

ಕೃಷ್ಣರಾಜಪುರ: ವರ್ತೂರು ಪೊಲಿಸ್ ಠಾಣೆ ವ್ಯಾಪ್ತಿಯ ಬಳಗೆರೆ ಸಮೀಪದ ನೀಲಗರಿ ತೋಪಿನಲ್ಲಿ ಅಪರಿಚಿತ ಮಹಿಳೆಯ ಕತ್ತು ಬಿಗಿದು ಕೊಲೆ ಮಾಡಲಾಗಿದೆ.
ಲಿ ಬಣ್ಣದ ಚೂಡಿದಾರ್ ಧರಿಸಿರುವ ಸುಮಾರು 32 ವರ್ಷದ ಮಹಿಳೆಯ ಬಾಯಿಗೆ ದುಷ್ಕರ್ಮಿಗಳು ಬಟ್ಟೆ ತುರುಕಿ ವೇಲ್‍ನಿಂದ ಕತ್ತು ಬಿಗಿದು ಕೊಲೆ ಮಾಡಿದ್ದಾರೆ. ದನ ಮೇಯಿಸುವವರು ಶವ ಬಿದ್ದಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಪರೀಶೀಲನೆ ನಡೆಸಿದ ವರ್ತೂರು ಪೊಲೀಸರು, ಮಹಿಳೆ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಮೇಲ್ನೊಟಕ್ಕೆ ಕಂಡು ಬಂದಿಲ್ಲ. ವೈದ್ಯಕೀಯ ಪರೀಕ್ಷೆ ನಂತರವೇ ಕೊಲೆಗೆ ಕಾರಣ ತಿಳಿಯಲಿದೆ ಎಂದು ಹೇಳಿದ್ದಾರೆ.
ಸುತ್ತ ಮುತ್ತಲಿನ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯರು ನಾಪತ್ತೆ ಯಾಗಿರುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.