

ಬೆಂಗಳೂರು: ಸಾಲಬಾಧೆಗೆ ಸಿಲುಕಿ ಭಾನುವಾರ ಮೂವರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಡ್ಯದ ಮಾದಾಪುರ ಗ್ರಾಮದ ಸೋಮೇಗೌಡ ಅಲಿಯಾಸ್ ಲೋಕೇಶ್ (50), ಹಿರೇಕೆರೂರಿನ ಅರಳಿಕಟ್ಟಿಯ ಭರಮಪ್ಪ ಬಸಪ್ಪ ಬಾಳಣ್ಣನವರ (55), ವಿಜಯಪುರ ಜಿಲ್ಲೆ ಅಡವಿಸಂಗಾಪುರ ಗ್ರಾಮದ ಮಾಳಪ್ಪ ಜಟ್ಟೆಪ್ಪ ವಾಡೇದ (34) ಸಾವಿಗೆ ಶರಣಾದವರು. ಲೋಕೇಶ್ ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಕಬ್ಬು ಬೆಳೆದಿದ್ದರು.
ರು.3.5 ಲಕ್ಷ ಸಾಲವಿತ್ತು. ಭರಮಪ್ಪ ತಮ್ಮ ಒಂದೂವರೆ ಎಕರೆಯಲ್ಲಿ ಬೆಳೆದಿದ್ದ ಫಸಲು ನಾಶವಾಗಿದೆ. ರು.2 ಲಕ್ಷ ಸಾಲವಿತ್ತು. ಮಾಳಪ್ಪ ಅವರ ತೊಗರಿ ಬೆಳೆ ನಾಶವಾಗಿತ್ತು, ಲಕ್ಷಾಂತರ ರುಪಾಯಿ ಸಾಲವಿತ್ತು.