ಎತ್ತಿನಹೊಳೆಗೆ ಕೋರ್ಟ್ ತಡೆ

ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಕಾಮಗಾರಿ ಸ್ಥಗಿತಗೊಳಿಸಲು ಸ್ಥಳಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ...
ಎತ್ತಿನಹೊಳೆಗೆ ಕೋರ್ಟ್ ತಡೆ
Updated on: 

ಸಕಲೇಶಪುರ: ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಯೋಜನೆ ಕಾಮಗಾರಿ ಸ್ಥಗಿತಗೊಳಿಸಲು ಸ್ಥಳಿಯ ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

2013ರ ಭೂಸ್ವಾಧೀನ ಕಾಯಿದೆ ಅನ್ವಯ ಯಾವುದೇ ನಿಯಮಗಳನ್ನು ಈ ಯೋಜನೆಯಲ್ಲಿ ಪಾಲಿಸಿಲ್ಲ ಎಂದು ಅದು ಹೇಳಿದೆ. ಯೋಜನೆ ಜಾರಿಯಿಂದ ಪರಿಸರ ಹಾಗೂ ಸಾಮಾಜಿಕ ಜೀವನದ ಮೇಲಾಗುವ ಪರಿಣಾಮಗಳ ಬಗ್ಗೆ ಅಧ್ಯಯನ ನಡೆಸಿಲ್ಲ. ಅಲ್ಲದೆ ಇದುವರೆಗೆ ಪರಿಹಾರದ ಮೊತ್ತ ಘೋಷಣೆ ಮಾಡಿಲ್ಲ ಎಂದು ನ್ಯಾಯಾಲಯ ಆಕ್ಷೇಪಿಸಿದೆ.

ಯೋಜನೆಯ ಸಮಗ್ರ ದಾಖಲೆಗಳನ್ನು ಇನ್ನೂ 15 ದಿನಗಳ ಒಳಗಾಗಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ, ಕರ್ನಾಟ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು, ಹಾಸನ ಜಿಲ್ಲಾಧಿಕಾರಿ, ಮೆಗಾ ಎಂಜಿನಿಯರಿಂಗ್ ಮತ್ತು ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಅವರಿಗೆ ನಿರ್ದೇಶನ ನೀಡಿದ ನ್ಯಾಯಾಲಯ, ಅದುವರೆಗೆ ಯೋಜನೆಯ ಕಾಮಗಾರಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ನೀಡಿದೆ.

ಎತ್ತಿನ ಹೊಳೆ ಕಾಮಗಾರಿ ಪ್ರಶ್ನಿಸಿ ಸ್ಥಳೀಯರಾದ ಎಚ್.ಕೆ.ಚಂದ್ರಶೇಖರ್, ಕೆ.ಪಿ.ಸುಭಾಷ್ ಮತ್ತಿತರು ರಿಟ್ ಅರ್ಜಿ ಸಲ್ಲಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com