

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆಯ ಭಗವತಿ ಗ್ರಾಮದ ಬಳಿ ಟಾಟಾ ಮ್ಯಾಜಿಕ್ ವಾಹನ ಹಾಗೂ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ)ಯ ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 20 ದಿನದ ಮಗು ಸೇರಿ ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇಂದು ಮಧ್ಯಾಹ್ನ ಬಾಗಲಕೋಟೆಯಿಂದ ವಾಪಸ್ ಬರುತ್ತಿದ್ದ ಟಾಟಾ ಮ್ಯಾಜಿಕ್‌ಗೆ ಮುದ್ದೇಬಿಹಾಳದಿಂದ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಸಿದೆ. ಅಪಘಾತದ ತೀವ್ರತೆಗೆ ಟಾಟಾ ಮ್ಯಾಜಿಕ್ ಸಂಪೂರ್ಣ ನಜ್ಜುಗುಜ್ಜಾಗಿದೆ.
ಮೃತರನ್ನು ಟಾಟಾ ಮ್ಯಾಜಿಕ್ ಚಾಲಕ ಮಂಜಪ್ಪ(24), 20 ದಿನದ ಮಗು ಅಪ್ಪಣ್ಣ, ಬಾಣಂತಿ ವೆಂಕವ್ವ(25) ಅತ್ತೆ ಯಲ್ಲವ್ವ(60), ಪಾರ್ವತೆವ್ವ(65) ಹಾಗೂ ರಾಮಣ್ಣ(25) ಎಂದು ಗುರುತಿಸಲಾಗಿದೆ.
ಮೃತರ ಪೈಕಿ ಐವರು ಬೈರಮಟ್ಟಿ ಗ್ರಾಮದ ನಿವಾಸಿಗಳಾಗಿದ್ದು, ಮತ್ತೊಬ್ಬ ಮಹಿಳೆ ಹಳ್ಳೂರು ಗ್ರಾಮದ ನಿವಾಸಿ ಎನ್ನಲಾಗಿದೆ.