

ಬೆಂಗಳೂರು: ದೇಶದ ಜನರು ದೈಹಿಕ ಆರೋಗ್ಯದಂತೆ ಮಾನಸಿಕ ಆರೋಗ್ಯಕ್ಕೂ ಹೆಚ್ಚು ಒತ್ತು ನೀಡಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಡಬಮ್ಸ್ ಸಮೂಹದ 23ನೇ ವಾರ್ಷಿಕೋತ್ಸವದಲ್ಲಿ ದಿ.ಅಮಿತ್ ಎಂ. ಕಡಬಮ್ ಸ್ಮಾರಕ ಉದ್ಘಾಟಿಸಿಮಾತನಾಡಿದ ಅವರು, ದೇಶದಲ್ಲಿ ಜನರು ದೈಹಿಕ ಆರೋಗ್ಯಕ್ಕೆ ನೀಡುವ
ಮಹತ್ವವನ್ನು ಮಾನಸಿಕ ಆರೋಗ್ಯಕ್ಕೆ ನೀಡುವುದಿಲ್ಲ. ಅದರಲ್ಲಿಯೂ ಆರ್ಥಿಕವಾಗಿ ಹಿಂದುಳಿದಿರುವವರು ಸಾಮಾನ್ಯ ರೀತಿಯ ಚಿಕಿತ್ಸೆಗಿಂತಲೂ ಉನ್ನತ ಮಟ್ಟದ ಚಿಕಿತ್ಸೆ ಕುರಿತಾಗಿ ಆಲೋಚಿಸುವುದಿಲ್ಲ. ಈ ನಿಟ್ಟಿನಲ್ಲಿ ಮಾನಸಿಕ ಕಾಯಿಲೆಗಳ ನಿವಾರಣೆಗೆ ಹೆಚ್ಚಿನ ಆರೋಗ್ಯ ಕೇಂದ್ರಗಳ ಅಗತ್ಯವಿದೆ. ರಾಷ್ಟ್ರದಲ್ಲಿ ಇಂತಹ ಜನಪರ ಸೇವೆಗಳ ಕೇಂದ್ರಗಳ ಪ್ರಾರಂಭ ಅತ್ಯಂತ ಮಹತ್ವದ್ದಾಗಿದೆ ಎಂದರು.
ಸಮೂಹದ ನಿರ್ದೇಶಕ ಸಂದೇಶ್ ಆರ್.ಕಡಬಮ್ ಮಾತನಾಡಿ, ಆಲಯಹೋಮ್ ಫಾರ್ ಕ್ಯಾನ್ಸರ್ ಕೇರ್ ಚಾರಿಟಬಲ್ ಟ್ರಸ್ಟ್‍ಗಾಗಿ 72,000 ಚ. ಅಡಿ ವಿಸ್ತೀರ್ಣದ ಕಟ್ಟಡ ಗುರುತಿಸಿದ್ದು, ವೈದ್ಯಕೀಯ ಚಿಕಿತ್ಸೆ ಮತ್ತು ಮತ್ತಿತರ ಅಗತ್ಯದ ಸೇವೆ ಒದಗಿಸಲು ಕಟ್ಟಡ ನವೀಕರಿಸಬೇಕಿದೆ. 2017ರ ವೇಳೆಗೆ ಹೆಚ್ಚುವರಿ 200 ಹಾಸಿಗೆ ಒಳಗೊಂಡ ಈ ಕಟ್ಟಡ ಪೂರ್ಣಗೊಳ್ಳಲಿದೆ ಎಂದರು.
ಮನೋವೈದ್ಯ ಶಾಸuಉದಲ್ಲಿ ಸಾಧನೆ ಮಾಡಿದ ಡಾ.ಟಿ.ಎಸ್.ಸತ್ಯನಾರಾಯಣರಾವ್ ಅವರಿಗೆ `ಕಡಬಮ್ಸ್ ಶೃತ' ಮನೋವೈದ್ಯ ಪ್ರಶಸ್ತಿ ಹಾಗೂ ಡಾ. ಸುಪ್ರಿಯಾ ಶಂಕರ್ ಅವರಿಗೆ `ಕಡಬಮ್ಸ್ ಶೃತ' ಮಾನಸಿಕ ಆರೋಗ್ಯ ವೃತ್ತಿಪರ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆಯ ಸಂಸ್ಥಾಪಕ ಕಡಬಮ್ ಎಂ. ರಮೇಶ್ ಹಾಜರಿದ್ದರು.