ಜಿಲ್ಲಾ ಸುದ್ದಿ

ಕವಿವಿಯಲ್ಲೀಗ ವರ್ಗಾವಣೆ ಭೀತಿ

ಕವಿವಿಯಲ್ಲೀಗ ವರ್ಗಾವಣೆ ಭೀತಿ
Published On :

ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಚಂದ್ರಮಾ  ಕಣಗಲಿ ಅವರಿಗೆ ಕುಲಪತಿ ಡಾ. ವಾಲೀಕಾರ ಅವರ ಮೇಲಿನ ಸಿಟ್ಟು, ದ್ವೇಷದ ಕಿಡಿ ಇನ್ನೂ ಆರಿಲ್ಲ!

ಕುಲ ಸಚಿವರ ದೂರಿನ ಅನ್ವಯ ಭ್ರಷ್ಟಾಚಾರದ ಆರೋಪದ ಮೇಲೆ ಡಾ. ವಾಲೀಕಾರ ಬಂಧನವಾದ ಬಳಿಕ ವಿಶ್ವವಿದ್ಯಾಲಯದ ಎಲ್ಲ ವಿಭಾಗಗಳಲ್ಲಿನ ಪ್ರಮುಖ ಹುದ್ದೆ ಅಲಂಕರಿಸಿದ ಅದರಲ್ಲೂ ಡಾ.ವಾಲೀಕರ ಅವರಿಗೆ ತುಸು ಆಪ್ತರಾದ ಸಿಬ್ಬಂದಿ ಗುರುತಿಸಿ ಅ.29ರಂದು ಬೇರೆ ಬೇರೆ ವಿಭಾಗಗಳಿಗೆ ಎತ್ತಂಗ ಮಾಡಿ ನೂತನ ಕುಲಪತಿ ಮೂಲಕ ಆದೇಶ ಹೊರಡಿಸಿದ್ದಾರೆ.

ಸೇವೆ ಸಲ್ಲಿಸುತ್ತಿರುವ ವಿಭಾಗದಿಂದ ತಕ್ಷಣ ಬಿಡುಗಡೆ ಹೊಂದಿ ಸ್ಥಳಾಂತರಗೊಂ ವಿಭಾಗಕ್ಕೆ ಹಾಜರಾಗಿ ವಿಭಾಗದ ಮುಖ್ಯಸ್ಥರ ಮುಖಾಂತರ ಹಾಜರಾತಿ ವರದಿ ಸಲ್ಲಿಸಲು ಆದೇಶಿಸಲಾಗಿದೆ. ತಪ್ಪಿದರೆ ನಿಯಮಾನುಸಾರ ಕ್ರಮ ಜರಗಿಸುವುದಾಗಿ ವರ್ಗಗೊಂಡ ಸಿಬ್ಬಂದಿಗೆ ನೋಟಿಸ್  ನೀಡಲಾಗಿದೆ.

21 ನೌಕರರ ವರ್ಗ

ಪ್ರಸ್ತುತ ವಿಶ್ವವಿದ್ಯಾನಿಲಯದ 21  ಸಿಬ್ಬಂದಿಯನ್ನು ವರ್ಗಗೊಳಿಸಿದ್ದು, ಒಟ್ಟು 80 ಜನರ ಪಟ್ಟಿ ಸಿದ್ಧಗೊಂಡಿದೆ. ಹಂತ ಹಂತವಾಗಿ ವರ್ಗ ಮಾಡಲಾಗುತ್ತದೆ ಎಂಬ ಮಾಹಿತಿ ಕನ್ನಡಪ್ರಭಕ್ಕೆ ದೊರಕಿದೆ. ಡಾ. ವಾಲೀಕಾರ ಅವರು ನಾಲ್ಕು ವರ್ಷಗಳ ಆಡಳಿತದಲ್ಲಿ ಯಾವ ಸಿಬ್ಬಂದಿ ಜತೆ ಉತ್ತಮ ಸಂಬಂಧ ಹೊಂದಿದ್ದರೂ ಅಂತಹ ಎಲ್ಲ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನುವ ಮಾತುಗಳು ವಿವಿಯಲ್ಲಿ ಕೇಳಿ ಬರುತ್ತಿವೆ. ಇದರಿಂದ ಸಿಬ್ಬಂದಿಗೆ ಭಯ ಹುಟ್ಟಿದ್ದು, ಯಾರನ್ನು ಎಲ್ಲಿಗೆ ವರ್ಗ ಮಾಡುತ್ತಾರೆ ಎಂಬ ಕುತೂಹಲ ಮೂಡಿದೆ.

