ಕೆಪಿಎಸ್ಸಿ: ಕ್ರಿಮಿನಲ್ ಕೇಸ್ಗೆ ನಿರ್ಧಾರ

ಬೆಂಗಳೂರು: ಅಕ್ರಮ ಎಸಗಿದ ಕೆಪಿಎಸ್ಸಿ ಸದಸ್ಯರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ನಿರ್ಧರಿಸಿರುವ ರಾಜ್ಯ ಸರ್ಕಾರ ಆಯ್ಕೆ ಪಟ್ಟಿ ರದ್ದು ವಿಚಾರದಲ್ಲಿ ಹೈ ಕೋರ್ಟ್ ತೀರ್ಪಿನ ಪ್ರಕಾರ ನಡೆದುಕೊಳ್ಳಲು ಮುಂದಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಕಾನೂನು ಸಚಿವ ಜಯಚಂದ್ರ ಹೇಳಿದ್ದಿಷ್ಟು: 2011 ರಲ್ಲಿ ಆಯೋಗದ ಪರೀಕ್ಷಾ ಅಕ್ರಮದ ವಿಷಯ ಸಿಐಡಿ ತನಿಖೆಯಿಂದ ದೃಢಪಟ್ಟ ಹಿನ್ನೆಲೆಯಲ್ಲಿ 362 ಮಂದಿಯ ನೇಮಕ ರದ್ದುಗೊಳಿಸಲಾಗಿದೆ. ಕೆಪಿಎಸ್ಸಿ ಪಟ್ಟಿಯನ್ನು ಸರ್ಕಾರ ಒಪ್ಪಬೇಕು ಎಂದಿಲ್ಲ.
ಹೀಗಾಗಿ ವಿಧಾನಸಭೆ ಮಾತ್ರವೇ ಈ ಪಟ್ಟಿ ರದ್ದುಗೊಳಿಸಬೇಕು. ಸಚಿವ ಸಂಪುಟ ರದ್ದುಗೊಳಿಸಬಾರದು ಎಂಬ ವಾದ ಸರಿಯಲ್ಲ. ಎಂತೆಂಥ ಸ್ಥಾನದಲ್ಲಿ ಇದ್ದು ಬಂದ ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಟ್ಟಿ ರದ್ದಾದ ಮೇಲೆ ಅಭ್ಯರ್ಥಿಗಳನ್ನು ಭೇಟಿ ಮಾಡಿ ಅನುಕಂಪ ತೋರಿಸುವುದು ತಪ್ಪು ಸಂದೇಶ ರವಾನಿಸುತ್ತದೆ. ಸಿಐಡಿ ನೀಡಿದ ಮಧ್ಯಂತರ ವರದಿ ಆಧರಿಸಿ ಸರ್ಕಾರ ಈ ನಿರ್ಧಾರ ಕೈ ಗೊಂಡಿದೆ. ವ್ಯವಸ್ಥೆ ಸುಧಾರಿಸಲು ಕೆಲವೊಮ್ಮೆ ಇಂಥ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ.
ಅಡ್ವೊಕೇಟ್ ಜನರಲ್ ಅವರು ಮೈತ್ರಿ ಅವರ ಬಳಿ ದೂರು ಸ್ವೀಕರಿಸಿದ್ದರೂ ಅದನ್ನು ವ್ಯಾಪಕ ಚರ್ಚೆಗೆ ಒಳಪಡಿಸಲು ಕಾರಣನಾಗಿದ್ದೇ ನಾನು. ಅಡ್ವೊಕೇಟ್ ಜನರಲ್ ಅವರು ತಮಿಳುನಾಡಿನಲ್ಲಿ ಮಾಡಿದ ವಾದ ಮುಖ್ಯವಲ್ಲ. ನಾವು ಏನು ಕ್ರಮ ಕೈಗೊಂಡಿದ್ದೇವೆ ಎಂಬುದು ಮುಖ್ಯ. ಕಾರ್ಯದರ್ಶಿ ಸೇರಿದಂತೆ ಎಲ್ಲರ ವಿರುದ್ಧವೂ ಮೊಕದ್ದಮೆ ಹೂಡುವ ಕುರಿತು ಒಂದೆರಡು ದಿನಗಳಲ್ಲಿ ನಿರ್ಧರಿಸುವುದಾಗಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


