ನಿತೇಶ್ ಎಸ್ಟೇಟ್ಸ್ ಮುಖ್ಯ ಕಚೇರಿ ಮೇಲೆ ದಾಳಿ

ನಗರದ ಎಂ.ಜಿ.ರಸ್ತೆಯ `ನಿತೇಶ್ ಎಸ್ಟೇಟ್ಸ್ ಲಿಮಿಟೆಡ್' ನಿಂದ ವಾಣಿಜ್ಯ ಇಲಾಖೆಗೆ ರು.10 ಕೋಟಿ ವಾಣಿಜ್ಯ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದಡಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಶನಿವಾರ ಕಂಪನಿಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ...
ನಿತೇಶ್ ಎಸ್ಟೇಟ್ಸ್
ನಿತೇಶ್ ಎಸ್ಟೇಟ್ಸ್

ಬೆಂಗಳೂರು: ನಗರದ ಎಂ.ಜಿ.ರಸ್ತೆಯ `ನಿತೇಶ್ ಎಸ್ಟೇಟ್ಸ್ ಲಿಮಿಟೆಡ್' ನಿಂದ ವಾಣಿಜ್ಯ ಇಲಾಖೆಗೆ  ರು.10 ಕೋಟಿ ವಾಣಿಜ್ಯ ತೆರಿಗೆ ವಂಚನೆ ಮಾಡಲಾಗಿದೆ ಎಂಬ ಆರೋಪದಡಿ ವಾಣಿಜ್ಯ ತೆರಿಗೆ ಅಧಿಕಾರಿಗಳು ಶನಿವಾರ ಕಂಪನಿಯ ಮುಖ್ಯ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.

ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಬಿ.ಕೆ.ರವಿ ನೇತೃತ್ವದಲ್ಲಿ 15 ಅಧಿಕಾರಿಗಳ ತಂಡ ದಾಳಿ ನಡೆಸಿ, ಕಚೇರಿಯಲ್ಲಿದ್ದ 400ಕ್ಕೂ ಹೆಚ್ಚು ದಾಖಲೆ ಪತ್ರ, ಕಂಪ್ಯೂಟರ್‍ಗಳನ್ನು ಜಪ್ತಿ ಮಾಡಿ, ವಶಕ್ಕೆ ತೆಗೆದುಕೊಂಡಿದೆ. ಅಲ್ಲದೆ ಇನ್ನೂ ಹಲವು ದಾಖಲೆ ಪತ್ರಗಳ ಪರಿಶೀಲಿಸ ಬೇಕಿರುವ ಹಿನ್ನೆಲೆಯಲ್ಲಿ ಸಂಪೂರ್ಣ ಕಚೇರಿಯನ್ನು ವಶಕ್ಕೆ ಪಡೆದಿದ್ದಾರೆ.

ದೆಹಲಿ, ಬೆಂಗಳೂರು ಸೇರಿದಂತೆ ವಿವಿಧೆಡೆ ನಿತೇಶ್ ಎಸ್ಟೇಟ್ಸ್ ಸಂಸ್ಥೆಯ ಶಾಖೆಗಳಿದ್ದು, ರು.10 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com