

ಬೆಂಗಳೂರು: ಒಂದೇ ಹುಡುಗಿಯನ್ನು ಪ್ರೀತಿಸುತ್ತಿದ್ದ ಇಬ್ಬರು ಹುಡುಗರ ನಡುವಿನ ಜಗಳ ಚಾಕು ಇರಿತದಲ್ಲಿ ಅಂತ್ಯವಾಗಿರುವ ಘಟನೆ ಜಯನಗರ 9ನೇ ಬ್ಲಾಕ್ ನಲ್ಲಿ ನಡೆದಿದೆ.
ಭೈರಸಂದ್ರ ನಿವಾಸಿ ಫಾಜೀಲ್(25) ಇರಿತಕ್ಕೊಳಗಾದವ, ಈತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ತಡರಾತ್ರಿ ಹೊರಗೆ ಹೋಗಿದ್ದಾಗ ಫಾಜೀಲ್ ತಾನು ಪ್ರೀತಿಸುತ್ತಿದ್ದ ಹುಡುಗಿಯ ಮೇಲೆ ನೀನು ಕಣ್ಣು ಹಾಕುತ್ತಿರುವುದು ಸರಿಯಲ್ಲ ಎಂದು ಸ್ನೇಹಿತನಿಗೆ ಹೇಳಿದ್ದಾನೆ.
ಅಲ್ಲದೇ ಆಕೆಯಿಂದ ದೂರವಾಗು ಎಂದಿದ್ದಾನೆ. ಆಧರೆ, ಆರೋಪಿ ಸ್ನೇಹಿತ ಅದನ್ನು ಕೇಳಲು ನೀನು ಯಾರು ಎಂದು ಜಗಳ ತೆಗೆದು ಚಾಕುವಿನಿಂದ ಫಾಜೀಲ್ ಗೆ ಇರಿದು ಪರಾರಿಯಾಗಿದ್ದಾನೆ.
ಸ್ಥಳೀಯರು ಗಮನಿಸಿ ಫಾಜೀಲ್ ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ತಿಲಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.