ಹುಕ್ಕೇರಿ: ಗಂಡನ ಮನೆ ಒಲ್ಲೆ ಎಂದ ಮಗಳನ್ನು ಕೊಲೆ ಮಾಡಿ ಶವವನ್ನು ಗೋಣಿ ಚೀಲದಲ್ಲಿ ತುಂಬಿ ಘಟಪ್ರಭಾ ನದಿಯಲ್ಲಿ ಎಸೆದಿದ್ದ ಪ್ರಕರಣವನ್ನು ಐದು ವರ್ಷಗಳ ನಂತರ ಹುಕ್ಕೇರಿ ಪೊಲೀಸರು ಭೇದಿಸಿದ್ದಾರೆ.
ತಂದೆ ಸಿದ್ರಾಮ ಬಸವಣ್ಣಿ ಮುಂಗಾರಿಯನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಹುಕ್ಕೇರಿ ತಾಲೂಕಿನ ಸುಲ್ತಾನಪೂರ ಗ್ರಾಮದ ಲಕ್ಷ್ಮೀ ಅಶೋಕ ಶಿಗಿಹಳ್ಳಿ (20) ಎಂಬಾತಳನ್ನು ಗೋಕಾಕ ತಾಲೂಕಿನ ಮರಡಿ ಶಿವಾಪೂರ ಗ್ರಾಮದ ಅಶೋಕ ಶಿಗಿಹಳ್ಳಿ ಎಂಬವನಿಗೆ ಮದುವೆ ಮಾಡಿಕೊಡಲಾಗಿತ್ತು.
ಆದರೆ ಪತಿ ಜತೆ ಸಂಸಾರ ಮಾಡಲ್ಲ. ಎಷ್ಟೇ ಬುದ್ಧಿವಾದ ಹೇಳಿದರೂ ಕಿವಿಗೊಡದ ಹಿನ್ನೆಲೆಯಲ್ಲಿ ಲಕ್ಷ್ಮಿಯನ್ನು ಬಡಿಗೆಯಿಂದ ಹೊಡೆದು ಕೊಲೆ ಮಾಡಲಾಗಿತ್ತು.