

ಬೆಂಗಳೂರು: ಆರ್‍ಎಸ್‍ಎಸ್- ಬಿಜೆಪಿ ವಾರ್ಷಿಕ ಸಮನ್ವಯ ಸಭೆ ಸೋಮವಾರ ನಡೆಯಿತು. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ಖಾಸಗಿ ಹೋಟೆಲ್‍ನಲ್ಲಿ ನಡೆದ ಸಭೆಯಲ್ಲಿ ರಾಷ್ಟ್ರೀಯ ಸಂಘಸಂಸ್ಥೆಗಳ ಅಂಗ ಸಂಸ್ಥೆಗಳ ಕಾರ್ಯಚಟುವಟಿಕೆಗಳು, ಮುಂದಿನ ಕಾರ್ಯಕ್ರಮಗಳ ಪ್ರಸ್ತಾವನೆ ಮತ್ತು ಚರ್ಚೆ ನಡೆಯಿತಲ್ಲದೇ ಬಿಜೆಪಿಯ ಭವಿಷ್ಯ- ವರ್ತಮಾನದ ಚಟುವಟಿಕೆ ಕುರಿತಂತೆಯೂ ವಿಚಾರ ಮಂಡನೆಯಾಯಿತು.
ಇದೊಂದು ವಾರ್ಷಿಕ ಸಭೆ. ಆರ್‍ಎಸ್ ಎಸ್‍ನ ಸಹ ಸಂಘಟನೆಗಳು ಕಳೆ ದೊಂದು ವರ್ಷದಲ್ಲಿ ಏನೆಲ್ಲಾ ಚಟುವಟಿಕೆ ನಡೆಸಬೇ ಕೆಂಬ ಗುರಿ ಹಾಕಿಕೊಂಡಿತ್ತು, ನಡೆದು ಬಂದ ದಾರಿ,
ಭವಿಷ್ಯದಲ್ಲಿ ಕಾರ್ಯಕ್ರಮದ ಕುರಿತು ತಿಳಿಸುವ ಒಂದು ಸಭೆಯಾಗಿದೆ. ಇಲ್ಲಿ ಬಿಜೆಪಿಯ 1 ವರ್ಷದಲ್ಲಿ ನಡೆದುಬಂದ ಹಾದಿ, ಮುಂದಿನ ಚಟುವಟಿಕೆ ಬಗ್ಗೆಯೂ ಪ್ರಸ್ತಾ ಪವಾಯಿತು ಎನ್ನಲಾಗಿದೆ. ಆರ್‍ಎಸ್‍ಎಸ್‍ನ ಸಹ ಸಂಘಟನೆಗಳ ಕಾರ್ಯಕ್ರಮಗಳಿಗೆ ಬಿಜೆಪಿ ನಾಯಕರ ಸಹಕಾರ ಕೋರಲಾಯಿತು. ಅದೇ ರೀತಿ ಬಿಜೆಪಿಯು ಮುಂದಿನ ಒಂದು ವರ್ಷದ ಚುನಾವಣೆ ಅಥವಾ ವಿವಿಧ ಸಂದರ್ಭಗಳಲ್ಲಿ ಕೈಗೊಳ್ಳಬೇಕಾದ ರಾಜಕೀಯ ನಿಲುವುಗಳ ಬಗ್ಗೆ ಚರ್ಚಿಸಲಾಯಿತು.
ಪ್ರಮುಖವಾಗಿ ಬಿಬಿಎಂಪಿ ಮತ್ತು ಕಳಸಾ ಬಂಡೂರಿ ಹೋರಾಟದ ಕುರಿತಾಗಿ ಯೂ ಬಿಜೆಪಿ ನಾಯಕರು ಅನೌಪಚಾರಿಕವಾಗಿ ಆರ್‍ಎಸ್‍ಎಸ್ ಪ್ರಮುಖರಿಗೆ ಮಾಹಿತಿ ನೀಡಿದ್ದಾರೆ. ಅದೇ ರೀತಿ ಮುಂಬರುವ ಬಿಜೆಪಿ ರಾಜ್ಯಾ ಧ್ಯಕ್ಷರ ಚುನಾವಣೆ, ಅದಕ್ಕೂ ಮುನ್ನ ಮಂಡಲ ಹಂತದಿಂದ ಚುನಾವಣೆ ಚಟುವಟಿಕೆ, ಚುನಾವಣಾಧಿಕಾರಿ ನೇಮಕ ಬಗ್ಗೆ ಆರ್‍ಎಸ್‍ಎಸ್ ಮುಖಂಡರು ಮಾರ್ಗ ದರ್ಶನ ಮಾಡಿದ್ದಾರೆಂದು ತಿಳಿದುಬಂದಿದೆ.