ಜಿಲ್ಲಾ ಸುದ್ದಿ

ನಾಲ್ವರು ರೈತರ ಆತ್ಮಹತ್ಯೆ

ರಾಜ್ಯದಲ್ಲಿ ಸಾಲಬಾಧೆಗೆ ಮತ್ತೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.....

ನಾಲ್ವರು ರೈತರ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯದಲ್ಲಿ ಸಾಲಬಾಧೆಗೆ ಮತ್ತೆ ನಾಲ್ವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹುನಗುಂದ ತಾಲೂಕಿನ ಕಮಲದಿನ್ನಿ ಗ್ರಾಮದ ಮನೋಹರ ಬಸಲಿಂಗಪ್ಪ ವಾಳದ(64), ಶ್ರೀರಂಗಪಟ್ಟಣ ತಾಲೂಕಿನ ಆಗನಹಳ್ಳಿಯ ನಾಗೇಶ್, ಭಾಲ್ಕಿ ತಾಲೂಕಿನ ಕೋಸಂ  ಗ್ರಾಮದ ಕಂಟೆಪ್ಪ ಮಾರುತಿ ಮೇತ್ರೆ, ಔರಾದ್ ತಾಲೂಕಿನ ಉಜನಿ ಗ್ರಾಮದ ಭೀಮಾರೆಡ್ಡಿ ಕೃಷ್ಣಾ ರೆಡ್ಡಿ ಡೊಂಗಲೆ ಮೃತ ರೈತರು,

ಬಸಲಿಂಗಪ್ಪ ವಾಳದ 4 ಎಕರೆ ಭೂಮಿ ಅಡವಿಟ್ಟಿದ್ದರು. ರೂ. 50 ಸಾವಿರ ಸಾಲವಿದ್ದಿದ್ದರಿಂದ ನೇಣಿಗೆ ಶರಣಾಗಿದ್ದಾರೆ. ನಾಗೇಶ್ ಕೊಳವೆ ಬಾವಿಗಾಗಿ ರೂ.2.50 ಲಕ್ಷ ಸಾಲ ಮಾಡಿದ್ದರು. ಕಂಟೆಪ್ಪ ಮಾರುತಿ ಮೇತ್ರೆ ರೂ. 3ಲಕ್ಷ ಸಾಲಕ್ಕೆ ಹೆದರಿ ವಿಷ ಕುಡಿದಿದ್ದಾರೆ. ಭೀಮಾರೆಡ್ಡಿ ಕೃಷ್ಣಾ ರೆಡ್ಡಿ ರೂ. ಲಕ್ಷಕ್ಕೆ  ಹೆದರಿ ಪ್ರಾಣ ಕಳೆದುಕೊಂಡಿದ್ದಾರೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.