ಜಿಲ್ಲಾ ಸುದ್ದಿ

ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ರವೀಂದ್ರನಾಥ್‌ಗೆ ಸನ್ಮಾನ

ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘ ಭಾನುವಾರ...

ರಾಜೀವಗಾಂಧಿ ಆರೋಗ್ಯ ವಿವಿ ಕುಲಪತಿ ಡಾ.ರವೀಂದ್ರನಾಥ್‌ಗೆ ಸನ್ಮಾನ
ಡಾ. ರವೀಂದ್ರನಾಥರ ಸನ್ಮಾನ ಸಮಾರಂಭ
Published On :

ಬೆಂಗಳೂರು: ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘ ಭಾನುವಾರ ರಾಜೀವಗಾಂಧಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ರವೀಂದ್ರನಾಥ ಅವರನ್ನು ಸನ್ಮಾನಿಸಿತು.

ನಗರದ ಜಯನಗರ 3ನೇ ಬ್ಲಾಕ್ ನ ಎನ್.ಎಂ.ಕೆ.ಆರ್.ವಿ. ಪಿ.ಯು. ಕಾಲೇಜು ಕ್ಯಾಂಪಸ್ ನ ಮಂಗಳ ಮಂಟಪ ಅಡಿಟೋರಿಯಂನಲ್ಲಿ ಮಾಜಿ ಶಾಸಕ, ಕರ್ನಾಟಕ ರಾಜ್ಯ ಉಪ್ಪಾರ ಕ್ಷೇಮಾಭಿವೃದ್ಧಿ ವಿವಿದೋದ್ದೇಶ ಮತ್ತು ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ಎಚ್.ಸಿ ನೀರಾವರಿ ಅವರು ಡಾ. ರವೀಂದ್ರನಾಥ ಅವರನ್ನು ಸಂಘದ ವತಿಯಿಂದ ನೆನಪಿನ ಕಾಣಿಕೆಯೊಂದಿಗೆ ಸನ್ಮಾನಿಸಿದರು.

ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ರವೀಂದ್ರನಾಥ್ ಅವರು, ಸಮಾಜದ ಎಲ್ಲಾ ಪ್ರಥಿಭಾವಂತರಿಗೆ ಗೌರವ ಸಿಗಬೇಕು. ವೈದ್ಯರಾಗಿ ನನ್ನ ಕೆಲಸ ಖುಷಿ ತಂದಿದೆ. ಆರೋಗ್ಯಕ್ಕಾಗಿ ಪ್ರತಿಯೊಬ್ಬರು ವ್ಯಾಯಾಮ ಮಾಡಬೇಕು ಎಂದರು.

ಇದೇ ವೇಳೆ, ಉಪ್ಪಾರ ಸಮಾಜದ ಪ್ರತಿಭಾವಂತ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಯಿತು. ಕಾರ್ಯಕ್ರಮವನ್ನು ಹನುಮಾಕ್ಷಿ ಗೋಗಿ ಅವರು ನಿರೂಪಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.