ಶಿಕ್ಷಣ ಇಲಾಖೆಗೆ ಹೈಕೋರ್ಟ್ ಚಾಟಿ

ಸರ್ಕಾರಕ್ಕೆ ಚಾಟಿ ಬೀಸಿಲ್ಲ ಎಂದರೆ ಅವರೇನೂ ಮಾಡುವುದೇ ಇಲ್ಲ. ಚಾಟಿ ಬೀಸಬೇಕು ಎಂಬ ಆಸೆ ನಮಗಿಲ್ಲ. ಆದರೆ, ನಿಮಗೆ ಸುಲಭವಾಗಿ ಅರ್ಥವೇ ಆಗುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ ಪರಿ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್
Updated on: 

ಬೆಂಗಳೂರು: ಸರ್ಕಾರಕ್ಕೆ ಚಾಟಿ ಬೀಸಿಲ್ಲ ಎಂದರೆ ಅವರೇನೂ ಮಾಡುವುದೇ ಇಲ್ಲ. ಚಾಟಿ ಬೀಸಬೇಕು ಎಂಬ ಆಸೆ ನಮಗಿಲ್ಲ. ಆದರೆ, ನಿಮಗೆ ಸುಲಭವಾಗಿ ಅರ್ಥವೇ ಆಗುವುದಿಲ್ಲ. ಇದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಚಾಟಿ ಬೀಸಿದ ಪರಿ.

ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಮಾನ್ಯತೆ ಪಡೆಯಲು ಶೇ.25ರಷ್ಟು ವಿದ್ಯಾರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರಾಗಿರಬೇಕು ಎಂದು ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಸರ್ಕಾರ ಹೊರಡಿಸಿದ್ದ ಈ ಅಧಿಸೂಚನೆ ಪ್ರಶ್ನಿಸಿ ಕರ್ನಾಟಕ ರಾಜ್ಯ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿತ್ತು.

ವಿಚಾರಣೆ ನಡೆಸಿದ ನ್ಯಾ.ವೇಣುಗೋಪಾಲ ಗೌಡ ಅವರಿದ್ದ ರಜಾ ಕಾಲದ ಏಕಸದಸ್ಯ ಪೀಠ, ಶಿಕ್ಷಣ ಇಲಾಖೆಗೆ ಶಿಕ್ಷಣವೇ ಇಲ್ಲದಂತಾಗಿದೆ. ಸರ್ಕಾರಕ್ಕೆ ಇಲಾಖೆ ಮೇಲೆ ನಿಯಂತ್ರಣವೂ ಇಲ್ಲ. ಇಲಾಖೆಯಲ್ಲಿ ಈಗಾಗಲೇ ಅಗತ್ಯಕ್ಕೂ ಮೀರಿ ಸಿಬ್ಬಂದಿಯಿದ್ದಾರೆ. ಆದರೆ, ಅವರಿಂದ ಕೆಲಸ ಹೇಗೆ ಮಾಡಿಸಿಬೇಕೆಂದು ಇಲಾಖೆಗೆ ಗೊತ್ತಿಲ್ಲ. ಇತ್ತೀಚಿಗೆ ಶಾಲೆಗಳಲ್ಲಿ ನಡೆದ ಕೆಲವು ಅಹಿತಕರ ಘಟನೆಯಿಂದ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಪ್ರತಿ ಹಂತದಲ್ಲಿಯೂ ಕೋರ್ಟ್‍ನ ಆದೇಶವನ್ನೇ ಸರ್ಕಾರ ಅವಲಂಬಿಸುತ್ತದೆ.

ಸಮಸ್ಯೆ ಬಗೆಹರಿಸುವುದು ಇಲಾಖೆಯಲ್ಲಿನ ಅಧಿಕಾರಿಗಳ ಕರ್ತವ್ಯವಲ್ಲವೇ? ಅಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಎಲ್ಲರೂ ಐಎಎಸ್ ಮಾಡಿದವರೇ ಆಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿತು. ಅಧಿಕಾರಿಗಳು ಮಾಡುವ ತಪ್ಪಿಗೆ ಶಾಲಾ ಮಕ್ಕಳು ಹಾಗೂ ಪೋಷಕರು ನೋವು ಅನುಭವಿಸಬೇಕಿದೆ. ಅಧಿಕಾರಿಗಳಿಗೆ ಈ ಕಷ್ಟ ತಿಳಿಯುವುದೇ ಇಲ್ಲವೆಂದು ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿ, ಪ್ರಕರಣದ ವಿಚಾರಣೆಯನ್ನು ಜೂ.1ಕ್ಕೆ ಮುಂದೂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com