ಚಿಕ್ಕೋಡಿ: ತಾಲೂಕಿನ ಜೋಡಕುರಳಿ ಗ್ರಾಮದಲ್ಲಿ ಎಮ್ಮೆ ಮೇಯಿಸಲು ಹೋಗಿದ್ದ ಬಾಲಕರಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ.
ಮೃತಪಟ್ಟವರನ್ನು ಗ್ರಾಮದ ಅಜಿತ ಚಂದ್ರಕಾಂತ ಖದ್ದಿ(9) ಹಾಗೂ ಮಾಳು ಸಿದ್ದಪ್ಪ ಖದ್ದಿ(11) ಎಂದು ಗುರುತಿಸಲಾಗಿದೆ. ಬಾವಿಯ ಹತ್ತಿರ ಎಮ್ಮೆ ಮೇಯಿಸುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಒಬ್ಬ ಬಾಲಕ ಬಾವಿಗೆ ಬಿದ್ದಿದ್ದು, ಆತನನ್ನು ರಕ್ಷಿಸಲು ಹೋದ ಇನ್ನೊಬ್ಬ ಬಾಲಕನೂ ಬಾವಿಯಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಇಬ್ಬರೂ ಬಾಲಕರು ನೀರು ಪಾಲದದ್ದನ್ನು ನೋಡಿದ ಮತ್ತೊಬ್ಬ ಬಾಲಕ ಮನೆಗೆ ಓಡಿ ಹೋಗಿ ಪಾಲಕರಿಗೆ ವಿಷಯ ತಿಳಿಸಿದ್ದಾನೆ. ಚಿಕ್ಕೋಡಿ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.