ಟ್ವೀಟರ್ ಇಂಡಿಯಾಗೆ ಬೆಂಗಳೂರು ಪೊಲೀಸರ ನೋಟಿಸ್!

ಟ್ವೀಟರ್
ಟ್ವೀಟರ್

ಬೆಂಗಳೂರು: ಇಸಿಸ್ ಟ್ವೀಟರ್ ಖಾತೆ ನಿರ್ವಾಹಕ ಶಂಕಿತ ಉಗ್ರ ಮೆಹದಿಯನ್ನು ಬಂಧಿಸಿರುವ ಬೆಂಗಳೂರು ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.

ಮೆಹದಿ ಮಸ್ರೂರ್ ಬಿಸ್ವಾಸ್ ಟ್ವೀಟರ್ ಖಾತೆಯ ಸಂಪೂರ್ಣ ವಿವರಗಳನ್ನು ನೀಡುವಂತೆ ಟ್ವೀಟರ್ ಇಂಡಿಯಾಗೆ ಬೆಂಗಳೂರು ಪೊಲೀಸರಿಂದ ಮತ್ತೊಮ್ಮೆ ನೋಟಿಸ್ ನೀಡಿದ್ದಾರೆ.

ಈಗಾಗಲೇ ನೋಟಿಸ್ ನೀಡಿದ್ದರು ಟ್ವೀಟರ್ ಇಂಡಿಯಾ ಪೂರ್ಣ ಮಾಹಿತಿ ನೀಡಿರಲಿಲ್ಲ. ಮೆಹದಿ ಮಾಡಿರುವ ಟ್ವಿಟ್‌ಗಳ ಸಂಪೂರ್ಣ ಮಾಹಿತಿ ಒದಗಿಸುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ.

ಇಸಿಸ್ ಉಗ್ರರು ಮೆಹದಿ ಟ್ವೀಟ್ ಫಾಲೇ ಮಾಡುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಲು ಪೊಲೀಸರು ಶಮಿ ವಿಟ್ನೆಸ್ ಟ್ವೀಟರ್ ಖಾತೆ ಪುನಾರಂಭಿಸಿದ್ದಾರೆ. ಟ್ವೀಟರ್ ಅಕೌಂಟ್ ಆಕ್ಟೀವ್ ಮಾಡುವ ಮೂಲಕ ಭಾರತದಲ್ಲಿ ಮೆಹದಿಯ ಜತೆ ನಂಟು ಹೊಂದಿರುವರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com