'ನನ್ನೊಂದಿಗೆ ಅಖಾಡಕ್ಕೆ ಧುಮುಕುವ ತಾಕತ್ತು ನಿಮ್ಮಲ್ಲಿದೆಯೇ?': ಕಪಾಳಮೋಕ್ಷ ಮಾಡಿದ್ದ ಹರ್ಭಜನ್ ಸಿಂಗ್‌ಗೆ ಸವಾಲೆಸೆದ ಎಸ್ ಶ್ರೀಶಾಂತ್

ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಪಂಜಾಬ್ ಕಿಂಗ್ಸ್ (ಆಗ ಕಿಂಗ್ಸ್ ಇಲೆವೆನ್ ಪಂಜಾಬ್) ನಡುವಿನ ಐಪಿಎಲ್ 2008ನೇ ಆವೃತ್ತಿಯ ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ಸಮಯದಲ್ಲಿ ಹರ್ಭಜನ್ ಸಿಂಗ್ ವೇಗಿ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು.
Harbhajan Singh and S Sreesanth
Photo | AFP
Updated on

2008ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ನಡೆದ ಕುಖ್ಯಾತ 'ಸ್ಲ್ಯಾಪ್‌ಗೇಟ್' ಘಟನೆಯಿಂದ ಪ್ರೇರಿತವಾದ ಜಾಹೀರಾತನ್ನು ದಂತಕಥೆ ಸ್ಪಿನ್ನರ್ ಹರ್ಭಜನ್ ಸಿಂಗ್ ಚಿತ್ರೀಕರಿಸಿದಾಗಿನಿಂದ ಭಾರತದ ಮಾಜಿ ಆಟಗಾರರಾದ ಶ್ರೀಶಾಂತ್ ಮತ್ತು ಭಜ್ಜಿ ನಡುವಿನ ಸಂಬಂಧವು ಇನ್ನೂ ಕಹಿಯಾಗುತ್ತಲೇ ಇದೆ. ಕ್ರೀಡೆಯ ಅತಿದೊಡ್ಡ ವಿವಾದಗಳಲ್ಲಿ ಒಂದಾದ ಹಳೆಯ ಗಾಯಗಳನ್ನು ಮಾಜಿ ಕ್ರಿಕೆಟಿಗರು ಮರೆತಂತೆ ಕಂಡುಬಂದರು; ಆದಾಗ್ಯೂ, ಹರ್ಭಜನ್ ಜಾಹೀರಾತನ್ನು ಚಿತ್ರೀಕರಿಸಿದ ನಂತರ ಅದು ಮತ್ತೊಮ್ಮೆ ವಿವಾದಕ್ಕೆ ಕಾರಣವಾಯಿತು.

ಲಲ್ಲಂಟಾಪ್‌ ಜೊತೆಗಿನ ಸಂವಾದದ ವೇಳೆ ಎಸ್ ಶ್ರೀಶಾಂತ್ ಅವರಿಗೆ ಹರ್ಭಜನ್ ಬಾಕ್ಸಿಂಗ್ ಗೇರ್ ಧರಿಸಿರುವ ಹಳೆಯ ಪೋಟೊವನ್ನು ತೋರಿಸಲಾಯಿತು. ಆಗ ಅವರು, ಬಾಕ್ಸಿಂಗ್ ರಿಂಗ್‌ನಲ್ಲಿಯೇ ವಿಷಯಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸಿದ್ಧವಾಗಿದ್ದೇನೆ ಎಂದು ಅವರು ಹರ್ಭಜನ್‌ಗೆ ನೇರ ಸವಾಲು ಹಾಕಿದರು.

'ಇದೇ ದೃಶ್ಯ, ನಿಮಗೆ ತಾಕತ್ ಇದೆಯೇ? ನನ್ನ ಜೊತೆ ಅಖಾಡಕ್ಕೆ ಇಳಿಯಲು ಧೈರ್ಯವಿದೆಯೇ? ನಿಮಗೆ ಇದು ಸಾಧ್ಯವೇ? ಎಂದು ನಾನು ಅವರನ್ನು ಕೇಳುತ್ತಿದ್ದೇನೆ. ನನ್ನ ಜೊತೆ ಅಖಾಡಕ್ಕೆ ಧುಮುಕಲು ನಿಮಗೆ ಧೈರ್ಯವಿದೆಯೇ? ಇದೇ ಕೈಗವಸು ಧರಿಸಿ... ಇದು ನಟನೆ ಅಲ್ಲ, ನಾನು ನಗುತ್ತಿದ್ದೇನೆ. ನೀನು ನಗುತ್ತಿಲ್ಲ, ನೀವು ಏನು ಮಾಡುತ್ತಿದ್ದೀರಿ ಎಂದು ನನಗೆ ತಿಳಿದಿಲ್ಲ. ನೋಡೋಣ. ಇದು ಮುಕ್ತ ಸವಾಲು' ಎಂದು ಶ್ರೀಶಾಂತ್ ಹೇಳಿದರು.

