375 ರೌಡಿಗಳ ಮನೆ ಮೇಲೆ ಪೊಲೀಸ್ ದಾಳಿ

ದರೋಡೆ, ಸುಲಿಗೆ, ಗಮನ ಬೇರೆಡೆ ಸೆಳೆದು ದೋಚುವ ಪ್ರಕರಣಗಳ ಮೇಲೆ ನಿಯಂತ್ರಣ ಹೇರುವಂತೆ ಹಿರಿಯ ಅಧಿಕಾರಿ ಗಳೊಂದಿಗಿನ ಸಭೆಯಲ್ಲಿ ಗೃಹ ಸಚಿವರು ಖಡಕ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಪ್ರವೃತ್ತರಾದ ನಗರ ಪೊಲೀಸರು 375 ರೌಡಿಗಳು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ದರೋಡೆ, ಸುಲಿಗೆ, ಗಮನ ಬೇರೆಡೆ ಸೆಳೆದು ದೋಚುವ ಪ್ರಕರಣಗಳ ಮೇಲೆ ನಿಯಂತ್ರಣ ಹೇರುವಂತೆ ಹಿರಿಯ ಅಧಿಕಾರಿ ಗಳೊಂದಿಗಿನ ಸಭೆಯಲ್ಲಿ ಗೃಹ ಸಚಿವರು ಖಡಕ್ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಕಾರ್ಯಪ್ರವೃತ್ತರಾದ ನಗರ ಪೊಲೀಸರು 375 ರೌಡಿಗಳು, ಹಳೇ ಅಪರಾಧಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಹೆಚ್ಚುವರಿ ಪೊಲೀಸ್ ಆಯುಕ್ತ ರಾದ ಅಲೋಕ್ ಕುಮಾರ್ ಹಾಗೂ ಪಿ. ಹರಿಶೇಖರನ್ ನೇತೃತ್ವದಲ್ಲಿ ನಗರದ ಏಳು ಉಪ ವಿಭಾಗಗಳಲ್ಲಿ ಶುಕ್ರವಾರ ನಸುಕಿನಲ್ಲಿ ದರೋಡೆ ಕೋರರು, ಸರಗಳ್ಳರು, ರೌಡಿಗಳು ಈ ಹಿಂದೆ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವವರನ್ನು ವಶಕ್ಕೆ ಪಡೆದು ಎಚ್ಚರಿಸಿದ್ದಾರೆ. ಈ ಪೈಕಿ ನ್ಯಾಯಾಲಯದಿಂದ ಬಂಧನ ವಾರೆಂಟ್ ಇದ್ದರೂ, ತಲೆಮರೆಸಿಕೊಂಡು ಓಡಾಡುತ್ತಿದ್ದವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ಹಳೇ ಅಪರಾಧಿಗಳು ಮತ್ತೆ ಅದೇ ಅಪರಾಧಗಳಲ್ಲಿ ಭಾಗವಹಿಸದಂತೆ ತಡೆಯಲು ಹಾಗೂ ಅವರ ಮನಪರಿವರ್ತನೆಗಾಗಿ ಹೊಸ ಪ್ರಯೋಗಕ್ಕೆ ಮುಂದಾಗಿರುವ ನಗರ ಪೊಲೀಸರು, ಯೋಗಾಸನ, ವ್ಯಾಯಾಮದ ಜತೆಗೆ ಅವರು ವಾಸಿಸುವ ಪ್ರದೇಶಗಳಲ್ಲಿ ಅವರಿಂದಲೇ ಸ್ವಚ್ಛತಾ ಕಾರ್ಯ ನೇರವೇರಿಸಲು ಮುಂದಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com