ಸದ್ಯಕ್ಕೆ ಯಾರ್ಯಾರು?
ಮೊದಲ ಪಟ್ಟಿಯಲ್ಲಿ ಸಂಪರ್ಕ ಶಿಕ್ಷಣ  ವಿದ್ಯಾಲಯ ಉಪಕುಲ ಸಚಿವರಾಗಿದ್ದ ವೈ.ಎಂ ಸಮಗಾರ, ಸಹಾಯಕ ಕುಲಸಚಿವ ಎಚ್.ವೈ .ಈರಾಪುರ, ಎಸ್ಸಿ-ಎಸ್ಟಿ ಸೆಲ್ ಉಪ ಕುಲಸಚಿವ ಎಸ್.ಪಿ  ಹಲಗಿ, ವಿದ್ಯಾಮಂಡಳದ ಉಪ ಕುಲಸಚಿವ  ಆರ್.ಎಂ. ನಾಯಕ, ಡಿಪಿಎಆರ್ ಸಹಾಯಕ ಕುಲಸಚಿವ, ಎನ್.ಜಿ ಗರಗ, ಅಧೀಕ್ಷಕ ಆರ್. ಎಸ್. ಸಾಧನಿ, ಪರೀಕ್ಷಾ ವಿಭಾಗದ ಅಧೀಕ್ಷಕ ಎ.ಕೆ ಹಾಸನ, ಹಣಕಾಸು  ವಿಭಾಗದ ಅಧೀಕ್ಷಕ ಎನ್.ಆರ್ ಸಾಧನಿ, ಮೌಲ್ಯ ಮಾಪನ ಕುಲಸಚಿವರ ಆಪ್ತ ಸಹಾಯಕ ಎಸ್.ಎಚ್ ಮಡಿಗಾರ, ಕೇಂದ್ರ ಕಾರ್ಯಾಗಾರದ ಅಧಿಕಾರಿ ಎ.ವೈ  ಶಿರಹಟ್ಟಿ, ಕರ್ನಾಟಕ ಕಲಾ ಕಾಲೇಜಿವ ಅಧೀಕ್ಷಕ ಎಚ್.ಬಿ ಬಗರೀಕರ, ಯುಸಿಕ್ ವಿಭಾಗದ ಕಿರಿಯ ಇಂಜಿನಿಯರ್, ಎಸ್.ವಿ ಮ್ಯಾಗೋಟಿ, ಕರ್ನಾಟಕ ವಿಜ್ಞಾನ ಕಾಲೇಜಿವ ಕಿರಿಯ ಸಹಾಯಕ ಎಸ್.ಬಿ ಹಿರೇಮಠ, ಕುಲಸಚಿವರ ಕಾರ್ಯಾಲಯದ ಹಿರಿಯ ಸಹಾಯಕ ಎಂ.ಬಿ ಶಹಾಪುರ, ಕಟ್ಟಡ ವಿಭಾಗದ ಕಿರಿಯ ಸಹಾಯಕ ವಿ.ವಿ. ವಕ್ರ, ರಸಾಯನ ಶಾಸ್ತ್ರ ವಿಭಾಗದ ಕಿರಿಯ ಸಹಾಯಕ ಎ.ಬಿ. ನೇಗಿನಹಾಳ ಸೇರಿದಂತೆ ಕುಲಪತಿ , ಹಣಕಾಸು ವಿಭಾಗದ , ಪರೀಕ್ಷಾ ವಿಭಾಗದ, ವಿದ್ಯಾರ್ಥಿ  ಕಲ್ಯಾಣ ವಿಭಾಗದ ಹಾಗೂ ಕುಲಸಚಿವರ ಕಾರ್ಯಾಲಯದ ವಾಹನ ಚಾಲಕರನ್ನು ಸಹ ವರ್ಗ ಮಾಡಲಾಗಿದೆ.

ಸರಿ ತಪ್ಪುಗಳ ಮಾತುಕತೆ
ಏನೂ ತಪ್ಪು ಮಾಡದ ಯಾರ ಜತೆಗೂ ಗುರುತಿಸಿಕೊಳ್ಳದ ಸಿಬ್ಬಂದಿ ಇದೀಗ ವರ್ಗಗೊಂಡು ಮನಸ್ಸಿಲ್ಲದಿದ್ದರೂ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡುವಂತಾಗಿದೆ.  ಕುಲಪತಿ ಹಾಗೂ ಕುಲಸಚಿವರ ದ್ವೇಷ ವಿಶ್ವವಿದ್ಯಾಲಯದ ಸಿಬ್ಬಂದಿ ಮೇಲೂ ಪರಿಣಾಮ ಬೀರುತ್ತಿರುವುದು ಒಳ್ಳೆಯ ತಜ್ಞರು ವಿಶ್ಲೇಷಿಸಿದರೆ, ಬಹಳ ವರ್ಷಗಳಿಂದ ಒಂದೆಡೆ ಕೆಲಸ ಮಾಡಿ ಜಿಡ್ಡುಗಟ್ಟಿದ ಆಡಳಿತಕ್ಕೆ ಚುರುಕು ಮುಟ್ಟಿದೆ ಎಂಬ ಮಾತುಗಳು  ಕೇಳಿ ಬಂದಿವೆ. ಇದೀಗ ವರ್ಗಗೊಂಡ ಕವಿವಿ ಸಿಬ್ಬಂದಿ ಜತೆಗೆ 17 ದಿನಗಳಿಂದ ಸಂಚಿತ ವೇತನಕ್ಕಾಗಿ ಧರಣಿ ಕುಳಿತಿರುವ 500ಕ್ಕೂ ಹೆಚ್ಚು ಗುತ್ತಿಗೆ ನೌಕರಿಗೂ ಕುಲಸಚಿವರಾದ ಚಂದ್ರಮಾ ಕಣಗಲಿ ಅವರ ಮೇಲಿನ ಸಿಟ್ಟು ನೆತ್ತಿಗೇರಿದೆ. 17 ದಿನಗಳಾದರೂ ಸಂಚಿತ ವೇತನ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತಿಲ್ಲ ಎಂದು ಕುಲಸಚಿವರ ಮೇಲೆ ಧರಣಿ ಕುಳಿತ ಗುತ್ತಿಗೆ ನೌಕರರು ಅಸಮಧಾನ ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.