CSK ಹೆಡ್ ಕೋಚ್ ಆಗಿ ಎಂಎಸ್ ಧೋನಿ ಅಧಿಕಾರ ಸ್ವೀಕಾರ?; ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದೇನು?

ಸಿಎಸ್‌ಕೆ ತಂಡವು ಸತತ ಮೂರನೇ ಬಾರಿಗೆ ಐಪಿಎಲ್ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾದ ನಂತರ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಸ್‌ಕೆ ಸಿಇಒ ಅವರ ಹೇಳಿಕೆಗಳು ಬಂದಿವೆ.
MS Dhoni
ಎಂಎಸ್ ಧೋನಿ
Updated on

ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಲೀಕ ಕಾಶಿ ವಿಶ್ವನಾಥನ್, ಎಂಎಸ್ ಧೋನಿ ಅವರನ್ನು ಫ್ರಾಂಚೈಸಿಯ 'ಶಾಶ್ವತ ಆಟಗಾರ' ಎಂದು ಕರೆದಿದ್ದು, ಮುಂದಿನ ದಿನಗಳಲ್ಲಿ ಅನುಭವಿ ಆಟಗಾರ ಮುಖ್ಯ ಕೋಚ್ ಆಗಿ ಅಧಿಕಾರ ವಹಿಸಿಕೊಳ್ಳಲು ತಂಡದ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ ಎಂದಿದ್ದಾರೆ. 44 ವರ್ಷದ ಸಿಎಸ್‌ಕೆ ಮಾಜಿ ನಾಯಕ ಸಿಎಸ್‌ಕೆ ತಂಡದಲ್ಲಿ ಇದ್ದರೂ, ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯಗಳಲ್ಲಿಯೂ ಕಾಣಿಸಿಕೊಂಡಿಲ್ಲ. ಐಪಿಎಲ್ 2026 ಧೋನಿಯ ಕೊನೆಯ ಸೀಸನ್ ಆಗಿರಬಹುದು ಎಂದು ಹೀಗಾಗಲೇ ಹಲವರು ಊಹಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಧೋನಿ ಸುತ್ತ ಇದೇ ರೀತಿಯ ಚರ್ಚೆಯಾಗುತ್ತಿದೆ. ಆದರೆ, ಇದೀಗ ಸಿಎಸ್‌ಕೆ ಸಿಇಒ ಧೋನಿಯಿಂದ ಫ್ರಾಂಚೈಸಿ ಮುಂದೆ ಏನನ್ನು ನಿರೀಕ್ಷಿಸುತ್ತದೆ ಎಂಬುದರ ಕುರಿತು ಮಾತನಾಡಿದ್ದಾರೆ.

ರೆವ್‌ಸ್ಪೋರ್ಟ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಸಿಎಸ್‌ಕೆ ಸಿಇಒ ತಂಡದ ಆಡಳಿತ ಮಂಡಳಿಯು ಎಂಎಸ್ ಧೋನಿ ಅವರೊಂದಿಗೆ ಯಾವುದೇ ದೀರ್ಘಾವಧಿಯ ಸಹಭಾಗಿತ್ವ ಯೋಜನೆಗಳ ಬಗ್ಗೆ ಚರ್ಚಿಸಿಲ್ಲ. ಯಾವುದೇ ನಿರ್ಧಾರವನ್ನು ಅವರೇ ಸ್ವತಃ ತೆಗೆದುಕೊಳ್ಳುತ್ತಾರೆ. ಸಿಎಸ್‌ಕೆ ತಂಡವು ಥಲಾ ಅವರನ್ನು ತಂಡಕ್ಕೆ 'ಶಾಶ್ವತ ಆಟಗಾರ'ನಾಗಿರಲು ಬಯಸುತ್ತದೆ. ಅದು ಆಟಗಾರ, ತರಬೇತುದಾರ ಅಥವಾ ಮಾರ್ಗದರ್ಶಕರಾಗಿರಲಿ' ಎಂದರು.

