ಉಗ್ರ ರೂಪಿ ಹೋರಾಟ

ಕಳಸಾ-ಬಂಡಾರಿ ತಿರುವು ಯೋಜನೆ ಅನುಷ್ಠಾನ ಮತ್ತು ಮಹದಾಯಿ ನೀರಿನ ಹಕ್ಕಿಗಾಗಿ ಆಗ್ರಹಿಸಿ ಬಂಡಾಯದ ನೆಲ ನರಗುಂದದಲ್ಲಿ ಕಿಡಿಯೊಡೆದ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಹುಬ್ಬಳ್ಳಿ : ಕಳಸಾ-ಬಂಡಾರಿ ತಿರುವು ಯೋಜನೆ  ಅನುಷ್ಠಾನ ಮತ್ತು ಮಹದಾಯಿ ನೀರಿನ  ಹಕ್ಕಿಗಾಗಿ ಆಗ್ರಹಿಸಿ ಬಂಡಾಯದ ನೆಲ ನರಗುಂದದಲ್ಲಿ ಕಿಡಿಯೊಡೆದ ರೈತರ ಹೋರಾಟ ಈಗ ಇಡೀ ಮುಂಬೈ ಕರ್ನಾಟಕ ಪ್ರದೇಶವನ್ನು ವ್ಯಾಪಿಸಿದ್ದು, ದಿನದಿಂದ ದಿನಕ್ಕೆ ಉಗ್ರರೂಪ ತಾಳುತ್ತಿದೆ.

ಈ ಯೋಜನೆ ಕುರಿತಂತೆ ಸುದೀರ್ಘ ಎರಡು ದಶಕಗಳ ಕಾಲ ಬರೀ ಭರವಸೆಯಲ್ಲೆ ಕಾಲ ನೂಕಿದ  ಮತ್ತು ಹೋರಾಟವನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದ್ದ ಎಲ್ಲ ರಾಜಕೀಯ ಮುಖಂಡರನ್ನು ದೂರವಿಟ್ಟು ರೈತರೇ ಹೋರಾಟಮುನ್ನಡೆಸುತ್ತಿದ್ದರಿಂದ ಹಳ್ಳಿಯ ಜನ ಎತ್ತು ಚಕ್ಕಡಿಗಳೊಂದಿಗೆ ಇದರಲ್ಲಿ ಭಾಗವಹಿಸಿ ದಿನಗಟ್ಟಲೇ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆಯ ಕಾವು ಹೆಚ್ಚಿಸಿದ್ದಾರೆ.

ಆಯಾ ಭಾಗದ ವಿದ್ಯಾರ್ಥಿಗಳು ವರ್ಗಗಳನ್ನು ಬಹಿಷ್ಕರಿಸಿ ಈ ಹೋರಾಟದಲ್ಲಿ ಧು ಮುಕುತ್ತಿದ್ದರೆ, ವಕೀಲರು ಕೂಡಾ ನ್ಯಾಯಾಲಯ ಕಲಾಪ ದಿಕ್ಕರಿಸಿ  ಹೋರಾಟ ಕ್ಕೆ ಶಕ್ತಿ ತುಂಬುತ್ತಿದ್ದಾರೆ. ಈ ಪ್ರತಿಭಟನೆಯ ಅಸಲಿಯತ್ತು  ಅರಿತ ನಾಡಿನವ ಪ್ರಮುಖ ಮಠಾಧೀಶರೂ ಅನ್ನದಾತನ ಬೆನ್ನಿಗೆ ನಿಂತು ಬೀದಿಗಿಳಿದ್ದಿದ್ದರಿಂದ ಹೋರಾಟ ಮಹಾ ಆಂದೋಲನದ  ರೂಪತಾಳಿ ಹಳ್ಳಿ -ಪಟ್ಟಣಗಳಿಗೆ ವ್ಯಾಪಿಸುತ್ತಿದೆ.

ಬುಧವಾರ ಹೋರಾಟ ಇನ್ನಷ್ಟು ಉಗ್ರ ಸ್ವರೂಪ ಪಡೆದಿದೆ. ಈವರೆಗೆ ಬರೀ ಬಾಯಿ ಚಪಲ ಎನಿಸಿದ್ದ ಪ್ರತ್ಯೇಕ ರಾಜ್ಯದ ಕೂಗು ಈಗ ರೈತ ಮುಖಂಡರಿಂದ  ಕೇಳಿ ಬಂದಿದೆ. ಅಲ್ಲದೆ  ಹಕ್ಕಿನ ನೀರಿಗಾಗಿ ಪ್ರಾಣ ತೊರೆಯಲೂ ಸಿದ್ಧ ಎಂದು ಪ್ರತಿಭಟನಾ ನಿರತ ರೈತರು ಘೋಷಿಸಿದ್ದಾರೆ. ಜತೆಗೆ ಉತ್ತರ ಕರ್ನಾಟಕದ ಶಾಸಕರು, ಸಂಸದರ  ರಾಜಿನಾಮೆಗೆ ಪ್ರತಿಭಟನಾಕಾರರು ಪಟ್ಟು ಹಿಡಿಯುತ್ತಿದ್ದರಿಂದ ರೈತರು ಕರೆಯುವ ಸಭೆಗಳಿಗೆ ಹಾಜರಾಗುವ ಧೈರ್ಯ ಈ ಭಾಗದ ಯಾವುದೇ ಶಾಸಕ, ಸಂಸದರಿಗೆ ಆಗುತ್ತಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com