ಅಕ್ಟೋಬರ್ ನಲ್ಲಿ ಸಚಿವ ಸದಾನಂದ ಗೌಡ ಪುತ್ರ ಕಾರ್ತಿಕ್ ಗೌಡ ವಿವಾಹ?

ಕೇಂದ್ರ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡರ ವಿವಾಹ ದಿನಾಂಕವನ್ನು ಅಕ್ಟೋಬರ್ 29 ಹಾಗೂ 30 ರಂದು...
ಕಾರ್ತಿಕ್ ಗೌಡ
ಕಾರ್ತಿಕ್ ಗೌಡ
Updated on

ಬೆಂಗಳೂರು: ಕೇಂದ್ರ ಸಚಿವ ಸದಾನಂದ ಗೌಡರ ಪುತ್ರ ಕಾರ್ತಿಕ್ ಗೌಡರ ವಿವಾಹ ದಿನಾಂಕವನ್ನು ಅಕ್ಟೋಬರ್ 29 ಹಾಗೂ 30 ರಂದು ನಿಗದಿಪಡಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಕೊಡಗಿನ ಕುಶಾಲ ನಗರದ ಸಹಕಾರಿ ಭವನದಲ್ಲಿ ಅಕ್ಟೋಬರ್ 29 ಮತ್ತು 30 ವಿವಾಹ ನಡೆಯಲಿದೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ಆಗಸ್ಟ್ ನಲ್ಲಿ ಕೊಡಗಿನ ಕುಶಾಲನಗರದ ಉದ್ಯಮಿ ಕೆ. ನಾಣಯ್ಯನವರ ಪುತ್ರಿ ಸ್ವಾತಿ ಅವರೊಂದಿಗೆ ಕಾರ್ತಿಕ್ ಗೌಡರ ವಿವಾಹ ನಿಶ್ಚಿತಾರ್ಥ ನಡೆದಿತ್ತು.

ಈ ವೇಳೆ ಚಿತ್ರ ನಟಿ ಮೈತ್ರಿಯಾ ಗೌಡ, ಕಾರ್ತಿಕ್ ಗೌಡ ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರವೆಸಗಿದ್ದಾರೆಂದು ಆರೋಪಿಸಿ ದೂರು ದಾಖಲಿಸಿದ್ದರು. ಬೆಂಗಳೂರಿನ ಆರ್ ಟಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಮೈತ್ರಿಯಾ ಗೌಡ, ಕೌಟುಂಬಿಕ ನ್ಯಾಯಾಲಯದಲ್ಲಿ ವಿವಾಹ ತಡೆಗೆ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ವಿವಾಹ ದಿನಾಂಕವನ್ನು ಮುಂದೂಡಲಾಗಿತ್ತು.

ಆದರೆ, ಮೈತ್ರಿಯಾ ಗೌಡ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಕೌಟುಂಬಿಕ ನ್ಯಾಯಾಲಯ ವಿವಾಹ ತಡೆಗೆ ನಿರಾಕರಿಸಿತ್ತು. ಈ ಹಿನ್ನಲೆಯಲ್ಲಿ ಈಗ ಕಾರ್ತಿಕ್ ಗೌಡ ಮತ್ತು ಸ್ವಾತಿ ಅವರ ವಿವಾಹ ದಿನಾಂಕವನ್ನು ನಿಗದಿಗೊಳಿಸಲಾಗಿದ್ದು, ಮದುವೆ ಸಿದ್ಧತೆಗಳು ಆರಂಭಗೊಂಡಿವೆ ಎಂದು ತಿಳಿದು ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com