

ಬೆಂಗಳೂರು: ಇದೇ ಫೆಬ್ರುವರಿ 18ರಿಂದ 25ರವರೆಗೆ ಬೆಂಗಳೂರಿನಲ್ಲಿ ಗ್ರೀನ್ ಟ್ರೆಂಡ್ಸ್ ಸಂಸ್ಥೆಯು ರಾಷ್ಟ್ರೀಯ ಕೇಶದಾನ ಅಭಿಯಾನವನ್ನು ಹಮ್ಮಿಕೊಂಡಿದೆ.
ಕ್ಯಾನ್ಸರ್ ರೋಗಿಗಳಿಗಾಗಿ ವಿಶೇಷವಾದ ನೈಸರ್ಗಿಕ ವಿಗ್‍ಗಳನ್ನು ತಯಾರಿಸುವ ನಿಟ್ಟಿನಲ್ಲಿ ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ & ಸ್ಟೈಲ್ ಸಲೂನ್ ಸಂಸ್ಥೆಯು ಬೆಂಗಳೂರಿನಲ್ಲಿ 'ಟ್ಯಾಂಗಲ್ಡ್' ಅಭಿಯಾನವನ್ನು ಆರಂಭಿಸಿದ್ದು, ಕೇಶದಾನ ಅಭಿಯಾನಕ್ಕೆ ಬೆಂಗಳೂರಿನ ಸೇಂಟ್ ಜೋಸೆಪ್ಸ್ ಕಾಲೇಜಿನಲ್ಲಿ ಚಾಲನೆ ನೀಡಲಾಗುತ್ತಿದೆ. ಈ ಸಾಮಾಜಿಕ ಕಾರ್ಯದಲ್ಲಿ ಪಾಲ್ಗೊಳ್ಳಬಯಸುವವರು ನಗರದ ಯಾವುದೇ ಗ್ರೀನ್ ಟ್ರೆಂಡ್ ಸಲೂನ್‍ಗೆ ಹೋಗಿ ಉಚಿತವಾಗಿ ಕನಿಷ್ಠ 6ರಿಂದ 10 ಇಂಚು ಉದ್ದದ ಹಾಗೂ 1 ಇಂಚು ದಪ್ಪದ ತಲೆಗೂದಲನ್ನು ದಾನ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ.
ಕಳೆದ ಬಾರಿ ಚೆನ್ನೈನ ಕ್ರಿಶ್ಚಿಯನ್ ಕಾಲೇಜಿನಲ್ಲಿ ಏರ್ಪಡಿಸಿದ್ದ ಈ "ಟ್ಯಾಂಗಲ್ಡ್" ರಾಷ್ಟ್ರೀಯ ಅಭಿಯಾನದಲ್ಲಿ ಹಲವಾರು ಯುವ ಮಹಿಳೆಯರು ಸ್ವ-ಇಚ್ಚೆಯಿಂದ ತಮ್ಮ ಕೇಶದ ಭಾಗವನ್ನು ದಾನ ಮಾಡಿದ್ದರು. ಸುಮಾರು 3500ಕ್ಕೂ ಹೆಚ್ಚು ಜನ ಕೇಶದಾನ ಮಾಡುವ ಮೂಲಕ ಕ್ಯಾನ್ಸರ್ ರೋಗಿಗಳಿಗೆ ಸುಮಾರು 300 ವಿಗ್‍ಗಳನ್ನು ತಯಾರಿಸುವಲ್ಲಿ ನೆರವಾಗಿದ್ದರು.
