ಶೃಂಗೇರಿ ಮಠಕ್ಕೆ ಉತ್ತರಾಧಿಕಾರಿ ನೇಮಕ

ಶೃಂಗೇರಿ ಶಾರದಾಪೀಠದ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿ ಅವರು...
ಶೃಂಗೇರಿ ಶಾರದಾಂಬ ದೇವಸ್ಥಾನ
ಶೃಂಗೇರಿ ಶಾರದಾಂಬ ದೇವಸ್ಥಾನ
Updated on: 

ಶೃಂಗೇರಿ: ಶೃಂಗೇರಿ ಶಾರದಾಪೀಠದ ಜಗದ್ಗುರು ಭಾರತಿ ತೀರ್ಥ ಮಹಾಸ್ವಾಮಿ ಅವರು ಕುಪ್ಪೂರು ವೆಂಕಟೇಶ್ವರ ಪ್ರಸಾದ ಶರ್ಮ ಅವರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದಾರೆ.

ಭಾನುವಾರ ರಾತ್ರಿ ನಡೆದ ಅಡ್ಡಪಲ್ಲಕ್ಕಿ ಉತ್ಸವದಲ್ಲಿ ಸ್ವಾಮೀಜಿ ಈ ಘೋಷಣೆ ಮಾಡಿದ್ದಾರೆ.

ತಾಯಿ ಸರಸ್ವತಿ ಈ ನಿರ್ಣಯಕ್ಕೆ ಪ್ರೇರೇಪಣೆ. ಶಿಷ್ಯ ಪರಿಗ್ರಹ ಸಮಾರಂಭ ಜನವರಿ ೨೨ ರಂದು ನಡೆಯಲಿದೆ ಎಂದು ತಿಳಿಸಿದ್ದಾರೆ.

ವೆಂಕಟೇಶ್ವರ ಪ್ರಸಾದ ಶರ್ಮ(೨೪) ಆಂಧ್ರ ಮೂಲದವರು. ಇವರು ತಮ್ಮ ೧೪ನೆಯ ವಯಸ್ಸಿಗೆ ಶೃಂಗೇರಿಗೆ ಬಂದು ಮಠದ ಸದ್ವಿದ್ಯ ಸಂಜೀವಿನಿ ಪಾಠಶಾಲೆಯಲ್ಲಿ ವೇದಾಂತ ಕಲಿತಿದ್ದಾರೆ. ಜಗದ್ಗುರುಗಳಿಂದಲೇ ವೇದಾಂತದ ಪಾಠ ಇವರಿಗೆ ಕಳೆದ ನಾಲ್ಕು ವರ್ಷಗಳಿಂದ ನಡೆಯುತ್ತಿದೆ.

ಈ ಘೋಷಣೆ ಹೊರಬೀಳುವಾಗ ಪ್ರಸಾದ್ ಶರ್ಮಾ ಅವರ ತಂದೆ ತಾಯಿ ಉಪಸ್ಥಿತರಿದ್ದರು ಎಂದು ತಿಳಿದುಬಂದಿದೆ. ಪ್ರಸಾದ್ ಶರ್ಮ ಎಲ್ಲ ಲೌಖಿಕ ಸಂಬಂಧಗಳನ್ನು ಜನವರಿ ೨೨ ರಂದು ತೊರೆದು, ಜನವರಿ ೨೩ ರಂದು ಕಾಶಾಯ ವಸ್ತ್ರ ಸ್ವೀಕರಿಸಲಿದ್ದರೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com