಐದನೇ ಮತ್ತು ಕೊನೆಯ ಪಂದ್ಯದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್ ಕೇವಲ 25 ರನ್‌ಗಳಿಸಿದ್ದಾಗ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಇಶಾನ್ ಕಿಶನ್ ಮತ್ತು ತಿಲಕ ವರ್ಮಾ ಅವರ ಆಕರ್ಷಕ ಅರ್ಧಶತಕಗಳ ಹೊರತಾಗಿಯೂ ತಂಡ 8 ವಿಕೆಟ್ ನಷ್ಟಕ್ಕೆ ಕೇವಲ 2021 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ ಭಾರತ ಸತತ ನಾಲ್ಕನೇ ಸೋಲು ಕಂಡಿತು.

ಇಂಗ್ಲೆಂಡ್ ಭಾರತವನ್ನು 201/8ಕ್ಕೆ ನಿರ್ಬಂಧಿಸಿತು. ಪಂದ್ಯವನ್ನು 56 ರನ್‌ಗಳಿಂದ ಗೆದ್ದಿತು. ಜೊತೆಗೆ ಸರಣಿ ವಶಪಡಿಸಿಕೊಂಡಿತು.

ಟೀಂ ಇಂಡಿಯಾ
5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com