

ಬಜ್ಪೆ(ಮಂಗಳೂರು): ಮಂಗಳೂರಿನಲ್ಲಿ ಪೆಟ್ರೋಲ್ ಬಾಂಬ್ ಗಳು ಪತ್ತೆಯಾಗಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ.
ಮಂಗಳೂರಿನ ಬಜ್ಪೆಯ ಗಂಜಿಮಠದ ಬಳಿಯ ದೂರವಾಣಿ ವಿನಿಮಯ ಕಾಂಪೌಂಡ್ ನಲ್ಲಿ ಎಂಟು ಪೆಟ್ರೋಲ್ ಬಾಂಬ್ ಗಳು ಹಾಗೂ ಎರಡು ಲಾಂಗ್ ಗಳು ಪತ್ತೆಯಾಗಿವೆ.
ಇದನ್ನು ಗಮನಿಸಿದ ಸ್ಥಳೀಯರು, ತಕ್ಷಣ ಬಜ್ಪೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.
ಇದೇ ನಗರದಲ್ಲಿ ಗಲಭೆ ಸೃಷ್ಠಿಸಲು ಪೆಟ್ರೋಲ್ ಬಾಂಬ್ ಗಳನ್ನು ಅಡಗಿಸಿ ಇಡಲಾಗಿತ್ತೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಮುರುಗನ್ ಅವರು ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದರು.