CSK ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್; ವದಂತಿಗಳನ್ನು ತಳ್ಳಿಹಾಕಿದ ಫ್ರಾಂಚೈಸಿ, ಸ್ಟೀಫನ್ ಫ್ಲೆಮಿಂಗ್ ಭವಿಷ್ಯದ ಬಗ್ಗೆ ಶೀಘ್ರದಲ್ಲೇ ನಿರ್ಧಾರ!

ನ್ಯೂಜಿಲೆಂಡ್‌ನ ಮಾಜಿ ನಾಯಕ ಫ್ಲೆಮಿಂಗ್, ಎಂಎಸ್ ಧೋನಿ ಜೊತೆಗೆ ಲೀಗ್‌ನಲ್ಲಿ ಸಿಎಸ್‌ಕೆ ಗೆದ್ದಿರುವ ಐದು ಪ್ರಶಸ್ತಿಗಳಲ್ಲಿ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್‌ಕೆ ಯಾವುದೇ ಪ್ರಭಾವ ಬೀರುವಲ್ಲಿ ಹಿಂದುಳಿದಿದೆ.
Rahul Dravid
ರಾಹುಲ್ ದ್ರಾವಿಡ್
Updated on

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ನೇ ಆವೃತ್ತಿಯಲ್ಲಿಯೂ ಚೆನ್ನೈ ಸೂಪರ್ ಕಿಂಗ್ಸ್ (CSK) ಎಡವಿದೆ. ಈ ಆವೃತ್ತಿಯಲ್ಲಿ ಪ್ಲೇಆಫ್‌ಗೆ ತಲುಪುವಲ್ಲಿ ವಿಫಲವಾದ ನಂತರ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಭವಿಷ್ಯದ ಬಗ್ಗೆ ಚರ್ಚೆಯಾಗುತ್ತಿದ್ದು, ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಈ ಬಗ್ಗೆ ಇನ್ನೂ ನಿರ್ಧಾರ ತೆಗೆದುಕೊಂಡಿಲ್ಲ.

ನ್ಯೂಜಿಲೆಂಡ್‌ನ ಮಾಜಿ ನಾಯಕ ಫ್ಲೆಮಿಂಗ್, ಎಂಎಸ್ ಧೋನಿ ಜೊತೆಗೆ ಲೀಗ್‌ನಲ್ಲಿ ಸಿಎಸ್‌ಕೆ ಗೆದ್ದಿರುವ ಐದು ಪ್ರಶಸ್ತಿಗಳಲ್ಲಿ ತಂಡದ ಭಾಗವಾಗಿದ್ದಾರೆ. ಆದಾಗ್ಯೂ, ಕಳೆದ ಎರಡು ಆವೃತ್ತಿಗಳಲ್ಲಿ ಸಿಎಸ್‌ಕೆ ಯಾವುದೇ ಪ್ರಭಾವ ಬೀರುವಲ್ಲಿ ಹಿಂದುಳಿದಿದೆ. ಆಧುನಿಕ ಟಿ20 ಕ್ರಿಕೆಟ್ ವಿಧಾನಕ್ಕೆ ತಂಡವು ಹೊಂದಿಕೊಂಡಿಲ್ಲ ಎಂಬುದನ್ನು ಇದು ತೋರಿಸುತ್ತದೆ. ಫ್ಲೆಮಿಂಗ್ ಈ ತಪ್ಪನ್ನು ಒಪ್ಪಿಕೊಂಡರು ಮತ್ತು ಐಪಿಎಲ್ 2026ರ ಆವೃತ್ತಿಗೂ ಮೊದಲು ಸಿಎಸ್‌ಕೆ ತನ್ನ ದೃಷ್ಟಿಕೋನವನ್ನು ಬದಲಿಸಿತು ಎಂದಿದ್ದಾರೆ.