ಗ್ರೀನ್ ಟ್ರೆಂಡ್ ಈ ಅಭಿಯಾನವನ್ನು ದೇಶದಾದ್ಯಂತ ನಡೆಸಲಿದ್ದು, ಈ ಬಗ್ಗೆ ಮಾತನಾಡಿದ ಗ್ರೀನ್ ಟ್ರೆಂಡ್ಸ್ ಯುನಿಸೆಕ್ಸ್ ಹೇರ್ & ಸ್ಟೈಲ್ ಸಲೂನ್ ಸಿಓಓ ಎಸ್.ದೀಪಕ್ ಪ್ರವೀಣ್, "ಕಳೆದ ವರ್ಷ ನಡೆಸಲಾದ ಅಭಿಯಾನದಲ್ಲಿ ಪಾಲ್ಗೊಳ್ಳಲು ದೇಶದ ವಿವಿಧ ಭಾಗಗಳಿಂದ ಅನೇಕ ಜನರು ಆಸಕ್ತಿ ತೋರಿಸಿದ್ದರು. ಆದ್ದರಿಂದ ಈ ವರ್ಷ ನಾವು ದೇಶದ ಮುಖ್ಯ ನಗರಗಳಲ್ಲಿ ಈ ಅಭಿಯಾನವನ್ನು ನಡೆಸುತ್ತಿದ್ದೇವೆ. ಈ ಅಭಿಯಾನದಲ್ಲಿ ಸುಮಾರು 200 ಸಲೂನ್‍ಗಳು ಭಾಗಿಯಾಗಲಿದ್ದು, ಅದಕ್ಕಾಗಿ 2000ಕ್ಕೂ ಹೆಚ್ಚು ವಿನ್ಯಾಸಕರಿಗೆ ನಾವು ತರಬೇತಿ ನೀಡಿದ್ದೇವೆ.
ಒಂದು ವಾರ ನಡೆಯಲಿರುವ ಈ ಅಭಿಯಾನದಲ್ಲಿ ಗ್ರಾಹಕರು ಯಾವುದೇ ಗ್ರೀನ್ ಟ್ರೆಂಡ್ಸ್ ಸಲೂನ್‍ಗೆ ಹೋಗಿ ತಮ್ಮ ಇಚ್ಚೆಯಂತೆ ಕೂದಲನ್ನು ದಾನ ಮಾಡಬಹುದು. ದಾನ ನೀಡಲು ಬರುವವರಿಗೆ ವಿಶೇಷವಾದ ಹಾಗೂ ಪ್ರಸ್ತುತ ಹೆಚ್ಚು ಚಾಲ್ತಿಯಲ್ಲಿರುವ ಹೇರ್‍ಸ್ಟೈಲ್‍ಗಳನ್ನು ಮಾಡುವ ಮೂಲಕ ಕೇವಲ 8ರಿಂದ 10 ಇಂಚು ಕೂದಲನ್ನು ಮಾತ್ರ ತೆಗೆದುಕೊಳ್ಳಲಾಗುತ್ತದೆ.
ಹೀಗೆ ಸಂಗ್ರಹಿಸಲಾದ ಈ ಕೇಶದಿಂದ ವಿಗ್ ತಯಾರಿಸಿ, ಕೀಮೊಥೆರಪಿ ಚಿಕಿತ್ಸೆಯಿಂದ ತಲೆಗೂದಲಿನ ನಾಶಕ್ಕೆ ಒಳಗಾದ ಆದ್ಯಾರ್ ಇನ್‍ಸ್ಟಿಟ್ಯೂಟ್‍ನ ಕ್ಯಾನ್ಸರ್ ರೋಗಿಗಳಿಗೆ ನೀಡಲಾಗುತ್ತದೆ."ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ಪಾಲ್ಗೊಳ್ಳಬಯಸುವವರು ಹತ್ತಿರದ ಯಾವುದೇ ಗ್ರೀನ್ ಟ್ರೆಂಡ್ ಸಲೂನ್‍ಗೆ ಭೇಟಿ ನೀಡಬಹುದು ಅಥವಾ www.mygreentrends.in ವೆಬ್‍ಸೈಟ್‍ಗೆ ಲಾಗಿನ್ ಆಗಬಹುದು ಅಥವಾ 18004202020 ಈ ಸಂಖ್ಯೆಗೆ ಉಚಿತವಾಗಿ ಕರೆ ಮಾಡಬಹುದು.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Mr. Vinod Kumar
PH: +91 97411 83199 | Mail: vinod@brand-comm.com
Ms. Purvika Anand
PH: +91 99011 34441 | Mail: purvika@brand-comm.com