ಮಾರುತಿ 800-ಸ್ವಿಫ್ಟ್ ಕಾರುಗಳ ಮುಖಾಮುಖಿ ಡಿಕ್ಕಿ: 4 ಸಾವು

ಬೆಂಗಳೂರು-ಮೈಸೂರು ಹೆದ್ದಾರಿಯ ಬಸವನಪುರ ಗ್ರಾಮದ ಬಳಿ ಸ್ವಿಫ್ಟ್ ಹಾಗೂ ಮಾರುತಿ 800 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ...
ಅಪಘಾತ(ಸಾಂದರ್ಭಿಕ ಚಿತ್ರ)
ಅಪಘಾತ(ಸಾಂದರ್ಭಿಕ ಚಿತ್ರ)

ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯ ಬಸವನಪುರ ಗ್ರಾಮದ ಬಳಿ ಸ್ವಿಫ್ಟ್ ಹಾಗೂ ಮಾರುತಿ 800 ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರಾಮನಗರ ತಾಲೂಕಿನ ಬಸನವಪುರ ಬಳಿ ಭೀಕರ ಅಪಘಾತ ಸಂಭವಿಸಿದ್ದು, ಡಿಕ್ಕಿಯ ರಭಸಕ್ಕೆ ಮಾರುತಿ 800 ಕಾರಿನಲ್ಲಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಮೃತರನ್ನು ರಾಮನಗರ ನಿವಾಸಿಗಳಾದ ಮಹದೇವ್(48), ಮೀನಾಕುಮಾರಿ(38), ಮಧು(24) ಹಾಗೂ ಸತೀಶ್(21) ಎಂದು ಗುರುತಿಸಲಾಗಿದೆ.

ಮಹದೇವ್ ಕುಟುಂಬ ರಾಮನಗರದಿಂದ ಬೆಂಗಳೂರಿಗೆ ಹೊರಟಿದ್ದಾಗ ಈ ಅವಘಡ ಸಂಭವಿಸಿದೆ. ರಾಮನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com