`ಸ್ವಚ್ಛ ವಿವಿ' ಅಭಿಯಾನ ಶುರು

ಸ್ವಚ್ಛಭಾರತ ಅಭಿಯಾನದ ಮುಂದುವರಿದ ಭಾಗವಾಗಿ ವಿಶ್ವವಿದ್ಯಾಲಯಗಳ ಸ್ವಚ್ಛತಾ ಕಾರ್ಯಕ್ರಮ ಆರಂಭವಾಗಿದೆ...
`ಸ್ವಚ್ಛ ವಿವಿ' ಅಭಿಯಾನ ಶುರು (ಸಾಂದರ್ಭಿಕ ಚಿತ್ರ)
`ಸ್ವಚ್ಛ ವಿವಿ' ಅಭಿಯಾನ ಶುರು (ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಸ್ವಚ್ಛಭಾರತ ಅಭಿಯಾನದ ಮುಂದುವರಿದ ಭಾಗವಾಗಿ ವಿಶ್ವವಿದ್ಯಾಲಯಗಳ ಸ್ವಚ್ಛತಾ ಕಾರ್ಯಕ್ರಮ ಆರಂಭವಾಗಿದೆ.

ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪತ್ರಬರೆದಿರುವ ವಿಶ್ವವಿದ್ಯಾಲಯ ಧನಸಹಾಯ ಆಯೋಗವು ಒಂದು ವಾರ ಕಾಲ ವಿಶ್ವವಿದ್ಯಾಲಯದಲ್ಲಿ ಸ್ವಚ್ಛತಾ ಅಭಿಯಾನ ನಡೆಸುವಂತೆ ಸೂಚಿಸಿದೆ. `ನಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂಬ ಅರಿವು ಮೂಡಿಸುವ ಸ್ವಚ್ಛ ಭಾರತ ಅಭಿಯಾನವು ಭಾರತ ಸರ್ಕಾರದ ಮಹತ್ವಾಕಾಂಕ್ಷೆಯ ಉದಾತ್ತ ಉಪಕ್ರಮ. ಈ ಕಾರ್ಯಕ್ರಮದ ಮೂಲಕ ವಿಶ್ವವಿದ್ಯಾಲಯದ ಎಲ್ಲಾ ಕಚೇರಿಗಳು ಸುಸ್ಥಿತಿಯಲ್ಲಿ ನಿರ್ವಹಣೆಯಾಗಿರಬೇಕು ಮತ್ತು ಸ್ವಚ್ಛವಾಗಿರಬೇಕು' ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಕೈಗೊಳ್ಳಬೇಕಾದ ಕ್ರಮಗಳು:
ವಿವಿ ಆವರಣದ ಪ್ರತಿ ಕಚೇರಿಯನ್ನು ಸ್ವಚ್ಛವಾಗಿಡುವ ಜೊತೆಗೆ, ಕಾರಿಡಾರ್, ಶೌಚಾಲಯ, ಲಿಫ್ಟ್, ಮೆಟ್ಟಿಲುಗಳನ್ನೂ ಸಹ ಸ್ವಚ್ಛವಾಗಿಡಲು ಕ್ರಮಕೈಗೊಳ್ಳಬೇಕು. ಕಚೇರಿ ಹೊರಭಾಗ, ಪಾರ್ಕಿಂಗ್ ಲಾಟ್ ಮತ್ತು ಪಾತ್‍ವೇಸ್ ನಂತಹ ಪ್ರದೇಶಗಳ ಸ್ವಚ್ಛತೆಗೆ ವಿಶೇಷ ಗಮನ ಕೊಡಬೇಕೆಂದು ತಿಳಿಸಲಾಗಿದೆ.

ಬಳಸದ ವಾಹನಗಳು, ಪೀಠೋಪಕರಣ, ಎಲೆಕ್ಟ್ರಾನಿಕ್ ಮತ್ತು ಎಲೆಕ್ಟ್ರಿಕಲ್ ಉಪಕರಣಗಳನ್ನು ಹಾಗೂ ಅಗತ್ಯವಲ್ಲದ ಕಡತ-ದಾಖಲೆಗಳನ್ನು ಗುರುತಿಸಿ ವಿಲೇವಾರಿ ಮಾಡಿ ಕಚೇರಿಯನ್ನು ಸ್ವಚ್ಛ ಮಾಡಿಕೊಳ್ಳುವಂತೆ ಯುಜಿಸಿ ಹೇಳಿದೆ. ಒಂದು ವಾರ ಕಾಲ ಈ ರೀತಿಯ ಚಟುವಟಿಕೆ ನಡೆಸಬೇಕು ಮತ್ತು ಅಲ್ಲಿ ಕೈಗೊಂಡ ಚಟುವಟಿಕೆ ಕುರಿತು ವರದಿ ಕಳುಹಿಸಿಕೊಡುವಂತೆ ಯುಜಿಸಿ ಕಾರ್ಯದರ್ಶಿ ಜಸ್ಪಾಲ್ ಎಸ್. ಸಂಧು ಪತ್ರದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com