ಪ್ರವಾಸಿ ಪೊಲೀಸ್ ಶೀಘ್ರ

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಶೀಘ್ರವೇ ಬರಲಿದ್ದಾರೆ ಪ್ರವಾಸಿ ಪೊಲೀಸರು. ಇದು ಗೃಹ ಸಚಿವ ಕೆ.ಜೆ.ಜಾರ್ಜ್ ಹೊಸ ಕ್ರಮ.
ಪ್ರವಾಸಿಗರು
ಪ್ರವಾಸಿಗರು
Updated on: 

ವಿಧಾನಸಭೆ: ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ಶೀಘ್ರವೇ ಬರಲಿದ್ದಾರೆ ಪ್ರವಾಸಿ ಪೊಲೀಸರು. ಇದು ಗೃಹ ಸಚಿವ ಕೆ.ಜೆ.ಜಾರ್ಜ್ ಹೊಸ ಕ್ರಮ.

ಮಂಡ್ಯ ಜಿಲ್ಲೆ ಕೆ.ಆರ್.ಸಾಗರ ಸುತ್ತಮುತ್ತ ಹಾಗೂ ಮೈಸೂರು, ಪಾಂಡವಪುರದಲ್ಲಿ ಇತ್ತೀಚೆಗೆ ಸರಣಿ ಕೊಲೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಮತ್ತು ಸಾಮಾನ್ಯ ಜನರ ನಿತ್ಯ ಜೀವನಕ್ಕೆ ತೊಂದರೆಯಾಗುತ್ತಿದೆ ಎಂದು ರಮೇಶ್ ಬಂಡಸಿದ್ದೇಗೌಡರ ಪರವಾಗಿ ಚಲುವರಾಯಸ್ವಾಮಿ ಸರ್ಕಾರದ ಗಮನ ಸೆಳೆದರು.

ಈ ವೇಳೆ ಮಾತನಾಡಿದ ಗೃಹ ಸಚಿವರು ಸರ್ಕಾರದ ಆಲೋಚನೆಯನ್ನು ಬಿಚ್ಚಿಟ್ಟರು. ಹೋಂಗಾರ್ಡ್ ಮತ್ತು ಪೊಲೀಸ್ ವಾರ್ಡನ್‍ಗಳಿಗೆ ಹೆಚ್ಚಿನ ತರಬೇತಿ ನೀಡಿ ಪ್ರವಾಸಿ ಸ್ಥಳಗಳಲ್ಲಿ ರಕ್ಷಣೆಗೆ ನಿಯೋಜಿಸಲಾಗುತ್ತದೆ. ಈ ಮೂಲಕ ಪ್ರವಾಸಿ ಸ್ಥಳಗಳಲ್ಲಿ ಪ್ರವಾಸಿಗರಿಗೆ ಯಾವುದೇ ತೊಂದರೆಯಾಗದಂತೆ ಗಮನ ನೀಡಲಾಗುತ್ತದೆ ಎಂದರು.

ಎಲ್ಲೆಲ್ಲಿ ಭದ್ರತೆ?
ಸದ್ಯ ಕೆಆರ್ ಎಸ್ ಗಾರ್ಡನ್ ಬಂದೋಬಸ್ತ್ ಕರ್ತವ್ಯಕ್ಕೆ ಪೊಲೀಸ್ ಠಾಣೆಯಿಂದ ಸಿಬ್ಬಂದಿಯನ್ನು ಕರ್ತವ್ಯಕ್ಕೆ ನೇಮಿಸಲಾಗಿದೆ. ವಾರಾಂತ್ಯ ಮತ್ತು ರಜಾ ದಿನಗಳಲ್ಲಿ ಬೃಂದಾವನ ಗಾರ್ಡನ್, ನಿಮಿಷಾಂಬ, ಮೇಲುಕೋಟೆ, ಸಂಗಮ, ಶ್ರೀರಂಗಪಟ್ಟಣ, ತೊಣ್ಣೂರು ಕೆರೆ ಮತ್ತು ರಂಗನತಿಟ್ಟು ಮುಂತಾದ ಪ್ರವಾಸಿ ತಾಣಗಳಿಗೆ ಹೆಚ್ಚಿನದಾಗಿ ಹೆಚ್ಚುವರಿ ಉಪ ವಿಭಾಗದ ಪೊಲೀಸ್ ಠಾಣೆಗಳಿಂದ ಸಿಬ್ಬಂದಿ ನೇಮಕ ಮಾಡಿ ಸೂಕ್ತ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೇ ಹಗಲು ರಾತ್ರಿ ಗಸ್ತು, ಮೊಬೈಲ್ ಗಸ್ತು, ಚೆಕ್ ಪೋಸ್ಟ್ ಗಳನ್ನು ನಿರ್ಮಿಸಿ ಲಘು ವಾಹನಗಳ ತಪಾಸಣೆ ಮಾಡುವುದು ಹಾಗೂ ಮುಂಜಾನೆಯ ಗುಡ್ ಮಾರ್ನಿಂಗ್ ಬೀಟ್ ಮತ್ತು ವಜ್ರಗಸ್ತು ತಿರುಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com