ನಾಲ್ಕು ದಶಕಗಳ ಹೋರಾಟ ಸಾರ್ಥಕ

ನಿವೃತ್ತ ಸೈನಿಕರ ಮತ್ತು ಹುತಾತ್ಮ ಯೋಧರ ಕುಟುಂಬದ 40 ವರ್ಷಗಳ ಹೋರಾಟಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಂತಾಗಿದೆ. ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ಒಪಿ) ಯೋಜನೆ ಘೋಷಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ...
ಸಂಸದ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
ಸಂಸದ ರಾಜೀವ್ ಚಂದ್ರಶೇಖರ್ (ಸಂಗ್ರಹ ಚಿತ್ರ)
Updated on: 

ಬೆಂಗಳೂರು: ನಿವೃತ್ತ ಸೈನಿಕರ ಮತ್ತು ಹುತಾತ್ಮ ಯೋಧರ ಕುಟುಂಬದ 40 ವರ್ಷಗಳ ಹೋರಾಟಕ್ಕೆ ಕೊನೆಗೂ ಸಾರ್ಥಕತೆ ಸಿಕ್ಕಂತಾಗಿದೆ. ಒಂದು ಶ್ರೇಣಿ ಒಂದು ಪಿಂಚಣಿ (ಒಆರ್ ಒಪಿ) ಯೋಜನೆ ಘೋಷಣೆ ಮಾಡಿರುವ ಕೇಂದ್ರ ಸರ್ಕಾರಕ್ಕೆ ಸಂಸದ ರಾಜೀವ್ ಚಂದ್ರಶೇಖರ್ ಅಭಿನಂದನೆ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಭಾರತದಲ್ಲಿ ಕೇಂದ್ರ ಸರ್ಕಾರ ಕೈಗೊಂಡ ನಿರ್ಧಾರಗಳಲ್ಲಿ ಇದೊಂದು ಪ್ರಮುಖ ವಿಚಾರವಾಗಿದೆ. ನಿವೃತ್ತ ಮತ್ತು ಹುತಾತ್ಮ ಯೋಧರ ಕುಟುಂಬದ ಸುದೀರ್ಘ ಕಾಲದ ನಿರೀಕ್ಷೆ ಸಾಕಾರಗೊಂಡಿದೆ. ಈ ಮೂಲಕ ಯೋಧರ ಸೇವೆ, ತ್ಯಾಗ ಮತ್ತು ಬಲಿದಾನಗಳಿಗೆ ದೇಶ ಗೌರವ ಸಲ್ಲಿಸಿದಂತಾಗಿದೆ. ಇದಕ್ಕೆ ಕಾರಣರಾದ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ಪರಿಕ್ಕರ್, ವಿತ್ತಸಚಿವ ಅರುಣ್ ಜೇಟ್ಲಿ ಅವರಿಗೆ ಧನ್ಯವಾದ ಹೇಳಿದ್ದಾರೆ.

2006ರಲ್ಲಿ ನಿವೃತ್ತ ಯೋಧರು ತಮ್ಮ ಪದಕಗಳನ್ನು ಹಿಂತಿರುಗಿಸಿದ ಕರಾಳ ದಿನದಿಂದ 9 ವರ್ಷಗಳ ನಿರೀಕ್ಷೆ, ಪರಿಶ್ರಮ ಮತ್ತು ಹೋರಾಟಕ್ಕೆ ವೈಯಕ್ತಿಕವಾಗಿ ಜಯ ಸಿಕ್ಕಂತಾಗಿದೆ. ಸಕ್ರಿಯ ರಾಜಕಾರಣದಲ್ಲಿ ಸೇರಿಕೊಂಡ ನಂತರ ಕೈಗೆತ್ತಿಕೊಂಡ ವಿಷಯಗಳಲ್ಲಿ ಒ.ಆರ್.ಒ.ಪಿ ಮೊದಲಿನದು. ಈ ಹಿನ್ನೆಲೆಯಲ್ಲಿ ಸಹಜವಾಗಿ ನನ್ನ ಮಟ್ಟಿಗೆ ಅತ್ಯಂತ ಹೆಮ್ಮೆಯ ಮತ್ತು ಮಹತ್ವದ ದಿನವಾಗಿದೆ ಎಂದು ತಿಳಿಸಿದ್ದಾರೆ.

