ಬೆಂಗಳೂರು ವಿವಿ ವಿಭಜನೆಗೆ ವಿಧಾನಸಭೆ ಅಸ್ತು

ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಭಜಿಸುವ ಕರ್ನಾಟಕ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು...
ಬೆಂಗಳೂರು ವಿವಿ
ಬೆಂಗಳೂರು ವಿವಿ
Updated on: 

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವನ್ನು ಮೂರು ವಿಶ್ವವಿದ್ಯಾಲಯಗಳಾಗಿ ವಿಭಜಿಸುವ ಕರ್ನಾಟಕ ವಿಶ್ವವಿದ್ಯಾಲಯ ತಿದ್ದುಪಡಿ ವಿಧೇಯಕವನ್ನು ಶುಕ್ರವಾರ ವಿಧಾನಸಭೆ ಅಂಗೀಕರಿಸಿದೆ.

ಉನ್ನತ ಶಿಕ್ಷಣ ಸಚಿವ ಆರ್.ವಿ.ದೇಶಪಾಂಡೆ ಅವರು ಕಳೆದ ವಾರ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಅಧಿವೇಶನದಲ್ಲೇ ಈ ವಿಧೇಯಕವನ್ನು ಮಂಡಿಸಿದ್ದರು. ಇಂದು ವಿವಿ ವಿಭಜನೆ ಕುರಿತ ವಿಧೇಯಕಕ್ಕೆ ವಿಧಾಸಭೆ ಒಪ್ಪಿಗೆ ಸೂಚಿಸಿದ್ದು, ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸ ವಿವಿಗಳು ಅಸ್ತಿತ್ವಕ್ಕೆ ಬರಲಿವೆ.

ಬೆಂಗಳೂರು ವಿವಿ ವ್ಯಾಪ್ತಿಯಲ್ಲಿ ಒಟ್ಟು 600ಕ್ಕೂ ಹೆಚ್ಚು ಕಾಲೇಜ್‌ಗಳಿದ್ದು, ತಲಾ 200 ಕಾಲೇಜ್‌ಗಳಿಗೆ ಒಂದೊಂದು ವಿವಿ ರಚಿಸಲು ನಿರ್ಧರಿಸಲಾಗಿದೆ.

ಬೆಂಗಳೂರು ಸೆಂಟ್ರಲ್ ಕಾಲೇಜ್ ಮೂರು ವಿವಿಗಳ ಕೇಂದ್ರ ಸ್ಥಾನವಾಗಲಿದ್ದು,  ಜ್ಞಾನಭಾರತಿ ಕ್ಯಾಂಪಸ್ ಇರುವ ಬೆಂಗಳೂರು ವಿವಿಯು ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಕಾಲೇಜ್‌ಗಳನ್ನು ಒಳಗೊಳ್ಳುವ ಸಾಧ್ಯತೆ ಇದೆ.

ಬೆಂಗಳೂರು ಸೆಂಟ್ರಲ್ ವಿವಿ ಎಂದು ಕರೆಯುವ ಹೊಸ ವಿವಿಯು ಬೆಂಗಳೂರು ನಗರದ ಸುಮಾರು 13 ವಿಧಾನಸಭಾ ಕ್ಷೇತ್ರಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಲಿದ್ದು, ಬೆಂಗಳೂರು (ಉತ್ತರ) ಎಂಬ ಮತ್ತೊಂದು ವಿವಿ ಸ್ಥಾಪನೆಯಾಗಲಿದ್ದು, ಇದಕ್ಕೆ ಜಂಗಮಕೋಟೆಯಲ್ಲಿ (ಶಿಡ್ಲಘಟ್ಟ ತಾಲೂಕು) ಕೇಂದ್ರ ಸ್ಥಾನವಿರಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com