ಡಾಲರ್ ಆಸೆಗೆ ರು6 ಲಕ್ಷ ಕಳೆದುಕೊಂಡ ವೈದ್ಯ!

ಅಮೆರಿಕನ್ ಡಾಲರ್ ಅಳತೆಯ ಖಾಲಿ ಬಿಳಿ ಹಾಳೆಯನ್ನು ರಾಸಾಯನಿಕದಲ್ಲಿ ಅದ್ದಿ ತೆಗೆದರೆ ಅಸಲಿ ಅಮೆರಿಕನ್ ಡಾಲರ್ ಆಗಿ ಪರಿ ವರ್ತನೆ' ಆಗುತ್ತದೆ ಎಂದು ವೈದ್ಯರನ್ನೇ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಅಮೆರಿಕನ್ ಡಾಲರ್ ಅಳತೆಯ ಖಾಲಿ ಬಿಳಿ ಹಾಳೆಯನ್ನು ರಾಸಾಯನಿಕದಲ್ಲಿ ಅದ್ದಿ ತೆಗೆದರೆ ಅಸಲಿ ಅಮೆರಿಕನ್ ಡಾಲರ್ ಆಗಿ ಪರಿ ವರ್ತನೆ' ಆಗುತ್ತದೆ ಎಂದು ವೈದ್ಯರನ್ನೇ ನಂಬಿಸಿ ರು.6 ಲಕ್ಷ ಹಣ ಪಡೆದು ವಂಚಿ ಸಿದ ನೈಜೀರಿಯಾ ಮೂಲದ ಇಬ್ಬರನ್ನು ಮಲ್ಲೇಶ್ವರ ಪೊಲೀಸರು ಬಂಧಿಸಿದ್ದಾರೆ. ಡೇವಿಡ್ ಓನಾಮಿ(35), ಕಾಲಿನ್ಸ್ ರಾಲ್(41) ಬಂಧಿತರು.
ಮತ್ತೊಬ್ಬ ನೈಜೀರಿಯಾ ಪ್ರಜೆ ತಲೆಮರೆಸಿ ಕೊಂಡಿದ್ದಾನೆ. ಇವರಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ಅನ್‍ರಿಸರ್ವಡ್ ಎಂದು ಮುದ್ರಿ ಸಿರುವ ನೋಟಿನ ಮಾದರಿಯ 14 ಬಂಡಲ್, 5 ರಾಸಾಯನಿಕ ಬಾಟಲಿ ಗಳು, ರು.4200 ನಗದು ವಶಪಡಿಸಿ ಕೊಳ್ಳಲಾಗಿದೆ ಎಂದು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್‍ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯರಿಗೆ ಟೋಪಿ!
ಡಾ. ಕುಮಾರ್ ಎಚ್.ಸಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಓಎಲ್ ಎಕ್ಸ್. ಕಾಂನಲ್ಲಿ ಹುಡುಕಾಟ ನಡೆಸುತ್ತಿ ದ್ದಾಗ ಆರೋಪಿಗಳು ಜರ್ಮನಿ ಮೂಲದ ನಾಗರಿಕರ ಹೆಸರಿನಲ್ಲಿ ಐಷಾ ರಾಮಿ ಕಾರನ್ನು ಕಡಿಮೆ ಬೆಲೆಗೆ ಮಾರಾಟಕ್ಕೆ ಇಟ್ಟಿದ್ದು ಕಂಡು ಬಂದಿದೆ. ಇಬ್ಬರು ತಾವು ಜರ್ಮನ್ ದೇಶದ ಲೈಟನರ್ ಟ್ರೆಮ್ ಮತ್ತು ಜೇಮರ್ಸ್ ಮೋರ್ ಎಂದು ಕುಮಾರ್ ಅವರನ್ನು ಪರಿಚಯಿಸಿ ಕೊಂಡಿದ್ದಾರೆ. ತಮ್ಮ ಸಹಾಯಕರಿಗೆ ಹಣ ಪಾವತಿ ಮಾಡಿದರೆ ಕಾರು ನೀಡುವುದಾಗಿ ಹೇಳಿದ್ದಾರೆ. ಅದೇ ವೇಳೆ ತಮ್ಮ ಬಳಿ ಉಪಯೋಗಕ್ಕೆ ಬಾರದ 50 ಸಾವಿರ ಅಮೆರಿಕನ್ ಡಾಲರ್ ಸಾಮಾನ್ಯ ಪೇಪರ್ ಮಾದರಿ ಯಲ್ಲಿದೆ. ಇದರ ಭಾರತೀಯ ಹಣದ ಮೌಲ್ಯ ಎರಡುವರೆ ಕೋಟಿಯಾಗಿದೆ. ಪೇಪರ್ ನ್ನು ರಾಸಾಯನಿಕದಲ್ಲಿ ಅದ್ದಿ ತೆಗೆದರೆ ಡಾಲರ್ ಆಗಿ ಪರಿವರ್ತನೆಯಾಗುತ್ತದೆ. ಇದರಿಂದ ದಿಢೀರ್ ಶ್ರೀಮಂತರಾಗ ಬಹುದು ಎಂದು ಹೇಳಿದ್ದಾರೆ. ವಂಚಕರ ಬಲೆಗೆ ಬಿದ್ದಿದ್ದರು.