ದೇಶದಲ್ಲಿ ಹಿಂದೆಂದೂ ನಡೆಯದ ಅತ್ಯಂತ ನೋವಿನ ಘಟನೆಯಾದ, ಯೋಧರು ತಮ್ಮ ಪದಕಗಳನ್ನು ಸೇನಾಪಡೆಗಳ ದಂಡನಾಯಕ ರಾಷ್ಟ್ರಪತಿಗಳಿಗೆ ಹಿಂತಿರುಗಿಸಿದ ಸಂದರ್ಭಕ್ಕೆ ಸಾಕ್ಷಿಯಾಗಿದೆ. ನಿವೃತ್ತ ಯೋಧರಿಗೆ ಸಂಬಂಧಿಸಿದ ವಿಷಯಗಳ ಸಂಬಂಧ ಸಾರ್ವಜನಿಕ ಜೀವನದಲ್ಲಿ ರಕ್ಷಣಾ ಸಚಿವ ಪರಿಕ್ಕರ್ ಆಳವಾದ ತಿಳಿವಳಿಕೆ ಮತ್ತು ಕಾಳಜಿ ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

 ಸಶಸ್ತ್ರ ಸೇನೆಯ, ನಿವೃತ್ತ ಯೋಧರ ಮತ್ತು ಅವರ ಕುಟುಂಬದವರ ಇನ್ನಿತರ ಸಮಸ್ಯೆಗಳ ಪರಿಹಾರದ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಿದೆ. ಒ.ಆರ್.ಒ.ಪಿ.ಯಲ್ಲಿ ಇನ್ನೂ ಕೆಲವು ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸಲು ಮುಂದಾಗುವುದಾಗಿ ನಿವೃತ್ತ ಯೋಧರಿಗೆ ಭರವಸೆ ನೀಡಿದ್ದಾರೆ. ಈ ಸಂಬಂಧ ರಚಿಸಲಾಗಿರುವ ಏಕವ್ಯಕ್ತಿ ಸಮಿತಿ ಮತ್ತು ರಕ್ಷಣಾ ಸಚಿವರೊಡನೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದು. ಆದ್ದರಿಂದ ನಿವೃತ್ತ ಯೋಧರು ಕೈಗೊಂಡಿರುವ ಉಪವಾಸ ಸತ್ಯಾಗ್ರಹ ಮತ್ತು ಎಲ್ಲ ರೀತಿಯ ಪ್ರತಿಭಟನೆಗಳನ್ನು ಕೂಡಲೇ ಕೈಬಿಡಬೇಕು ಎಂದು ಮನವಿ ಮಾಡಿದ್ದಾರೆ. ಸಂಭ್ರಮಾಚರಣೆ: ಸುದ್ದಿ ಪ್ರಕಟವಾಗು ತ್ತಿದ್ದಂತೆ ಬೆಂಗಳೂರಿನ ಹುತಾತ್ಮರ ಸ್ಮಾರಕದ ಬಳಿ ನೆರೆದ ಯೋಧರ ಕುಟುಂಬ ವರ್ಗ ಮತ್ತು ಯೋಜನೆ ಜಾರಿಗೆ ಆಗ್ರಹಿಸಿದ ಹೋರಾಟಗಾರರು ಮೊಂಬತ್ತಿ ಬೆಳಗಿ ಸಂಭ್ರಮ ಆಚರಿಸಿದರು.

ಧೀರ್ಘ ಕಾಲದಿಂದ ನನೆಗುದಿಯಲ್ಲಿದ್ದ ಏಕ ಶ್ರೇಣಿ ಏಕ ಪಿಂಚಣಿ ಯೋಜನೆ ಅನುಷ್ಠಾನದ ಸಮಸ್ಯೆಯನ್ನು ಬಗೆಹಿಸಿದ ಪ್ರಧಾನಿಯವರಿಗೆ ದೇಶವಾಸಿಗಳ ಜತೆ ಸೇರಿ ಧನ್ಯವಾದ. ಎಲ್ಲ ಟೀಕೆಗಳು ಮತ್ತು ರಾಜಕೀಯ ವಿರೋಧಗಳನ್ನು ಇದು ನಿಶ್ಯಬ್ದವಾಗಿಸಿದೆ.

ಅನಂತಕುಮಾರ್, ಕೇಂದ್ರ ಸಚಿವ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com