ಏನೂ ಆಗದಿದ್ದಾಗ ವಕೀಲನಾದೆ: ಸಿಎಂ ಸಿದ್ದರಾಮಯ್ಯ

ನಮ್ಮಪ್ಪ ನನ್ನನ್ನು ಡಾಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಆದರೆ, ನನಗೆ ಪಿಯುಸಿಯಲ್ಲಿ ಸರಿಯಾದ ಅಂಕ ಬರಲಿಲ್ಲ...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on: 
ಬೆಂಗಳೂರು: ನಮ್ಮಪ್ಪ ನನ್ನನ್ನು ಡಾಕ್ಟರ್ ಮಾಡಬೇಕು ಎಂದುಕೊಂಡಿದ್ದರು. ಆದರೆ, ನನಗೆ ಪಿಯುಸಿಯಲ್ಲಿ ಸರಿಯಾದ ಅಂಕ ಬರಲಿಲ್ಲ. ನಂತರ ಬಿಎಸ್‍ಸಿ ಓದಿದ ಮೇಲೆ ಎಂಎಸ್‍ಸಿ ಬಾಟನಿ ಓದಬೇಕು ಅಂದುಕೊಂಡೆ. 
ಆದರೆ, ಆ ಸೀಟು ಕೂಡಾ ಸಿಗಲಿಲ್ಲ. ನಂತರ ಕೆಲವು ವರ್ಷ ವ್ಯವಸಾಯ ಮಾಡಿ, ಅದೂ ಸಾಧ್ಯವಿಲ್ಲ ಎನ್ನಿಸಿದಾಗ ವಕೀಲನಾದೆ. ನನಗೆ ಯಾವ ವೃತ್ತಿಯೂ ದೊರೆಯದಿದ್ದಾಗ ವಕೀಲ ವೃತ್ತಿಗೆ ಬಂದೆ. 
ಇಲ್ಲಿಯೂ ನನ್ನ ತರಹದವರು ಇರಬಹುದೇನೋ? ಎಂದು ವಕೀಲರ ಸಂಘ ಸಿವಿಲ್ ಕೋರ್ಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿ ನಗೆಗಡಲು ಹರಿಸಿದರು.
ಇದೇ ವೇಳೆ, ಸೆಟ್ರೆಲ್ ಕಾಲೇಜು ಆವರಣದಲ್ಲಿರುವ ವಿದ್ಯಾರ್ಥಿ ನಿಲಯವನ್ನು ವಕೀಲರ ಹಾಸ್ಟೆಲ್ ಗಾಗಿ ಬಳಸಿಕೊಳ್ಳಳು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com