ಸದ್ಯ ತಂಡವು ಹೆಚ್ಚು ಸಜ್ಜಾಗಿ ಕಾಣುತ್ತಿತ್ತು, ಆದರೆ ಆಟಗಾರರಿಗೆ ಉಂಟಾದ ಗಾಯಗಳು ಅವರನ್ನು ಹಳಿತಪ್ಪಿಸಿದ್ದವು. ಸಂಜು ಸ್ಯಾಮ್ಸನ್ ಅವರ ಪ್ರಯತ್ನವೂ ಉತ್ತಮವಾಗಿತ್ತು. ಆದಾಗ್ಯೂ, ಕಳೆದ 3 ಸೀಸನ್‌ಗಳಲ್ಲಿ ಸಿಎಸ್‌ಕೆ ಅಂಕಪಟ್ಟಿಯಲ್ಲಿ 5, 10 ಮತ್ತು 8ನೇ ಸ್ಥಾನಗಳನ್ನು ಗಳಿಸಿದೆ. ಇದಲ್ಲದೆ, ಅವರು ಕೇವಲ 17 ಪಂದ್ಯಗಳನ್ನು ಗೆದ್ದಿದ್ದಾರೆ ಮತ್ತು 25 ಪಂದ್ಯಗಳಲ್ಲಿ ಸೋತಿದ್ದಾರೆ. ಮತ್ತೊಂದು ನಿರಾಶಾದಾಯಕ ಸೀಸನ್ ನಂತರ, ಅಭಿಮಾನಿಗಳು ಫ್ಲೆಮಿಂಗ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ.

Rahul Dravid
CSK ಹೆಡ್ ಕೋಚ್ ಆಗಿ ಎಂಎಸ್ ಧೋನಿ ಅಧಿಕಾರ ಸ್ವೀಕಾರ?; ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥನ್ ಹೇಳಿದ್ದೇನು?

ಸಿಎಸ್‌ಕೆ ಹೆಡ್ ಕೋಚ್ ಆಗಿ ರಾಹುಲ್ ದ್ರಾವಿಡ್?

ಕಳೆದ ಕೆಲವು ದಿನಗಳಿಂದ ಭಾರತದ ಮಾಜಿ ಆಟಗಾರ ರಾಹುಲ್ ದ್ರಾವಿಡ್ ಅವರನ್ನು ಮುಖ್ಯ ಕೋಚ್ ಆಗಿ ನೇಮಿಸಿಕೊಳ್ಳಲು ಸಿಎಸ್‌ಕೆ ಅವರೊಂದಿಗೆ ಮಾತುಕತೆ ನಡೆಸುತ್ತಿದೆ ಎಂಬ ವದಂತಿಗಳು ಹಬ್ಬಿವೆ. ಭಾರತದ ಮಾಜಿ ನಾಯಕ ಮತ್ತು ಮುಖ್ಯ ಕೋಚ್ 2026ರ ಆವೃತ್ತಿಗೆ ಮುನ್ನ ರಾಜಸ್ಥಾನ ರಾಯಲ್ಸ್ (RR) ತಂಡವನ್ನು ತೊರೆದಿದ್ದರು ಮತ್ತು ಸದ್ಯದ ಐಪಿಎಲ್ ತಂಡದೊಂದಿಗೆ ಭಾಗಿಯಾಗಿಲ್ಲ.

ಆದಾಗ್ಯೂ, ಸಿಎಸ್‌ಕೆ ಮತ್ತು ದ್ರಾವಿಡ್ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ತಂಡದ ಸಿಇಒ ಕಾಸಿ ವಿಶ್ವನಾಥನ್ ಈ ವದಂತಿಗಳನ್ನು ನಿರಾಕರಿಸಿದ್ದಾರೆ. ಸಾಮಾನ್ಯವಾಗಿ, ಐಪಿಎಲ್ ಫ್ರಾಂಚೈಸಿಗಳು ಕಳೆದ ಆವೃತ್ತಿಯಲ್ಲಿ ತಮ್ಮ ಪ್ರದರ್ಶನವನ್ನು ಪರಿಶೀಲಿಸುವ ಮೊದಲು ಮತ್ತು ಮುಂಬರುವ ಆವೃತ್ತಿಗಳಿಗೆ ಯೋಜನೆ ರೂಪಿಸುವ ಮೊದಲು ಸಮಯ ತೆಗೆದುಕೊಳ್ಳುತ್ತವೆ.

