ಅರಮನೆಯ ದರ್ಬಾರ್ ಸಂಭಾಂಗಣಕ್ಕೆ ಬಂತು ರತ್ನ ಸಿಂಹಾಸನ

ಮೈಸೂರು: ನಾಡಹಬ್ಬ ದಸರಾ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಅಂಬಾವಿಲಾಸ ಅರಮನೆಯ ದರ್ಬಾರ್ ಸಭಾಂಗಣದಲ್ಲಿ ರತ್ನಖಚಿತ ಸಿಂಹಾಸವನ್ನು ಗುರುವಾರ ಜೋಡಿಸಲಾಯಿತು.
ಸಿಂಹಾಸನ ಸೆ.25 ರಿಂದ ಅಕ್ಟೋಬರ್ 4 ರವರೆಗೆ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರುತ್ತದೆ. ಈ ಅವಧಿಯಲ್ಲಿ ಮೈಸೂರು ರಾಜ ಮನೆತನದ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲಿಟ್ಟು ಪೂಜೆ ಸಲ್ಲಿಸಲಾಗುತ್ತದೆ. ಸಿಂಹಾಸನ ಅಳವಡಿಸಿರುವು ದರ್ಬಾರ್ ಹಾಲ್ನಲ್ಲಿ ಸುತ್ತಲೂ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ. ಗುರುವಾರ ಒಡೆಯರು ಕುಟಂಬದ ಆಪ್ತ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿ ಸಿಂಹಾಸನವನ್ನು ಹೊರ ತೆಗೆದು ಪೂಜೆ ಸಲ್ಲಿಸಿದರು.
ಬಳಿಕ ಪೊಲೀಸ್ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ದರ್ಬಾರ್ ಹಾಲ್ನಲ್ಲಿ ಗೆಜ್ಜಗಳ್ಳಿಯ ವೀರಶೈವ ಕುಟುಬಂದವರು ಮೊದಲು ಮರದ ದಿಮ್ಮಿಯನ್ನಿಟ್ಟು, ಅದರ ಸುತ್ತ ಸಿಂಹಾಸನದ ಆರು ಭಾಗಗಳನ್ನು ಜೋಡಿಸಿ, ಕಾಲುಗಳನ್ನು ಅಳವಡಿಸಿದರು. ಬಳಿಕ ಪುರೋಹಿತರು ರತ್ನಖಚಿತ ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಬಿಳಿಯ ಬಟ್ಟೆಯಿಂದ ಮುಚ್ಚಿದರು.
ದಸರಾ ಮಹೋತ್ಸವ ಮುಗಿದ ಬಳಿಕ (ಅ.4) ಅದೇ ಗೆಜ್ಜಗಳ್ಳಿ ಕುಟುಂಬದವರು ಸಿಂಹಾಸನವನ್ನು ಮೂಲಸ್ಥಾನದಲ್ಲಿ ಇರಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


