

ಚಾಮರಾಜನಗರ: ಕೇರಳ ಗಡಿಗೆ ಹೊಂದಿಕೊಂಡಿರುವ ಚಾಮರಾಜನಗರ ಜಿಲ್ಲೆಯಲ್ಲಿ ಕೇರಳ ರಾಜ್ಯದ ಲಾಟರಿ ಮಾರಾಟ ದಂಧೆ ಸದ್ದಿದ್ದಲ್ಲೇ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ತಾಲೂಕಿನ ಉಮ್ಮತ್ತೂರು ಬಸ್ ನಿಲ್ದಾಣದಲ್ಲಿ ಬುಧವಾರ ಕೇರಳ ರಾಜ್ಯದ ಮೇ 15ರಂದು ಡ್ರಾ ನಡೆಯುವ ಭಾಗ್ಯನಿಧಿ ಲಾಟರಿ ಹಾಗೂ ಮೇ 16ರ ಡ್ರಾ ನಡೆಯುವ ಕಾರುಣ್ಯ ಲಾಟರಿಗಳು ದೊರೆತಿವೆ.
ಇವುಗಳ ಬೆಲೆ ರು.30, ರು.50. ರಾಜ್ಯದಲ್ಲಿ 2007ರಿಂದ ಸಂಪೂರ್ಣವಾಗಿ ಲಾಟರಿ ನಿಷೇಧ ಮಾಡಿದ್ದರೂ ಚಾಮರಾಜನಗರದಲ್ಲಿ ಮಾತ್ರ ಹೊರ ರಾಜ್ಯಗಳ ಲಾಟರಿಗಳು ಅಲ್ಲಲ್ಲಿ ಮಾರಾಟವಾಗುತ್ತಿವೆ.
ತಮಿಳುನಾಡು ಹಾಗೂ ಕೇರಳಕ್ಕೆ ಹೋಗುವ ಮಂದಿ ಅಲ್ಲಿದ್ದ ಟಿಕೆಟ್‍ಗಳನ್ನು ತಂದು ಇಲ್ಲಿ ಮಾರಾಟ ಮಾಡುತ್ತಿದ್ದಾರೆ.