ಶವಪರೀಕ್ಷೆಯ ವರದಿಯನ್ನು ಕನ್ನಡದಲ್ಲೇ ಬರೆವ ವೈದ್ಯ

ಮಂಡ್ಯ: ಕನ್ನಡದಲ್ಲಿ ನ್ಯಾಯಾಲಯ ಕಲಾಪ ನಡೆಯಲಿ, ಕನ್ನಡದಲ್ಲೇ ತೀರ್ಪು ಬರಲಿ ಎಂಬುದು ಬಹು ದಿನಗಳ ಒತ್ತಾಸೆ. ಆದರೆ ಇಲ್ಲೊಬ್ಬ ವೈದ್ಯರು, ಕನ್ನಡದಲ್ಲೇ ಶವ ಪರೀಕ್ಷೆ ವರದಿ ಕೊಡುವ ಮೂಲಕ ವಿಶಿಷ್ಟ ಕನ್ನಡ ಸೇವೆ ಮಾಡುತ್ತಿದ್ದಾರೆ.
ಇವರ ಹೆಸರು ಡಾ.ಎಂ.ಶಿವಣ್ಣ, ನಾಗಮಂಗಲ ತಾಲ್ಲೂಕು ಬಿ.ಜಿ.ನಗರದ ಆದಿಚುಂಚನಗಿರಿ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಧ್ಯಾಪಕ ಮತ್ತು ಸ್ಥಾನಿಕ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವೈದ್ಯರ ಭಾಷೆ ಸರಳವಾಗಿರಬೇಕು ಎಂಬುದು ಶಿವಣ್ಣ ಅವರ ಉದ್ದೇಶ. ಹೀಗಾಗಿಯೇ ಅವರ ಕನ್ನಡದಲ್ಲಿ ಮರಣೋತ್ತರ ಪರೀಕ್ಷಾ ವರದಿ ನೀಡುತ್ತಿದ್ದಾರೆ. ಇದು 20ವರ್ಷಗಳ ಸೇವೆ. ವಿಶೇಷವೆಂದರೆ ಇದುವರೆಗೂ ಎಲ್ಲಿಂದಲೂ ಆಕ್ಷೇಪ ಕೇಳಿಬಂದಿಲ್ಲ. ಇವರ ಸಹಪಾಠಿಗಳೂ ಇದರಿಂದ ಪ್ರೇರಿತರಾಗಿದ್ದಾರೆ.
ಕನ್ನಡದಲ್ಲೇ ಶಿಕ್ಷಣ: ಶಿವಣ್ಮ ಅವರು ಮೂಲತಃ ಮೈಸೂರಿನ ಕುಂಬಾರ ಕೊಪ್ಪಲಿನವರು. ಕಲಿತದ್ದು ಕನ್ನಡ ಮಾಧ್ಯಮದಲ್ಲಿ. ತಂದೆ ಮರೀಗೌಡರು ಪಿ.ಕ. ಸ್ಯಾನಿಟೋರಿಯಂ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿದ್ದರು. ತಂದೆ ನೋಡಲು ಆಸ್ಪತ್ರೆಗೆ ಹೋದಾಗಲೆಲ್ಲಾ, ಕ್ಷಯರೋಗಿಗಳನ್ನು ಕಂಡು ನೋವಾಗುತ್ತಿತ್ತಂತೆ. ಹೀಗಾಗಿಯೇ ವೈದ್ಯನಾಗಬೇಕು ಎಂಬ ಕನಸುಕಂಡು ನನಸು ಮಾಡಿಕೊಂಡಿದ್ದಾರೆ.
ಶಿವಣ್ಣ ವೈದ್ಯಕೀಯ ಸೇವೆ: ಹಳ್ಳಿಗಾಡಿನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿ ಬಡಜನರಿಗೆ ಸ್ಪಂದಿಸಿರುವ ಡಾ.ಶಿವಣ್ಣ, ಕನ್ನಡ ಬಗ್ಗೆ ಉತ್ಕಟ ಅಭಿಮಾನ ಬೆಳೆಸಿಕೊಂಡಿದ್ದಾರೆ.
ಕನ್ನಡದಲ್ಲಿರಲಿ ವೈದ್ಯ ಶಿಕ್ಷಣ
ಜಪಾನ್, ಚೀನಾದಂಥ ದೇಶಗಳಲ್ಲಿ ಮಾತೃಭಾಷೆಗಳಲ್ಲಿಯೇ ವೈದ್ಯ ಶಿಕ್ಷಣ ನೀಡಲಾಗುತ್ತಿದೆ. ನಮ್ಮಲ್ಲಿ ಏಕಿಲ್ಲ ಎಂಬುದು ಇವರ ಪ್ರಶ್ನೆ. ಧರಂಸಿಂಗ್ ಮುಖ್ಯಮಂತ್ರಿಯಾಗಿದ್ದ ವೇಳೆ ಈ ಬಗ್ಗೆ ಚರ್ಚೆಯಾಗಿತ್ತು. ಆದರೆ ಜಾರಿಯಾಗಿರಲಿಲ್ಲ. ಈಗಲೂ ಸರ್ಕಾರದ ಮಟ್ಟದಲ್ಲಿ ಇಂತಹುದೊಂದು ಚಿಂತನೆ ಪ್ರಾರಂಭವಾಗಬೇಕಿದೆ. ವೈದ್ಯ ಶಿಕ್ಷಣಕ್ಕೆ ಬೇಕಿರುವ ಪುಸ್ತಕಗಳನ್ನು ಡಾ.ಚಂದ್ರಶೇಖರ ಮತ್ತು ಬಿಎಂ ಹೆಗಡೆ ಸೇರಿದಂತೆ ಅನೇಕ ವೈದ್ಯರು ಬರೆದಿದ್ದಾರೆ. ಸರ್ಕಾರದ ಉತ್ತೇಜನ ಸಿಕ್ಕಿದ್ರೆ ಬಹಳಷ್ಟು ವೈದ್ಯರು ಕನ್ನಡದಲ್ಲೇ ಪುಸ್ತಕ ಬರೆಯಲು ಸಿದ್ದರಿದ್ದಾರೆ ಎಂಬುದು ಶಿವಣ್ಣ ಅವರ ಮಾತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


