

ಬೆಂಗಳೂರು: ರಾಜ್ಯದಲ್ಲಿ ಭಾನುವಾರ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಗರ ತಾಲೂಕಿನ ಗೇರುಬೀಸು ಗ್ರಾಮದ ರೈತ ರಾಮಪ್ಪ (52) ವಿಷ ಸೇವಿಸಿದ್ದಾರೆ.
ಅವರು ತಮ್ಮ 4.15 ಎಕರೆ ಜಮೀನಿನಲ್ಲಿ ಹತ್ತಿ ಮತ್ತು ಜೋಳ ಬೆಳೆದು ಕೈ ಸುಟ್ಟುಕೊಂಡಿದ್ದರು. ಒಟ್ಟು ರು.3 ಲಕ್ಷ ಸಾಲ ಮಾಡಿದ್ದರು. ಕೃಷಿಗೆ ಬೇಕಿದ್ದ ಹೆಚ್ಚಿನ ಸಾಲಕ್ಕೆ ಎಲ್ಲಿ ಪ್ರಯತ್ನಿಸಿದರೂ ಸಿಗದಿದ್ದಕ್ಕೆ ಈ ನಿರ್ಧಾರ ಕೈಗೊಂಡಿದ್ದಾರೆ.
ಎಚ್.ಡಿ. ಕೋಟೆ ತಾಲೂಕಿನಹೊಸಹೊಳಲು ಗ್ರಾಮದ ರೈತ ಸ್ವಾಮಿ (36) ನೇಣಿಗೆ ಶರಣಾಗಿದ್ದಾರೆ. ರು.3.50 ಲಕ್ಷ ಸಾಲವಿತ್ತು. ಮಂಡ್ಯ ತಾಲೂಕಿನ ಬಿ.ಗೌಡಗೆರೆ ಗ್ರಾಮದ ನವೀನ್ ಕುಮಾರ್ (26) ನೇಣು ಬಿಗಿದುಕೊಂಡಿದ್ದಾರೆ. ಜಮೀನು ಅಡವಿಟ್ಟು ರು.3 ಲಕ್ಷ ಸಾಲ ಪಡೆದಿದ್ದರು. ಚಿತ್ರದುರ್ಗದ ಭರಮಸಾಗರ ಸಮೀಪದ ಇಸಾಮುದ್ರ ಗೊಲ್ಲರಹಟ್ಟಿ ರೈತ ಭೀಮಾನಾಯ್ಕ (55) ನೇಣಿಗೆ ಕೊರಳೊಡ್ಡಿದ್ದಾರೆ. ಇವರು 3.3 ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಮಳೆಯಿಲ್ಲದೆ ನಾಶವಾಗಿತ್ತು. <4 ಲಕ್ಷ ಸಾಲವಿದ್ದರಿಂದ ಹೆದರಿದ್ದರು