

ಬೆಂಗಳೂರು: ಬೆಂಗಳೂರಿನ ಇಸ್ಕಾನ್ ಜಾಗದ ಮಾಲೀಕತ್ವ ಪ್ರಶ್ನಿಸಿ ಮುಂಬೈ ಇಸ್ಕಾನ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಗುರುವಾರ ವಜಾಗೊಳಿಸಿದೆ.
ಬೆಂಗಳೂರಿನ ಇಸ್ಕಾನ್‍ನ ಹರೇ ಕೃಷ್ಣ ಗಿರಿ ದೇವಸ್ಥಾನದ ಮೂಲ ಹಕ್ಕುದಾರರು ತಾವಾಗಿದ್ದು ಅದನ್ನು ಮುಂಬೈ ಇಸ್ಕಾನ್ ವಶಕ್ಕೆ ನೀಡಬೇಕೆಂದು ಕೋರಿ ಶ್ಯಾಮ್ ಸುಂದರ್ ಅಸ್ರಾಣಿ ಮತ್ತು ಪ್ರಸನ್ನಾತ್ಮದಾಸ್ ಸೇರಿ ಹಲವರು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು.
ವಿಚಾರಣೆ ನಡೆಸಿದ ನ್ಯಾ.ಆನಂದ್ ಭೈರಾರೆಡ್ಡಿ ಪೀಠ, ಇಸ್ಕಾನ್ ಬೆಂಗಳೂರಿನ ದೇವಸ್ಥಾನದ ಆಡಳಿತ ಮಂಡಳಿ ತನ್ನದೆಂದು ಹೇಳಲು ಮುಂಬೈ ಇಸ್ಕಾನ್‍ಗೆ ಯಾವುದೇ ಅಧಿಕಾರವಿಲ್ಲ ಎಂದು ಆದೇಶಿಸಿ ಅರ್ಜಿ ವಜಾಗೊಳಿಸಿದೆ.
ಈ ಹಿಂದೆ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಅಧೀನ ನ್ಯಾಯಾಲಯದಲ್ಲಿ ಮುಂಬೈ ಇಸ್ಕಾನ್ ಅರ್ಜಿ ದಾಖಲಿಸಿತ್ತು. ವಿಚಾರಣೆ ನಡೆಸಿದ್ದ ಅಧೀನ ನ್ಯಾಯಾಲಯ ಅರ್ಜಿ ವಜಾಗೊಳಿತ್ತು. ಇದನ್ನು ಪ್ರಶ್ನಿಸಿ ಮುಂಬೈ ಇಸ್ಕಾನ್‍ನ ಕೆಲವು ಭಕ್ತ ಸಮೂಹ ಹೈಕೋರ್ಟ್ ಮೆಟ್ಟಿಲೇರಿದ್ದರು.