ಸ್ಪಾ ಮೇಲೆ ದಾಳಿ ಯುವತಿಯರ ರಕ್ಷಣೆ

ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕ್ರೆಸೆಂಟ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಪಾ ಹೆಸರಿನಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಕ್ರೆಸೆಂಟ್ ರಸ್ತೆ ಸಮೀಪದ ಫೇಸಸ್ ಯೂನಿಸೆಕ್ಸ್ ಸ್ಪಾ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಮೂವರನ್ನು ಬಂಧಿಸಿ ಇಬ್ಬರು ಯುವತಿಯರನ್ನು ರಕ್ಷಿಸಿದ್ದಾರೆ.

ಚಾಮರಾಜಪೇಟೆ ನಿವಾಸಿ, ಸ್ಪಾ ಮಾಲೀಕ ನಾರಾಯಣ ಹಾಗೂ ಸಹಚರರಾದ ಥಣಿಸಂದ್ರ ನಿವಾಸಿ ಕುಮಾರ್ ಹಾಗೂ ಮಂಗಳೂರು ಮೂಲದ ಕುಶಾಲ್ ಬಂಧಿತರು.

ದಾಳಿ ವೇಳೆ ನಾಗಲ್ಯಾಂಡ್ ಹಾಗೂ ಕೋಲ್ಕತ್ತಾ ಮೂಲದ ಇಬ್ಬರು ಯುವತಿಯರನ್ನು ಪೊಲೀಸರು ರಕ್ಷಿಸಿದ್ದಾರೆ. ಆರೋಪಿಗಳು ಸ್ಪಾ ಹೆಸರಿನಲ್ಲಿ ಬಾಟಿ ಟೂ ಬಾಡಿ ಮಸಾಜ್ ಮೂಲಕ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು ಎಂದು ಸಿಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com