'ನಾವು ಇಲ್ಲಿಯವರೆಗೆ ಎಂಎಸ್ ಧೋನಿ ಜೊತೆ ಈ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ. ಏಕೆಂದರೆ, ನಿಮಗೆ ತಿಳಿದಿರುವಂತೆ, ಎಂಎಸ್ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಮತ್ತು ನಾವು ಅದನ್ನು ಗೌರವಿಸುತ್ತೇವೆ. ಆಟಗಾರ, ತರಬೇತುದಾರ ಅಥವಾ ಮೆಂಟರ್ ಆಗಿ ಯಾವುದೇ ಸಾಮರ್ಥ್ಯದಲ್ಲಿ ಅವರು ಸಿಎಸ್‌ಕೆಯಲ್ಲಿ ಶಾಶ್ವತ ಆಟಗಾರನಾಗಿರಬೇಕೆಂದು ನಾವು ಯಾವಾಗಲೂ ಬಯಸುತ್ತೇವೆ. ಅದು ಏನೇ ಇರಲಿ, ಅವರು ಏನು ನಿರ್ಧರಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಪ್ರತಿಯೊಂದು ನಿರ್ಧಾರವೂ ಅವರ ಮೇಲೆ ಅವಲಂಬಿತವಾಗಿರುತ್ತದೆ' ಎಂದು ವಿಶ್ವನಾಥನ್ ಹೇಳಿದರು.

ಸಿಎಸ್‌ಕೆ ತಂಡವು ಸತತ ಮೂರನೇ ಬಾರಿಗೆ ಐಪಿಎಲ್ ಪ್ಲೇಆಫ್‌ಗೆ ಪ್ರವೇಶಿಸಲು ವಿಫಲವಾದ ನಂತರ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಸಿಎಸ್‌ಕೆ ಸಿಇಒ ಅವರ ಹೇಳಿಕೆಗಳು ಬಂದಿವೆ. ಕಳೆದ ವಾರ, ಸಿಎಸ್‌ಕೆ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್ ಅವರು ಫ್ಲೆಮಿಂಗ್ ಅವರನ್ನು ಮುಖ್ಯ ಕೋಚ್ ಆಗಿ ಬದಲಿಸುವ ಕಲ್ಪನೆಯನ್ನು ಬೆಂಬಲಿಸಿದರು ಮತ್ತು ಎಂಎಸ್‌ಡಿ ಇರುವಾಗ ತಂಡವು ಬೇರೆಡೆ ನೋಡುವ ಅಗತ್ಯವಿಲ್ಲ ಎಂದು ಹೇಳಿದರು.

ಸಿಎಸ್‌ಕೆ ಧೋನಿಯನ್ನು ಮುಂದಿನ ಮುಖ್ಯ ಕೋಚ್ ಆಗಿ ಪರಿಗಣಿಸಲು ಬಲವಾದ ಕಾರಣಗಳಿವೆ. ಮೊದಲನೆಯದಾಗಿ, ಅವರು ತಂಡವನ್ನು ಬೇರೆಯವರಿಗಿಂತ ಚೆನ್ನಾಗಿ ತಿಳಿದಿದ್ದಾರೆ ಮತ್ತು ಐಪಿಎಲ್ 2026ರ ಭಾಗವಾಗಿಲ್ಲದಿದ್ದರೂ ಸಿಎಸ್‌ಕೆಯ ಯುವ ಆಟಗಾರರನ್ನು ಸಿದ್ಧಪಡಿಸುವಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಎರಡನೆಯದಾಗಿ, ಐಪಿಎಲ್ 2027ರ ಸಮಯದಲ್ಲಿ, ಎಂಎಸ್ ಧೋನಿಗೆ 45 ವರ್ಷವಾಗಿರುತ್ತದೆ. ಅವರು ಅನೇಕ ಗಾಯಗಳಿಂದ ಬಳಲುತ್ತಿದ್ದು, ಮೊದಲ ಬಾರಿಗೆ ಇಡೀ ಆವೃತ್ತಿಯಿಂದ ಹೊರಗುಳಿಯಬೇಕಾಯಿತು. ಸಿಎಸ್‌ಕೆ ಅನುಭವಿಯನ್ನು ತಂಡದ ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳುವುದು ಮತ್ತು ಫ್ಲೆಮಿಂಗ್‌ ಅವರನ್ನು ಕೆಳಗಿಳಿಸುವುದು ಸದ್ಯಕ್ಕೆ ಬುದ್ಧಿವಂತ ನಡೆಯಾಗಿದೆ. ಮೂರನೆಯದಾಗಿ, ಧೋನಿ ಸಿಎಸ್‌ಕೆ ತಂಡದ ಅತ್ಯುತ್ತಮ ನಾಯಕ, ತಂಡವನ್ನು ಐದು ಪ್ರಶಸ್ತಿಗಳಿಗೆ ಮುನ್ನಡೆಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com