ಸಿಎಸ್‌ಕೆ ಇನ್ನೂ ಆ ಕುರಿತು ಮಾತುಕತೆ ನಡೆಸಿಲ್ಲ. 'ನಾವು ಯಾವುದೇ ಕ್ರಿಕೆಟ್ ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ. ನಾವು ಒಂದು ಹಂತದಲ್ಲಿ ಪರಿಶೀಲಿಸುತ್ತೇವೆ' ಎಂದು ವಿಶ್ವನಾಥನ್ ಕ್ರಿಕ್‌ಬಜ್‌ಗೆ ತಿಳಿಸಿದರು. ಫ್ಲೆಮಿಂಗ್ ಐಪಿಎಲ್‌ನಲ್ಲಿ ಈ ಆವೃತ್ತಿಯಲ್ಲಿ ಮಾತ್ರ ಚೆನ್ನೈ ತಂಡವನ್ನು ನಿರ್ವಹಿಸುತ್ತಿಲ್ಲ. ಬದಲಿಗೆ ಅವರು 2009 ರಿಂದಲೂ ಇದೇ ಕೆಲಸದಲ್ಲಿ ತೊಡಗಿದ್ದಾರೆ. ಇತರ ಲೀಗ್‌ಗಳನ್ನು ಸಹ ನಿರ್ವಹಿಸುತ್ತಿದ್ದಾರೆ.

ಅವರು ಮೇಜರ್ ಲೀಗ್ (MLC) ನಲ್ಲಿ ಟೆಕ್ಸಾಸ್ ಸೂಪರ್ ಕಿಂಗ್ಸ್ ಮತ್ತು SA20 ನಲ್ಲಿ ಜೋಬರ್ಗ್ ಸೂಪರ್ ಕಿಂಗ್ಸ್ ತಂಡದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. 2026ರ MLC ಆವೃತ್ತಿಯು ಜೂನ್ 18 ರಂದು ಪ್ರಾರಂಭವಾಗಲಿದೆ. ಆದ್ದರಿಂದ, ಆ ಪಂದ್ಯಾವಳಿಯಿಂದ ಅವರನ್ನು ತೆಗೆದುಹಾಕಲಾಗುವುದಿಲ್ಲ. ಆದಾಗ್ಯೂ, IPL 2027ರ ಆವೃತ್ತಿ ಮತ್ತು SA20ನಲ್ಲಿ ಪಾಲ್ಗೊಳ್ಳುವಿಕೆ ಬಗ್ಗೆ ಯೋಚಿಸಲು ಸಾಕಷ್ಟು ಸಮಯವಿದೆ.

ಈಮಧ್ಯೆ, ಎಂಎಸ್ ಧೋನಿ ಸಿಎಸ್‌ಕೆ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಿಲ್ಲ. ವಿಶ್ವನಾಥನ್ ಆ ನಿರ್ಧಾರವನ್ನು ಧೋನಿಗೆ ಬಿಟ್ಟಿದ್ದಾರೆ. ಅವರು ಮುಂದಿನ ವರ್ಷ ಆಟಕ್ಕೆ ಮರಳಬಹುದು ಅಥವಾ ಬೇರೆ ಹುದ್ದೆಯಲ್ಲಿ ಉಳಿಯಬಹುದು, ಅದು ಕೋಚ್ ಅಥವಾ ಮಾರ್ಗದರ್ಶಕರಾಗಬಹುದು ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com