ಬಾಲಕಿಯರಿಗೆ ಲೈಂಗಿಕ ಕಿರುಕುಳ: ಅಪ್ಪ, ಮಗನ ಸೆರೆ

ಅಪ್ರಾಪ್ತೆಯನ್ನು ಕೆಲಸಕ್ಕೆ ಇಟ್ಟು ಕೊಂಡಿದ್ದಲ್ಲದೇ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ...
ಬಾಲಕಿಯರಿಗೆ ಲೈಂಗಿಕ ಕಿರುಕುಳ: ಅಪ್ಪ, ಮಗನ ಸೆರೆ
Updated on: 

ಬೆಂಗಳೂರು: ಅಪ್ರಾಪ್ತೆಯನ್ನು ಕೆಲಸಕ್ಕೆ ಇಟ್ಟು ಕೊಂಡಿದ್ದಲ್ಲದೇ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದ ಮನೆ ಮಾಲೀಕ ಹಾಗೂ ಆತನ ಪುತ್ರನನ್ನು ಅಶೋಕ ನಗರ ಪೊಲೀಸರು ಬಂಧಿಸಿದ್ದಾರೆ.

ಅಶೋಕನಗರ ಸಮೀಪದ ವಿಕ್ಟೋರಿಯಾ ಬಡಾವಣೆ ನಿವಾಸಿ ಅಜೀಜ್ ವುಲ್ಲಾ ಖಾನ್(58) ಮತ್ತು ಸಾದಿಕ್ ಅಹ್ಮದ್(37) ಬಂಧಿತರು.

ಚರ್ಮದ ಚೀಲ ತಯಾರಿಕಾ ಕಾರ್ಖಾನೆ ಮಾಲೀಕನಾದ ಅಜೀವುಲ್ಲಾ ಖಾನ್, ಕಳೆದ 6 ತಿಂಗಳಿಂದ ಬಳ್ಳಾರಿ ಮೂಲದ 12ರಿಂದ 13 ವರ್ಷದ ಮೂವರು ಬಾಲಕಿಯರನ್ನು ಕೆಲಸಕ್ಕೆ ಇಟ್ಟುಕೊಂಡಿದ್ದ.

ಅಪ್ರಾಪ್ತೆಯರನ್ನು ಕೆಲಸಕ್ಕೆ ಇರಿಸಿಕೊಂಡಿದ್ದಲ್ಲದೇ ಲೈಂಗಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದರು.

ಇದರಿಂದ ನೊಂದ ಬಾಲಕಿಯರು 2 ದಿನದ ಹಿಂದೆ ಮನೆಯಿಂದ ತಪ್ಪಿಸಿಕೊಂಡು ಊರಿಗೆ ಹೋಗಲು ಸಿಟಿ ರೈಲು ನಿಲ್ದಾಣಕ್ಕೆ ಬಂಧಿದ್ದರು ಈ ವೇಳೆ ಸರ್ಕಾರೇತರ ಸಂಸ್ಥೆಯೊಂದರ(ಎನ್‌ಜಿಒ) ಕಾರ್ಯಕರ್ತರು ಬಾಲಕಿಯರನ್ನು ರಕ್ಷಣೆ ಮಾಡಿ ಅವರಿಂದ ಮಾಹಿತಿ ಪಡೆದು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು.

ಎನ್‌ಜಿಒ ಹಾಗೂ ಮಕ್ಕಳ ಕಲ್ಯಾಣ ಸಮಿತಿಯ ದೂರಿನ ಮೇಲೆ ಪೋಕ್ಸೊ ಕಾಯಿದೆ ಅನ್ವಯ ಪ್ರಕರಣ ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com