'ನಾನು ಸದ್ಯ ಬೇರ್ ನಕಲ್ ಫೈಟ್ ಲೀಗ್‌ನಲ್ಲಿದ್ದೇನೆ ಮತ್ತು ನಾನು ಕಾನರ್ ಮೆಕ್‌ಗ್ರೆಗರ್ ಅವರ ವಿಡಿಯೋದ ಪ್ರಮುಖ ಪ್ರಾಯೋಜಕರಲ್ಲಿ ಒಬ್ಬನಾಗಿದ್ದೇನೆ; ನನ್ನ ಒಳ್ಳೆಯ ಸ್ನೇಹಿತರಲ್ಲಿ ಒಬ್ಬರು ಅದನ್ನು ಪ್ರಾಯೋಜಿಸಿದ್ದಾರೆ, ಆದ್ದರಿಂದ ಪ್ರಚಾರವೂ ಈಗಾಗಲೇ ಮುಗಿದಿದೆ. ಭಜ್ಜಿ (ಹರ್ಭಜನ್ ಸಿಂಗ್) ನಿಮಗೆ ನಾನು ಸವಾಲು ಹಾಕುತ್ತಿದ್ದೇನೆ' ಎಂದು ಅವರು ಹೇಳಿದರು.

Harbhajan Singh and S Sreesanth
18 ವರ್ಷಗಳ ಹಳೆಯ ವಿಡಿಯೋ ರಿಲೀಸ್ ಮಾಡಿದ ಲಲಿತ್ ಮೋದಿ; ಅಮಾನವೀಯ ನಡೆ ಎಂದ ಶ್ರೀಶಾಂತ್ ಪತ್ನಿ

'ಭಜ್ಜಿ, ನಾನು ನಿಮಗೆ ಸವಾಲು ಹಾಕುತ್ತೇನೆ. ನಿಮಗೆ ಮತ್ತು ನನಗೆ ಕಪಾಳಮೋಕ್ಷದಿಂದ ಇಷ್ಟೊಂದು ಸಮಸ್ಯೆ ಇದ್ದರೆ ಮತ್ತು ನೀವು ಇಷ್ಟೊಂದು ಸಂಪಾದಿಸಿದರೆ... ನಾನು ಕೂಡ ಸಂಪಾದಿಸುವಂತಾಗಲಿ. ರಿಂಗ್‌ಗೆ ಬನ್ನಿ. ನಾನು ನಿಮ್ಮನ್ನು ಹೃದಯಪೂರ್ವಕವಾಗಿ ಕರೆಯುತ್ತಿದ್ದೇನೆ. ನಿಮಗೆ ಸ್ವಲ್ಪ ಸ್ವಾಭಿಮಾನವಿದ್ದರೆ, ಜಾಹೀರಾತುಗಳು ಮತ್ತು ಅದನ್ನೆಲ್ಲಾ ಮಾಡಬಾರದು. ನಿಜವಾದ ರೀತಿಯಲ್ಲಿ, ಎಲ್ಲ ಮಲಯಾಳಿಗಳು ಮತ್ತು ಎಲ್ಲ ಸರ್ದಾರ್‌ಗಳಿಗಾಗಿ, ದಯವಿಟ್ಟು ಬನ್ನಿ. ನಾನು ಕಾಯುತ್ತಿದ್ದೇನೆ' ಎಂದು ಅವರು ಹೇಳಿದರು.

ಮುಂಬೈ ಇಂಡಿಯನ್ಸ್ (ಎಂಐ) ಮತ್ತು ಪಂಜಾಬ್ ಕಿಂಗ್ಸ್ (ಆಗ ಕಿಂಗ್ಸ್ ಇಲೆವೆನ್ ಪಂಜಾಬ್) ನಡುವಿನ ಐಪಿಎಲ್ 2008ನೇ ಆವೃತ್ತಿಯ ಪಂದ್ಯದ ವೇಳೆ ಈ ಘಟನೆ ನಡೆದಿತ್ತು. ಪಂದ್ಯದ ನಂತರದ ಹ್ಯಾಂಡ್‌ಶೇಕ್‌ ಸಮಯದಲ್ಲಿ ಹರ್ಭಜನ್ ಸಿಂಗ್ ವೇಗಿ ಶ್ರೀಶಾಂತ್ ಅವರಿಗೆ ಕಪಾಳಮೋಕ್ಷ ಮಾಡಿದ್ದರು. ಆಗ ಹರ್ಭಜನ್ ಮುಂಬೈ ತಂಡದ ನಾಯಕರಾಗಿದ್ದರು ಮತ್ತು ಅವರ ತಂಡವು ಪಂಜಾಬ್ ವಿರುದ್ಧ 66 ರನ್‌ಗಳ ಸೋಲನ್ನು ಎದುರಿಸಿತ್ತು. ಈ ಘಟನೆಯಿಂದಾಗಿ ಹರ್ಭಜನ್ ಸಿಂಗ್ ಅವರನ್ನು ಎಂಟು ಪಂದ್ಯಗಳಿಂದ ನಿಷೇಧ ಹೇರಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com