ಟ್ರಕ್-ಇಂಡಿಕಾ ಕಾರು ಮಧ್ಯೆ ಡಿಕ್ಕಿ: ನಾಲ್ವರು ಅಯ್ಯಪ್ಪ ಭಕ್ತರ ಸಾವು

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಟ್ರಕ್ ಹಾಗೂ ಇಂಡಿಕಾ ಕಾರು..
ಅಪಘಾತ
ಅಪಘಾತ
Updated on: 

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದ ಹೊರವಲಯದಲ್ಲಿ ಟ್ರಕ್ ಹಾಗೂ ಇಂಡಿಕಾ ಕಾರು ಮಧ್ಯೆ ಡಿಕ್ಕಿ ಸಂಭವಿಸಿದ ಪರಿಣಾಮ ನಾಲ್ವರು ಅಯ್ಯಪ್ಪ ಭಕ್ತರು ಮೃತಪಟ್ಟಿದ್ದಾರೆ.

ಮಕರ ಜ್ಯೋತಿ ದರ್ಶವನ್ನು ಪಡೆದು ಶಬರಿಮಲೆಯಿಂದ ವಾಪಸ್ಸಾಗುತ್ತಿದ್ದ ಅಯ್ಯಪ್ಪ ಭಕ್ತರ ಇಂಡಿಕಾ ಕಾರು ಹಾಗೂ ಟ್ರಕ್ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಇಂಡಿಕಾ ಕಾರಿನಲ್ಲಿ ನಾಲ್ವರು ಅಯ್ಯಪ್ಪ ಭಕ್ತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ನಿವಾಸಿಗಳಾದ ನವೀನ್(11), ಅಶ್ವಿನಿ(12), ಜಗದೀಶ್(14), ರಾಂ ಬಾಬು(35) ಹಾಗೂ ಹನುಮಂತರಾಯಪ್ಪ(4) ಎಂದು ಗುರುತಿಸಲಾಗಿದೆ.

ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.


Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com