ಜಿಲ್ಲಾ ಸುದ್ದಿ

ಅಕ್ಟೋಬರ್ 10ರಿಂದ ಜ್ಯುಯಲ್ಸ್ ಆಫ್ ಇಂಡಿಯಾ ಆಭರಣ ಮೇಳ

ಅಕ್ಟೋಬರ್ 10ರಿಂದ ಜ್ಯುಯಲ್ಸ್ ಆಫ್ ಇಂಡಿಯಾ ಆಭರಣ ಮೇಳ
Published On :

ಬೆಂಗಳೂರು: ‘ಜ್ಯುಯಲ್ಸ್ ಆಫ್ ಇಂಡಿಯಾ' ದ ಆಭರಣ ಪ್ರದರ್ಶನ ಮೇಳ ಅಕ್ಟೋಬರ್ 10ರಂದು ಆರಂಭವಾಗಲಿದೆ. ದೇಶದ ಪ್ರಸಿದ್ಧ ಆಭರಣ ತಯಾರಕರಿಂದ ವಿನ್ಯಾಸಗೊಂಡ ಬಗೆಬಗೆಯ ವಿನ್ಯಾಸದ ಆಭರಣಗಳು ಈ ಮೇಳದಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಅಕ್ಟೋಬರ್ 10ರಿಂದ 13ರವರೆಗೆ ನಗರದ ಸೇಂಟ್ ಜೋಸೆಫ್ಸ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ಮೇಳ ಆಯೋಜನೆಗೊಂಡಿದ್ದು,  ಜ್ಯುಯಲ್ಸ್ ಆಫ್ ಇಂಡಿಯಾದ ರಾಯಭಾರಿಗಳು ಕೂಡ ಆಗಿರುವ  ನಟಿಯರಾದ ಪ್ರಣೀತಾ ಸುಭಾಶ್ ಹಾಗೂ ಅನು ಪ್ರಭಾಕರ್ ಮೇಳವನ್ನು ಉದ್ಘಾಟಿಸಲಿದ್ದಾರೆ.

"ಈ ಹಿಂದಿನ ಪ್ರದರ್ಶನದಲ್ಲಿ ಸಿಕ್ಕ ಯಶಸ್ಸಿನಿಂದ ಉತ್ತೇಜನಗೊಂಡಿರುವ ಆಯೋಜಕರು ಈ ಬಾರಿ ಹೊಸ ಬಗೆಯ ಮತ್ತು  ಸಾಂಪ್ರದಾಯಿಕ, ಪಾರಂಪರಿಕ ಆಭರಣಗಳು ಹಾಗೂ ಇನ್ನೂ ಹೆಚ್ಚಿನ ಆಭರಣಗಳನ್ನು ಇಲ್ಲಿ ಪ್ರದರ್ಶಿಸಲು ತಿರ್ಮಾನಿಸಲಾಗಿದೆ. ದೇಶದ ಪ್ರಖ್ಯಾತ 100ಕ್ಕೂ ಅಧಿಕ ಆಭರಣ ತಯಾರಕರು ಸಿದ್ಧಪಡಿಸಿದ ಆಭರಣಗಳು ಒಂದೇ ಸೂರಿನಡಿ ಲಭ್ಯ ಎನ್ನುವುದೇ ವಿಶೇಷ''.

"ಪ್ರಖ್ಯಾತ ಆಭರಣ ತಯಾರಕರು ಸಿದ್ಧಪಡಿಸಿದ ಚಿನ್ನ, ವಜ್ರ, ಹರಳು ಹಾಗೂ ಆಭರಣಗಳ ವಿಸ್ತೃತ ಶ್ರೇಣಿಯ ವಿನ್ಯಾಸಗಳನ್ನು ನೋಡಬಹುದು. ಜ್ಯುಯಲ್ಸ್ ಆಫ್ ಇಂಡಿಯಾದಲ್ಲಿ ದಕ್ಷಿಣ ಭಾರತದ ಪ್ರಖ್ಯಾತ ಆಭರಣ ತಯಾರಕರು ಪಾಲ್ಗೊಳ್ಳಲಿದ್ದಾರೆ" ಎಂದು ಆಯೋಜಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಹಾಗೂ ನೋಂದವಣೆಗೆ ಸಾರ್ವಜನಿಕರು ಸಂಪರ್ಕಿಸಿ:-
72595 14859 / 9916223237/ 080 23466808

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.