ರಾಸಾಯನಿಕಕ್ಕೆ ಹಣ
ಪೇಪರ್‍ಗಳನ್ನು ಅದ್ದಿ ಡಾಲರ್ ಆಗಿ ಪರಿವರ್ತಿಸಲು ಬೇಕಾಗುವ ರಸಾಯನಿಕ ಖರೀದಿಸಬೇಕು. ಅದಕ್ಕೆ ರು.6 ಲಕ್ಷ ಬೇಕಾಗುತ್ತದೆ ಎಂದಿದ್ದಾರೆ. ಅವರು ನೀಡಿದ ಬ್ಯಾಂಕ್ ಅಕೌಂಟ್‍ಗೆ ಕುಮಾರ್ ರು.6 ಲಕ್ಷ ಹಾಕಿದ್ದಾರೆ. ಆದರೆ, ಬಳಿಕ ಆರೋಪಿಗಳು ಇನ್ನು ರು.5 ಲಕ್ಷ ಕೇಳಿದ್ದಾರೆ. ಆಗಲೇ, ಕುಮಾರ್ ಅವರಿಗೆ ತಾವು ವಂಚನೆಗೆ ಒಳಗಾಗುತ್ತಿರುವುದು ಗೊತ್ತಾಗಿ ಮಲ್ಲೇಶ್ವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ವಂಚಕರ ಬೇಡಿಕೆಯಂತೆ ರು.5 ಲಕ್ಷ ಕೊಡುವುದಾಗಿ ಹೇಳಿದ ಕುಮಾರ್, ಲೀಲಾ ಆಸ್ಪತ್ರೆಗೆ ಬರುವಂತೆ ತಿಳಿಸಿದ್ದಾರೆ. ಆಗ ಆರೋಪಿಗಳಿಬ್ಬರು ಹಣ ಪಡೆಯಲು ಬಂದಾಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. 4 ತಾಸು ಫ್ರಿಡ್ಜ್ ನಲ್ಲೇ ಇರಬೇಕು ಬಂಧಿತ ಇಬ್ಬರು ನೈಜಿರಿಯಾ ಪ್ರಜೆಗಳ ಪೈಕಿ ಓನಾಮಿ ವಿದ್ಯಾಭ್ಯಾಸ ವಿಸಾ ಮೇಲೆ ಭಾರತಕ್ಕೆ ಬಂದಿದ್ದು,
ಮುಂಬೈನಲ್ಲಿ ವಾಸವಿದ್ದ. ಹಲವು ದಿನಗಳ ಹಿಂದೆಯೇ ವಿಸಾ ಅವಧಿ ಮುಗಿದಿತ್ತು. ಅದೇ ರೀತಿ ಕಾಲಿನ್ಸ್ ಕೂಡಾ ಇತ್ತೀಚೆಗೆ ಭಾರತಕ್ಕೆ ವಿದ್ಯಾಭ್ಯಾಸ ಹೆಸರಿನಲ್ಲಿ ಭಾರತಕ್ಕೆ ಬಂದು ಮುಂಬೈನಲ್ಲಿ ನೆಲೆಸಿ ವಂಚನೆಗೆ ಇಳಿದಿದ್ದರು. ಕುಮಾರ್ ಗೆ ನಕಲಿ ನೋಟುಗಳ ಕೊಟ್ಟ ಆರೋಪಿಗಳು 4 ಗಂಟೆ ಫ್ರಿಡ್ಜ್ ನಲ್ಲಿಟ್ಟ ನಂತರ ಹೊರತೆಗೆದು ರಸಾಯನಿಕ ಹಾಕಿದರೆ ಡಾಲರ್ ಗೆ ಪರಿವರ್ತನೆ ಆಗುತ್ತದೆ ಎಂದು ಹೇಳಿದ್ದರು. ಅದೇ ರೀತಿ ಕುಮಾರ್ ಅನುಸರಿಸಿದಾಗ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com